ಸಹ ಪ್ರಯಾಣಿಕರಿಗೆ ವಿಮಾನ ಸಿಬ್ಬಂದಿಗೆ ಪ್ರಯಾಣಿಕರು ಕಿರುಕುಳ ನೀಡಿದ ಹಲವು ಪ್ರಕರಣಗಳು ಈಗಾಗಲೇ ನಡೆದಿವೆ. ಅದೇ ರೀತಿ ಈಗ ಇನ್ನೊಂದು ಪ್ರಕರಣ ಹೊಸದಾಗಿ ಬೆಳಕಿಗೆ ಬಂದಿದೆ.  

ಸ್ಟಾವ್ರೊಪೋಲ್‌: ವಿಮಾನದಲ್ಲಿ ಪ್ರಯಾಣಿಸುವ ಕೆಲವರು, ವಿಮಾನದ ಸಿಬ್ಬಂದಿಗೆ, ಗಗನಸಖಿಗಳಿಗೆ ನೀಡುವ ಹಾವಳಿ ಅಷ್ಟಿಷ್ಟಲ್ಲ, ಕೆಲವರು ಸಮೀಪ ಕುಳಿತ ಸಹ ಪ್ರಯಾಣಿಕರನ್ನು ಸುಮ್ಮನೇ ಕೂರಲು ಬಿಡುವುದಿಲ್ಲ. ಸಹ ಪ್ರಯಾಣಿಕರಿಗೆ ವಿಮಾನ ಸಿಬ್ಬಂದಿಗೆ ಪ್ರಯಾಣಿಕರು ಕಿರುಕುಳ ನೀಡಿದ ಹಲವು ಪ್ರಕರಣಗಳು ಈಗಾಗಲೇ ನಡೆದಿವೆ. ಅದೇ ರೀತಿ ಈಗ ಇನ್ನೊಂದು ಪ್ರಕರಣ ಹೊಸದಾಗಿ ಬೆಳಕಿಗೆ ಬಂದಿದೆ. 

ಮಹಿಳೆಯೊಬ್ಬಳು ವಿಮಾನದಲ್ಲಿ ಸಿಗರೇಟ್ ಸೇದುವುದನ್ನು ವಿರೋಧಿಸಿದ 'ಗಗನಸಖ'ನಿಗೆ ಕಚ್ಚಿದ್ದಲ್ಲದೇ ಆತನ ಮುಂದೆಯೇ ಬಟ್ಟೆ ಕಿತ್ತೆಸೆದು ಟಾಪ್‌ಲೆಸ್ ಆಗಿದ್ದಾಳೆ. ಸ್ಟಾವ್ರೊಪೋಲ್‌ನಿಂದ (Stavropol) ರಷ್ಯಾದ ಮಾಸ್ಕೋಗೆ ಹೊರಟಿದ್ದ ಏರೋಫ್ಲಾಟ್ ವಿಮಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ರಷ್ಯಾದ ಮಹಿಳೆಯೊಬ್ಬಳು (Russian Woman) ತನ್ನನ್ನು ವಿಮಾನದಲ್ಲಿ ಧೂಮಪಾನ ಮಾಡಲು ಬಿಡದ ಸಿಬ್ಬಂದಿಗೆ ಕಚ್ಚಿದ ಆಕೆ ನಂತ ಬಟ್ಟೆ ಕಿತ್ತೆಸೆದು ತಾನೇ ಬೆತ್ತಲಾಗಿದ್ದಾಳೆ. ಹೀಗೆ ವಿಮಾನದಲ್ಲಿ ಹುಚ್ಚಾಟವಾಡಿದ ಮಹಿಳೆಯನ್ನು ರಷ್ಯಾದ ಅಂಝೆಲಿಕಾ ಮಾಸ್ಕ್ವಿಟಿನಾ (Anzhelika Moskvitina) ಎಂದು ಗುರುತಿಸಲಾಗಿದೆ. ಅಲ್ಲದೇ ತನ್ನ ಸಹ ಪ್ರಯಾಣಿಕರಿಗೆ ನೀವೆಲ್ಲಾ ಸಾಯುತ್ತಿರಿ ಎಂದು ಆಕೆ ಬೈದಾಡಿದ್ದಾಳೆ. ಕುಡಿದ ಅಮಲಿನಲ್ಲಿದ್ದ ಈಕೆ ಮೊದಲಿಗೆ ವಿಮಾನದ ಶೌಚಾಲಯದಲ್ಲಿ ತನ್ನನ್ನು ತಾನು ಲಾಕ್ ಮಾಡಿಕೊಂಡು ಧೂಮಪಾನ ಮಾಡಲು ಮುಂದಾಗಿದ್ದಾಳೆ. ನಂತರ ಇದಕ್ಕೆ ವಿರೋಧ ವ್ಯಕ್ತವಾದಾಗ ಬಟ್ಟೆ ಕಿತ್ತೆಸೆದಿದ್ದಾಳೆ. 

