Asianet Suvarna News Asianet Suvarna News

Underwater Flag Hoisting : ಲಕ್ಷದ್ವೀಪದಲ್ಲಿ ನೀರೊಳಗೆ ಧ್ವಜಾರೋಹಣ ಮಾಡಿದ ಸ್ಕೂಬಾ ಟೀಮ್!

ನೀರೊಳಗೆ ರಾಷ್ಟ್ರಧ್ವಜ ಹಾರಿಸಿದ ಸ್ಕೂಬಾ ಟೀಮ್
ನೀರೊಳಗೆ ಧ್ವಜ ಹಾರಿಸಲು 7 ದಿನಗಳ ಕಾಲ ಅಭ್ಯಾಸ ನಡೆಸಿದ್ದ ಟೀಮ್‌
ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಬೆಂಬಲದಲ್ಲಿ ನಡೆದ ಕಾರ್ಯಕ್ರಮ

Underwater Flag hoisting by Atoll Scuba Team of UT of Lakshadweep promoted by administrator of Lakshadweep san
Author
Bengaluru, First Published Jan 27, 2022, 8:14 PM IST

ನವದೆಹಲಿ(ಜ. 27): ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷವಾದ ಸಂಭ್ರಮವನ್ನು 73ನೇ ಗಣರಾಜ್ಯೋತ್ಸವದಲ್ಲಿ (73rd Republic Day ) ಸಂಭ್ರಮದಿಂದ ಆಚರಿಸಲಾಯಿತು. ಹಲವಾರು ಮೊದಲುಗಳುಈ ಬಾರಿ ಗಣರಾಜ್ಯೋತ್ಸವದಲ್ಲಿದ್ದವು. ಅದರಲ್ಲೂ ಕೇಂದ್ರಾಡಳಿತ ಪ್ರದೇಶ (Union Territory) ಲಕ್ಷದ್ವೀಪದಲ್ಲಿ (Lakshadweep ) ಸರ್ಕಾರದ ಪ್ರಾಯೋಜಕತ್ವದಲ್ಲಿ ನೀರಿನ ಆಳದಲ್ಲಿ ಧ್ವಜಾರೋಹಣ (Underwater Flag hoisting) ಮಾಡಿದ ರೋಮಾಂಚಕ ದೃಶ್ಯಗಳನ್ನು ಅಟೊಲ್ ಸ್ಕೂಬಾ (Atoll Scuba Team) ಟೀಮ್ ಬಿಡುಗಡೆ ಮಾಡಿದೆ. ನೀರಿನ ಆಳದಲ್ಲಿ ಧ್ವಜಾರೋಹಣ ಮಾಡುವ ನಿಟ್ಟಿನಲ್ಲಿ ಸ್ಕೂಬಾ ಟೀಮ್ ಏಳು ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಿತ್ತು.

ಈ ವರ್ಷದ ಗಣರಾಜ್ಯೋತ್ಸವ ಸಂಭ್ರಮವನ್ನು ಕೋವಿಡ್ ಕಾರಣಗಳಿಂದಾಗಿ ಸಾಕಷ್ಟು ಕಡಿಮೆ ಮಾಡಲಾಗಿತ್ತು. ಹಾಗಿದ್ದರೂ, 73ನೇ ಗಣರಾಜ್ಯೋತ್ಸವವನ್ನು ರಾಜಪಥದಲ್ಲಿ (Rajpath) ಸೇನಾಶಕ್ತಿ ಹಾಗೂ ರೋಮಾಂಚಕ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶನ ಮಾಡುವ ಭವ್ಯವಾದ ಮೆರವಣಿಗೆಯೊಂದಿಗೆ ಆಚರಣೆ ಮಾಡಿತು. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯೋಧರ ಸ್ಮಾರಕವಾದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವಮೂಲಕ ಹುತಾತ್ಮರಿಗೆ ಗೌರವ ಸಲ್ಲಿಕೆ ಮಾಡುವುದರೊಂದಿಗೆ ಈ ಬಾರಿಯ ಸಮಾರಂಭವು ಆರಂಭ ಕಂಡಿತ್ತು.

ಗಣರಾಜ್ಯೋತ್ಸವ ಸಂಭ್ರಮದಲ್ಲಿ ಈ ಬಾರಿ ಸಾಕಷ್ಟು ಹೊಸ ಅಂಶಗಳು ಕಾಣಸಿಗುವುದರೊಂದಿಗೆ ದಕ್ಷಿಣ ಲಕ್ಷದ್ವೀಪದ ಸಮುದ್ರದಲ್ಲಿ ಅಟೊಲ್ ಸ್ಕೂಬಾ ಟೀಮ್ ನೀರೊಳಗೆ ಧ್ವಜಾರೋಹಣ ಮಾಡುವ ಮೂಲಕ ಗಮನಸೆಳೆಯಿತು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗಿದ್ದು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿವೆ. ಸ್ಕೂಬಾ ಟೀಮ್ ನ ಸಾಹಸ ಹೇಗಿತ್ತು ಅನ್ನೋದರ ವಿಡಿಯೋ..
 


