Air India: ಮಹಿಳಾ ಪ್ರಯಾಣಿಕರ ಬ್ಲಾಂಕೆಟ್‌ ಮೇಲೆ ಮೂತ್ರ ವಿಸರ್ಜನೆ: ಮತ್ತೊಂದು ಘಟನೆ ಬೆಳಕಿಗೆ..!

ಈ ಘಟನೆ ಡಿಸೆಂಬರ್ 6 ರಂದು ಏರ್ ಇಂಡಿಯಾ ಫ್ಲೈಟ್ 142 ನಲ್ಲಿ ಸಂಭವಿಸಿದೆ ಮತ್ತು ವಿಮಾನದ ಪೈಲಟ್ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆ ಈ ವಿಷಯವನ್ನು ವರದಿ ಮಾಡಿದರು.

another mid air peeing incident now on paris delhi air india flight ash

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ (New York - Delhi) ಏರ್ ಇಂಡಿಯಾ (Air India) ವಿಮಾನದಲ್ಲಿ (Flight) ವೃದ್ಧೆ (Aged Women) ಮೇಲೆ ಮೂತ್ರ ವಿಸರ್ಜನೆ (Urinate) ಮಾಡಿದ್ದ ಘಟನೆ ನಡೆದಿದ್ದು, ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ಈ  ಆಘಾತಕಾರಿ ಘಟನೆ ನಡೆದು 10 ದಿನಗಳ ನಂತರ ಅಂದರೆ ಡಿಸೆಂಬರ್ 6 ರಂದು, ಪ್ಯಾರಿಸ್‌ನಿಂದ (Paris) ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ  ಕುಡಿದ ಮತ್ತಿನಲ್ಲಿದ್ದ ಪುರುಷ ಪ್ರಯಾಣಿಕನೊಬ್ಬ (Passenger) ಮಹಿಳಾ ಪ್ರಯಾಣಿಕರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮತ್ತೊಂದು ಘಟನೆ ವರದಿಯಾಗಿದೆ. ಆದರೆ ಪಾನಮತ್ತ ಪ್ರಯಾಣಿಕ ಲಿಖಿತವಾಗಿ ಕ್ಷಮೆಯಾಚಿಸಿದ (Written Apology) ನಂತರ ಈ ಘಟನೆ ಬಗ್ಗೆ ದೂರು (Case) ದಾಖಲಾಗಲಿಲ್ಲ ಎಂದು ಅಧಿಕಾರಿಗಳು (Officers) ಗುರುವಾರ ಅಂದರೆ ಜನವರಿ 5, 2023 ರಂದು ತಿಳಿಸಿದ್ದಾರೆ.

ಈ ಘಟನೆ ಡಿಸೆಂಬರ್ 6 ರಂದು ಏರ್ ಇಂಡಿಯಾ ಫ್ಲೈಟ್ 142 ನಲ್ಲಿ ಸಂಭವಿಸಿದೆ ಮತ್ತು ವಿಮಾನದ ಪೈಲಟ್ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆ ಈ ವಿಷಯವನ್ನು ವರದಿ ಮಾಡಿದರು. ಅದರ ನಂತರ ಪುರುಷ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಯಿತು ಎಂದೂ ತಿಳಿದುಬಂದಿದೆ.

ಇದನ್ನು ಓದಿ: Air India Flight: ಕುಡಿದ ಮತ್ತಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ..!

ಆದರೆ, ಈ ಪ್ರಯಾಣಿಕ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದನೋ ಅಥವಾ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದನೋ ಎಂಬುದು ತಿಳಿದುಬಂದಿಲ್ಲ. ಈ ವಿಮಾನವು ದೆಹಲಿಯಲ್ಲಿ  ಡಿಸೆಂಬರ್ 6 ರಂದು ಬೆಳಗ್ಗೆ 9:40 ರ ಸುಮಾರಿಗೆ ಇಳಿಯಿತು ಮತ್ತು ಪುರುಷ ಪ್ರಯಾಣಿಕನು "ಕುಡಿತದ ಅಮಲಿನಲ್ಲಿದ್ದನು ಮತ್ತು ಅವನು ಕ್ಯಾಬಿನ್ ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸಲಿಲ್ಲ, ನಂತರ ಅವನು ವಿಮಾನದಲ್ಲಿದ್ದ ಮಹಿಳೆಯ ಹೊದಿಕೆಯ ಮೇಲೆ ಮೂತ್ರ ವಿಸರ್ಜಿಸಿದ್ದಾನೆ" ಎಂದು ವಿಮಾನ ನಿಲ್ದಾಣದ ಭದ್ರತೆಗೆ ತಿಳಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ಈ ಘಟನೆ ಬಗ್ಗೆ ತಿಳಿಸಿದ್ದಾರೆ.