ಫ್ಲೈಟ್‌ನಲ್ಲಿ ಮಕ್ಕಳಿಗೂ ಟಿಕೆಟ್ ಇದ್ಯಪ್ಪಾ ಅಂದ್ರೆ ಮಗುವನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಹೋದ ಪೋಷಕರು!

ವಿಮಾನದಲ್ಲಿ ಪಾನಮತ್ತಳಾಗಿದ್ದ ಮಹಿಳೆಯ ಅರಚಾಟ ನೋಡಿ ಒಬ್ಬ ಫ್ಲೈಟ್ ಅಟೆಂಡೆಂಟ್‌ ಅವಳನ್ನು ಸಮಾಧಾನಪಡಿಸಲು ಹೋಗಿದ್ದಾನೆ. ಈ ವೇಳೆ ಆಕೆ ಆತನಿಗೆ ಬಲವಾಗಿ ಕಚ್ಚಿದ್ದಾಳೆ. ಇವಳು ಕಚ್ಚಿದ್ದರಿಂದ ವಿಮಾನ ಲ್ಯಾಂಡಿಂಗ್ ಬಳಿಕ ಆತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವಷ್ಟರ ಮಟ್ಟಿಗೆ ಜೋರಾಗಿ ಈಕೆ ಕಚ್ಚಿದ್ದಳು ಎಂದು ವರದಿ ಆಗಿದೆ. ಈಕೆ ವಿಮಾನದ ಸಿಬ್ಬಂದಿ ಜೊತೆ ಜಗಳವಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತುರ್ತು ನಿರ್ಗಮನದ ಮುಂದೆ ನಿಂತಿರುವಾಗ ಮಾಸ್ಕ್ವಿಟಿನಾ ವಿಮಾನದ ಸಿಬ್ಬಂದಿಯೊಂದಿಗೆ ಜಗಳವಾಡುವುದು ವಿಡಿಯೋದಲ್ಲಿ ಸೆರೆ ಆಗಿದೆ. ಆಕೆ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ವಿಮಾನ ಸಿಬ್ಬಂದಿ ಎಚ್ಚರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹೆಲೋ ಲೇಡಿ ಕುಳಿತುಕೊಳ್ಳಿ ಮತ್ತು ನಿಮ್ಮ ಬಟ್ಟೆಯನ್ನು ಧರಿಸಿ. ನಿಮ್ಮ ಬಟ್ಟೆಗಳು ಎಲ್ಲಿವೆ? ನೀವು ವಿಮಾನದಲ್ಲಿ ವರ್ತನೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವಿರಿ ಎಂಬುದು ನಿಮಗೆ ತಿಳಿದಿದೆಯಾ? ಇಲ್ಲಿ ಮಕ್ಕಳಿದ್ದಾರೆ. ಕನಿಷ್ಠ ಅವರನ್ನು ಗೌರವಿಸಿ, ಎಂದು ವಿಮಾನದ ಸಿಬ್ಬಂದಿ ಹೇಳುವುದನ್ನು ಕೇಳಬಹುದಾಗಿದೆ. ಈ ವೇಳೆ ಆಕೆ ತನಗೆ ವಿಮಾನದ ಕಾಕ್‌ಪಿಟ್‌ಗೆ (cockpit) ಹೋಗುವ ಆಸೆ ಇರುವುದಾಗಿ ಹೇಳುತ್ತಾಳೆ ಅಲ್ಲದೇ ಮಕ್ಕಳನ್ನು ಗೌರವಿಸುವುದಾಗಿ ಹೇಳುತ್ತಾಳೆ. ನಾನು ಮಾನಸಿಕ ಆಸ್ಪತ್ರೆಗೆ ಅಥವಾ ಜೈಲಿಗೆ ಹೋಗುತ್ತೇನೆ ಎಂದು ನನಗೆ ತಿಳಿದಿದೆ ಆದರೂ ನಾನು ಕಾಕ್‌ಪಿಟ್‌ಗೆ ಹೋಗಲು ಬಯಸುವೆ ಎಂದು ಆಕೆ ಹೇಳುತ್ತಾಳೆ. ಅಲ್ಲದೇ ನನ್ನನ್ನು ಬೇಕಾದರೆ ಸಾಯಿಸಿ ಆದರೆ ನಾ ಧೂಮಪಾನ ಮಾಡುತ್ತೇನೆ ಎಂದು ಆಕೆ ಹೇಳುತ್ತಾಳೆ. 