ದೆಹಲಿಯಲ್ಲಿ (New Delhi) ಗಣರಾಜ್ಯೋತ್ಸವದ ಸಂಭ್ರಮದ ಬಗ್ಗೆ ಹೇಳುವುದಾದರೆ, ಈ ಬಾರಿ ಕೋವಿಡ್ ಕಾರಣಗಳಿಂದಾಗಿ ಹೆಚ್ಚಿನ ಜನರಿಗೆ ನೇರವಾಗಿ ಪರೇಡ್ ವೀಕ್ಷಣೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. 15 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಿಗೆ ಮಾತ್ರವೇ ಈ ಬಾರಿ ಪರೇಡ್ ಗೆ ಅವಕಾಶ ಕಲ್ಪಿಸಲಾಗಿತ್ತು. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರಾಜಪಥಕ್ಕೆ ಪ್ರವೇಶ ಇದ್ದಿರಲಿಲ್ಲ. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಕುರ್ಚಿಗಳನ್ನು ದೂರದಲ್ಲಿ ಇರಿಸಲಾಗಿತ್ತು. ಭಾಗವಹಿಸುವವರು "ಆಜಾದಿ ಕಾ ಅಮೃತ್ ಮಹೋತ್ಸವ" ಎಂದು ಮುದ್ರಿಸಲಾದ ಬಿಳಿ ಕ್ಯಾಪ್ ಅನ್ನು ಸಹ ಪಡೆದರು.

Republic Day: 75 ವಿಮಾನಗಳಿಂದ ಮನಮೋಹಕ ಪ್ರದರ್ಶನ, ಆಗಸದಿಂದಲೇ ನೇರ ಪ್ರಸಾರ
ಗುಪ್ತಚರ ಸಂಸ್ಥೆಗಳ ನೀಡಿದ ಭಯೋತ್ಪಾದನೆಯ ಎಚ್ಚರಿಕೆಯ ಕಾರಣದಿಂದದ ಅಹಿತಕರ ಘಟನೆಯನ್ನು ತಡೆಯಲು ನಗರ ಪೊಲೀಸರು ನೆರೆಯ ರಾಜ್ಯಗಳ ಪೊಲೀಸರ ಸಮನ್ವಯದೊಂದಿಗೆ ರಾಷ್ಟ್ರ ರಾಜಧಾನಿಯ ಗಡಿಗಳನ್ನು ಬಿಗಿಗೊಳಿಸಿದ್ದರಿಂದ ದೆಹಲಿಯನ್ನು ಗಣರಾಜ್ಯೋತ್ಸವ ಸಂಭ್ರಮದ ವೇಳೆ ಭಾರೀ ಭದ್ರತೆ ಅಡಿಯಲ್ಲಿ ತರಲಾಗಿತ್ತು. ದೆಹಲಿಯಲ್ಲಿ ಗಣರಾಜ್ಯೋತ್ಸವದ ಭದ್ರತಾ ಕರ್ತವ್ಯಗಳಿಗಾಗಿ 27,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಮಾತ್ರವಲ್ಲದೆ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ತೀವ್ರಗೊಳಿಸಲಾಗಿತ್ತು.

ಬದಲಾದ ವಿನ್ಯಾಸದ ರಾಜಪಥದಲ್ಲಿ 73ನೇ ಗಣರಾಜ್ಯೋತ್ಸವದ ಅದ್ಧೂರಿ ಸಂಭ್ರಮ
ಸೆಂಟ್ರಲ್‌ ವಿಸ್ತಾ ಯೋಜನೆಯಡಿ ನವೀಕರಣಗೊಳಿಸಲಾದ ರಾಜಪಥದಲ್ಲಿ ಈ ಸಲದ ಗಣತಂತ್ರ ದಿನದ ಪರೇಡ್‌ ವಿಭಿನ್ನವೂ, ವೈಭವೋಪೇತವೂ ಆಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಯುದ್ಧ ವಿಮಾನಗಳನ್ನು ರಾಜಪಥದ ಮೇಲೆ ಹಾರಿಸಿದ್ದು ವಿಶೇಷವಾಗಿತ್ತು. ಕರ್ನಾಟಕದ ಕರಕುಶಲ ಕಲೆಗಳ ಸ್ತಬ್ಧಚಿತ್ರವೂ ಸೇರಿದಂತೆ ಅತ್ಯಾಕರ್ಷಕ 12 ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾಜಪಥದಲ್ಲಿ ಸಾಗುವ ಮೂಲಕ ಪ್ಷೇಕ್ಷಕರ ಮನಸೂರೆಗೊಂಡವು. ಕಡಿಮೆ ಜನರ ಸಮ್ಮುಖದಲ್ಲಿ ನಡೆದ ಪೆರೇಡ್‌ನಲ್ಲಿ ಭಾರತೀಯ ಸೇನೆಯ ಶೌರ್ಯ ಮತ್ತು ದೇಶದ ವೈವಿಧ್ಯತೆ ಪ್ರದರ್ಶಿತಗೊಂಡವು.

Follow Us:
Download App:
  • android
  • ios