MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮೆರಿಕ; 30 ದಿನ ಮಾತ್ರ!

ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮೆರಿಕ; 30 ದಿನ ಮಾತ್ರ!

ಇರಾನ್‌ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಪೂರೈಕೆ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ, ಅಮೆರಿಕವು ಭಾರತೀಯ ರಿಫೈನರಿಗಳಿಗೆ ರಷ್ಯಾದಿಂದ ತೈಲ ಖರೀದಿಸಲು 30 ದಿನಗಳ ತಾತ್ಕಾಲಿಕ ಅನುಮತಿ ನೀಡಿದೆ.

1 Min read
Author : Kannadaprabha News
Published : Mar 07 2026, 07:38 AM IST
Share this Photo Gallery
  • FB
  • TW
  • Linkdin
  • Whatsapp
15
ಕಚ್ಚಾತೈಲ ಪೂರೈಕೆ
Image Credit : Social Media

ಕಚ್ಚಾತೈಲ ಪೂರೈಕೆ

ನ್ಯೂಯಾರ್ಕ್‌/ವಾಷಿಂಗ್ಟನ್‌: ಇರಾನ್‌ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಪೂರೈಕೆ ಅಸ್ತವ್ಯಸ್ತಗೊಂಡಿರುವ ಬೆನ್ನಲ್ಲೇ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕವು ಭಾರತೀಯ ರಿಫೈನರಿಗಳಿಗೆ 30 ದಿನಗಳ ತಾತ್ಕಾಲಿಕ ಅನುಮತಿ ನೀಡಿದೆ. ಈ ಮೂಲಕ ಭಾರತದಲ್ಲಿ ಸೃಷ್ಟಿಯಾಗಿದ್ದ ತೈಲಾತಂಕ ತಗ್ಗಿದಂತಾಗಿದೆ.

25
15 ದಶಲಕ್ಷ ಬ್ಯಾರೆಲ್‌ ತೈಲ ಖರೀದಿ
Image Credit : X

15 ದಶಲಕ್ಷ ಬ್ಯಾರೆಲ್‌ ತೈಲ ಖರೀದಿ

ಇದೇ ವೇಳೆ ಅಮೆರಿಕದಿಂದ ಗ್ರೀನ್‌ ಸಿಗ್ನಲ್‌ ಸಿಗುತ್ತಿದ್ದಂತೆಯೇ ಯುದ್ಧದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಸಿಕ್ಕಿಹಾಕಿಕೊಂಡಿರುವ ರಷ್ಯಾದ ತೈಲ ಟ್ಯಾಂಕರ್‌ಗಳಿಂದ ಭಾರತವು 15 ದಶಲಕ್ಷ ಬ್ಯಾರೆಲ್‌ ತೈಲ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.

Related Articles

Related image1
ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಖಮೇನಿ? ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಮೊದಲ ಪೋಸ್ಟ್
Related image2
ಕೊಲ್ಲಿ ಸಂಘರ್ಷ : ಡ್ರೈಫ್ರೂಟ್ಸ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ, ಯುದ್ಧ ಮುಂದುವರೆದರೆ ಆಮದು ಸ್ಥಗಿತ ಆತಂಕ!
35
ರಷ್ಯಾದಿಂದ ತೈಲ ಖರೀದಿ
Image Credit : X

ರಷ್ಯಾದಿಂದ ತೈಲ ಖರೀದಿ

ಉಕ್ರೇನ್‌ ಯುದ್ಧ ಆರಂಭವಾದ ಬಳಿಕ ಭಾರತವು ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಇದಕ್ಕಾಗಿ ಭಾರತದ ಮೇಲೆ ಅಮೆರಿಕವು ಶೇ.25ರಷ್ಟು ತೆರಿಗೆ ವಿಧಿಸಿತ್ತು. ಇತ್ತೀಚೆಗೆ ರಷ್ಯಾದಿಂದ ತೈಲ ಖರೀದಿ ಬಹುತೇಕ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಆ ತೆರಿಗೆ ರದ್ದು ಮಾಡಿತ್ತು.