Air India: ಮಹಿಳಾ ಪ್ರಯಾಣಿಕರ ಬ್ಲಾಂಕೆಟ್‌ ಮೇಲೆ ಮೂತ್ರ ವಿಸರ್ಜನೆ: ಮತ್ತೊಂದು ಘಟನೆ ಬೆಳಕಿಗೆ..!

ಇತ್ತ ಮಹಿಳೆ ಬಟ್ಟೆ ಕಿತ್ತೆಸೆದಿದ್ದರಿಂದ ವಿಮಾನದ ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದವರೆಲ್ಲಾ ಮುಜುಗರಕ್ಕೀಡಾಗಿದ್ದಲ್ಲದೇ ಆಕೆಯ ಎದೆಭಾಗವನ್ನು ಬಟ್ಟೆಯಿಂದ ಮುಚ್ಚಲು ಯತ್ನಿಸಿದ್ದಾರೆ. ಅಲ್ಲದೇ ಎಲ್ಲರೂ ಸೇರಿ ಆಕೆಯ ಕೈಗಳನ್ನು ಕಟ್ಟಿ ಆಕೆಗೆ ಬಟ್ಟೆ ತೊಡಿಸಿದ್ದಾರೆ. ನಂತರ ವಿಮಾನವೂ ಮಾಸ್ಕೋಗೆ ಆಗಮಿಸಿದ ಕೂಡಲೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಏರ್‌ಲೈನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಈ ಮಹಿಳೆ ಮಾಸ್ಕ್ವಿಟಿನಾ ವಿಮಾನ ಪ್ರಯಾಣದ ಸಮಯದಲ್ಲಿ ಇರಬೇಕಾದ ಸಾಮಾನ್ಯ ನಡವಳಿಕೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಈಕೆಯ ನಡವಳಿಕೆ ಇತರ ಪ್ರಯಾಣಿಕರಿಗೂ ತೊಂದರೆ ಆಗಿದ್ದರಿಂದ ವಿಮಾನದ ಕಮಾಂಡರ್ ಆಕೆಯ ಮೇಲೆ ಕ್ರಮಕ್ಕೆ ಮುಂದಾದರು. ಎಂದು ಏರೋಫ್ಲೋಟ್ (Aeroflot) ಹೇಳಿದೆ.