ಬಳಿಕ, ಆ ಪ್ರಯಾಣಿಕ ವಿಮಾನದಿಂದ ಕೆಳಗಿಳಿದ ಕೂಡಲೇ ಆತನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ವಶಕ್ಕೆ ಪಡೆಯಿತು. ಆದರೆ ಆ ಮಹಿಳಾ ಪ್ರಯಾಣಿಕರು ಹಾಗೂ ಪಾನಮತ್ತ ಸ್ಥಿತಿಯಲ್ಲಿದ್ದ ಪ್ರಯಾಣಿಕ ಪರಸ್ಪರ ರಾಜಿ ಮಾಡಿಕೊಂಡ ನಂತರ ಮತ್ತು ಆರೋಪಿ ಲಿಖಿತ ಕ್ಷಮೆಯಾಚನೆಯನ್ನು ಸಲ್ಲಿಸಿದ ನಂತರ ಆತನನ್ನು ಬಿಟ್ಟು ಕಳಿಸಲು ಅನುಮತಿಸಲಾಯಿತು ಎಂದೂ ಅವರು ಹೇಳಿದ್ದಾರೆ. ಆರಂಭದಲ್ಲಿ ಲಿಖಿತ ದೂರು ನೀಡಿದ್ದ ಮಹಿಳಾ ಪ್ರಯಾಣಿಕರು, ನಂತರ ಪೊಲೀಸ್ ಕೇಸ್ ದಾಖಲಿಸಲು ನಿರಾಕರಿಸಿದರು. ಆದ್ದರಿಂದ ಪ್ರಯಾಣಿಕರು ವಲಸೆ ಮತ್ತು ಕಸ್ಟಮ್ಸ್ ಔಪಚಾರಿಕತೆಗಳನ್ನು ತೆರವುಗೊಳಿಸಿದ ನಂತರ ವಿಮಾನ ನಿಲ್ದಾಣದ ಭದ್ರತೆಯಿಂದ ಹೋಗಲು ಅನುಮತಿಸಲಾಗಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನದಲ್ಲಿ ಶ್ವಾನಕ್ಕೆ ನಿರಾಕರಣೆ: ಬೆಂಗಳೂರು ಕುಟುಂಬದ ವಿಡಿಯೋ ವೈರಲ್‌

ನವೆಂಬರ್ 26 ರ ಆಘಾತಕಾರಿ ಘಟನೆ ನಡೆದು ಕೇವಲ ಒಂದು ವಾರದ ನಂತರ ಈ ಘಟನೆ ಸಂಭವಿಸಿದೆ. ಮೊದಲ ಘಟನೆಯಲ್ಲಿ ಒಬ್ಬ ವ್ಯಕ್ತಿ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ನಂತರ, ಸಂತ್ರಸ್ಥೆ ಏರ್ ಇಂಡಿಯಾಗೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಈಗ ನವೆಂಬರ್ ಘಟನೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಆರೋಪಿಯನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ. ಏರ್‌ ಇಂಡಿಯಾ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲೇ ಈ ಘಟನೆ ವರದಿಯಾಗಿತ್ತು. 

ಇದನ್ನೂ ಓದಿ: ಒಂದೇ ಸಲ 500 ವಿಮಾನ ಖರೀದಿಗೆ Air India ರೆಡಿ..! ಇದು ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಡೀಲ್

Latest Videos
Follow Us:
Download App:
  • android
  • ios