ಅಮೆರಿಕದಲ್ಲಿ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡಿದ ಭಾರತೀಯನಿಗೆ ಗಡೀಪಾರು ಭೀತಿ, ಏನಿದು ನಿಯಮ?, ಮಧು ರಾಜು ಅನ್ನೋ ಯುವಕ ಅಮೆರಿಕದಲ್ಲಿ ಡ್ಯಾನ್ಸ್ ಮಾಡಿದ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

ವಾಶಿಂಗ್ಟನ್ (ಮಾ.08) ಇನ್‌ಸ್ಟಾಗ್ರಾಂ, ಟಿಕ್ ಟಾಕ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಮಿಂಚಲು ಹಲವರು ರೀಲ್ಸ್ ಮೊರೆ ಹೋಗುತ್ತಾರೆ. ಹಲವು ಬಾರಿ ಅಪಾಯಕಾರಿ ಸ್ಟಂಟ್, ನಿಯಮ ಉಲ್ಲಂಘಿಸಿ ಮಾಡುವ ಕಸರತ್ತು ವಿವಾದಕ್ಕೂ ಗುರಿಯಾಗಿದೆ. ಇದೀಗ ಅಮೆರಿಕದಲ್ಲಿ ಭಾರತೀಯ ಮೂಲಕದ ಯುವಕ ಮಧು ರಾಜು ಟಿಕ್ ಟಾಕ್ ರೀಲ್ಸ್‌ಗಾಗಿ ಭರ್ಜರಿ ಡ್ಯಾನ್ಸ್ ಮಾಡಿದ್ದಾನೆ. ಪಾರ್ಟ್ನರ್ ಜೊತೆ ಅಚ್ಚುಕಟ್ಟಾಗಿ ಡ್ಯಾನ್ಸ್ ಮಾಡಿದ್ದಾನೆ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮಧು ರಾಜು ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಧು ರಾಜು ಅಮೆರಿಕದಿಂದ ಗಡೀಪಾರು ಭೀತಿ ಎದುರಿಸುತ್ತಿದ್ದಾನೆ.

Add Asianetnews Kannada as a Preferred SourcegooglePreferred

ಮಧು ರಾಜು ಅನ್ನೋ ಭಾರತೀಯ ಮೂಲದ ಯುವಕ ಹಾಗೂ ಈತನ ಗೆಳತಿ ಅಮೆರಿಕದಲ್ಲಿ ಮಾಡಿದ ಡ್ಯಾನ್ಸ್ ರೀಲ್ಸ್ ವಿವಾದಕ್ಕೆ ಗುರಿಯಾಗಿದೆ. ಇಬ್ಬರು ಅಮರೆಕದಲ್ಲಿರುವ ಎರಡನೇ ವಿಶ್ವಮಹಾ ಯುದ್ಧದ ಸ್ಮಾರಕ್ಕೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಮರಳಿ ಬಂದಿದ್ದರೆ ಸಮಸ್ಯೆ ಇರಲಿಲ್ಲ. ಭಾರತದಂತೆ ಎಲ್ಲೆಡೆ ರೀಲ್ಸ್ ಮಾಡಬಹುದು ಎಂದುಕೊಂಡು ಯುದ್ಧ ಸ್ಮಾರಕದ ಮುಂದೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇದೇ ಸಂಕಷ್ಟಕ್ಕೆ ಕಾರಣವಾಗಿದೆ.

ಗಡೀಪಾರು ಭೀತಿಯಲ್ಲಿ ಭಾರತೀಯ

ಯುದ್ಧ ಸ್ಮಾರಕದಲ್ಲಿ ಡ್ಯಾನ್ಸ್ ಮಾಡಿದ ಮಧು ರಾಜುವನ್ನು ಗಡೀಪಾರು ಮಾಡಲು ಅಮೆರಿಕ ಅಧಿಕಾರಿಗಳು ಮುಂದಾಗಿದ್ದಾರೆ. 2ನೇ ವಿಶ್ವ ಮಹಾ ಯುದ್ಧದಲ್ಲಿ ಅಮೆರಿಕದ 16 ಮಿಲಿಯನ್ ಸೈನಿಕರು ಪಾಲ್ಗೊಂಡಿದ್ದರು. ಈ ಪೈಕಿ 4 ಲಕ್ಷ ಮಂದಿ ಹುತಾತ್ಮರಾಗಿದ್ದಾರೆ. ಈ 2ನೇ ಮಹಾಯುದ್ದ ಸ್ಮಾರಕದಲ್ಲಿ 2ನೇ ಮಹಾ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರು, ಹುತಾತ್ಮರಿಗೆ ಗೌರವ ಸೂಚನೆ ಸಲುವಾಗಿ ಹೆಸರು ಕೆತ್ತಲಾಗಿದೆ. ಇಷ್ಟೇ ಅಲ್ಲ ಪ್ರತಿಯೊಬ್ಬ ಅಮೆರಿಕನ್ ಪ್ರಜೆ ಇಲ್ಲಿ ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಇದು ಡ್ಯಾನ್ಸ್ ಮಾಡಿ, ಕೇಕೆ ಹಾಕುವ ಸ್ಥಳವಲ್ಲ. ಹೀಗಾಗಿ ಯೋಧರಿಗೆ ಅಪಮಾನ, ಅಮೆರಿಕನ್ ರೀತಿ ನೀತಿಗಳ ವಿರುದ್ಧ, ನಿಯಮ ಉಲ್ಲಂಘನೆ ಸೇರಿದಂತೆ ಹಲವು ಗಂಭೀರ ಆರೋಪಗಳು ಇದೀಗ ಮಧು ರಾಜು ಮೇಲೆ ಕೇಳಿಬಂದಿದೆ.

ಮಧು ರಾಜು ಜೊತೆ ಡ್ಯಾನ್ಸ್ ಮಾಡಿದ ಮಹಿಳೆಯ ಮಾಹಿತಿಗಾಗಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ ಎದುರಿಸುತ್ತಿದ್ದಾರೆ. ನನಗೆ ಗೊತ್ತಿರಲಿಲ್ಲ, ಯಾರ ಭಾವನೆಗೂ ಧಕ್ಕೆ ಮಾಡುವ ಉದ್ದೇಶ ಇರಲಿಲ್ಲ ಅನ್ನೋ ಕ್ಷಮಾಪಣೆಗಳು ಭಾರತದಲ್ಲಿ ನಡೆಯುತ್ತೆ, ಅಮೆರಿಕದಲ್ಲಿ ನಡೆಯುವುದಿಲ್ಲ. ತಪ್ಪು ಮಾಡಿದ್ದೀರಿ, ಗೊತ್ತಿಲ್ಲದ ಪ್ರದೇಶಕ್ಕೆ ಹೋಗುವಾಗ ತಿಳಿದುಕೊಂಡು ಹೋಗಿ. ಈಗ ಶಿಕ್ಷೆ ಎದುರಿಸಿ ಎಂದು ಹಲವು ಅಮೆರಿಕನ್ನರು ಆಕ್ರೋಶ ಹೊರಹಾಕಿದ್ದಾರೆ.

Scroll to load tweet…