45
ಬಿಜೆಪಿ-ಕಾಂಗ್ರೆಸ್‌ ಪರಸ್ಪರ ಟೀಕೆ:
Image Credit : X

ಬಿಜೆಪಿ-ಕಾಂಗ್ರೆಸ್‌ ಪರಸ್ಪರ ಟೀಕೆ:

ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದ ವಿಚಾರವನ್ನು ಬಿಜೆಪಿ ಸ್ವಾಗತಿಸಿದರೆ, ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ. ಟ್ರಂಪ್‌ ಈಗ ಹೊಸ ಆಟ ಶುರುಮಾಡಿದ್ದಾರೆ. ಅಮೆರಿಕದ ಈ ಬ್ಲ್ಯಾಕ್‌ಮೇಲ್‌ ಎಲ್ಲಿಯವರೆಗೆ ಮುಂದುವರಿಯಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಂಧ್ರಾದಲ್ಲಿ 3ನೇ ಮಗು ಹೆತ್ತವರಿಗೆ ₹25,000 ಪ್ರೋತ್ಸಾಹ ಧನ, 18 ವರ್ಷದ ತನಕ ಉಚಿತ ಶಿಕ್ಷಣ!

55
ರಾಜತಾಂತ್ರಿಕತೆಗೆ ಸಿಕ್ಕ ಜಯ
Image Credit : Getty

ರಾಜತಾಂತ್ರಿಕತೆಗೆ ಸಿಕ್ಕ ಜಯ

ಆದರೆ, ಟ್ರಂಪ್‌ ಅವರ ನಡೆಯನ್ನು ಮೋದಿ ಅವರ ವ್ಯೂಹಾತ್ಮಕ ತೈಲ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಬಿಜೆಪಿ ಹೇಳಿದೆ. ಇದರಿಂದ ಭಾರತ ವಿರೋಧಿ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಮುಖಕ್ಕೆ ದೊಡ್ಡ ಮೊಟ್ಟೆ ಎಸೆದಂತಾಗಿದೆ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: Donald Trump: ಇರಾನ್ ಬೇಷರತ್ ಶರಣಾಗಬೇಕು, ಇಲ್ಲದಿದ್ದರೆ ಬೇರೆ ದಾರಿಯಿಲ್ಲ ಎಂದ ಟ್ರಂಪ್

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ರಷ್ಯಾ
ಭಾರತ
ಡೊನಾಲ್ಡ್ ಟ್ರಂಪ್
ಇರಾನ್
ಕೊಲ್ಲಿ ಯುದ್ಧ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಜೀವನದಲ್ಲಿ ಏನಾದ್ರೂ ಮಾಡ್ಬೇಕು; ರಿಸ್ಕ್‌ ತಗೊಂಡು, ಹೊಸ ಹೆಜ್ಜೆ ಇಟ್ಟ ನಿರೂಪಕ ನಿರಂಜ್‌ ದೇಶಪಾಂಡೆ
Recommended image2
ಕತ್ತೆಗಳಿಂದ ಕೋಟ್ಯಧಿಪತಿಯಾಗಲು ಕೇಂದ್ರದ ಬಂಪರ್​ ಆಫರ್​: 50 ಲಕ್ಷದ ಸಹಾಯಧನ- ಡಿಟೇಲ್ಸ್ ಇಲ್ಲಿದೆ
Recommended image3
ಪೇಟ್ರಿಯಾಟ್ ಸಿನಿಮಾದ ವಿವಾದವೇನು? ಮಮ್ಮುಟ್ಟಿ, ಮೋಹನ್‌ಲಾಲ್ ನಟನೆಯ ಈ ಸಿನಿಮಾವನ್ನು ಕೇರಳದಲ್ಲಿ ನಿಷೇಧಿಸಿದ್ದೇಕೆ?
Related Stories
Recommended image1
ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಖಮೇನಿ? ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಮೊದಲ ಪೋಸ್ಟ್
Recommended image2
ಕೊಲ್ಲಿ ಸಂಘರ್ಷ : ಡ್ರೈಫ್ರೂಟ್ಸ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ, ಯುದ್ಧ ಮುಂದುವರೆದರೆ ಆಮದು ಸ್ಥಗಿತ ಆತಂಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved