Asianet Suvarna News Asianet Suvarna News

ಪತ್ರದಲ್ಲೇನಿದೆ: ರಾಣಿ ಬರೆದ ರಹಸ್ಯ ಪತ್ರ ಓದಲು ಕಾಯಬೇಕು ಇನ್ನೂ 63 ವರ್ಷ

1986ರರಲ್ಲಿ ರಾಣಿ ಎಲಿಜಬೆತ್ ಆಸ್ಟ್ರೇಲಿಯಾದ ಸಿಡ್ನಿ (Sydney) ಜನರನ್ನು ಉದ್ದೇಶಿಸಿ ಪತ್ರವೊಂದನ್ನು ಬರೆದಿದ್ದರು. ಈ ಪತ್ರವನ್ನು 99 ವರ್ಷಗಳ ಬಳಿಕ ತೆಗೆದು ನೋಡುವಂತೆ ರಾಣಿ ಆದೇಶಿಸಿದ್ದರು. 

Queen Elizabeth II wrote a secret letter in 1986 hidden in a vault in Australia which cannot open till 2085 akb
Author
First Published Sep 12, 2022, 11:53 AM IST

ರಾಣಿ ಎಲಿಜಬೆತ್ ನಿಧನದ ಬಳಿಕ ಅವರ ಬಗೆಗೆ ಜನರ ಕುತೂಹಲವೂ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಅವರ ಒದೊಂದೇ ರೋಚಕ ವಿಚಾರಗಳು ಬಯಲಾಗುತ್ತಿವೆ. ಇತ್ತೀಚೆಗಷ್ಟೇ ಅವರು ಬಳಸಿದ್ದ ಟೀ ಬ್ಯಾಗ್‌ವೊಂದನ್ನು ಇ-ಬೇಯಲ್ಲಿ  ವ್ಯಕ್ತಿಯೊಬ್ಬ ಮಾರಾಟಕ್ಕಿಟ್ಟಿದ್ದ. ಈ ಮಧ್ಯೆ ರಾಣಿ 1986ರಲ್ಲಿ ಆಸ್ಟ್ರೇಲಿಯಾ ಜನರಿಗೆ ಬರೆದಿದ್ದಾರೆನ್ನಲಾದ ಪತ್ರವೊಂದರ ಬಗ್ಗೆ ರೋಚಕ ವಿಚಾರವೊಂದು ಹೊರ ಬಂದಿದೆ. 1986ರರಲ್ಲಿ ರಾಣಿ ಎಲಿಜಬೆತ್ ಆಸ್ಟ್ರೇಲಿಯಾದ ಸಿಡ್ನಿ (Sydney) ಜನರನ್ನು ಉದ್ದೇಶಿಸಿ ಪತ್ರವೊಂದನ್ನು ಬರೆದಿದ್ದರು. ಈ ಪತ್ರವನ್ನು 99 ವರ್ಷಗಳ ಬಳಿಕ ತೆಗೆದು ನೋಡುವಂತೆ ರಾಣಿ ಆದೇಶಿಸಿದ್ದರು. ಹೀಗಾಗಿ ಈ ಪತ್ರವನ್ನು ಓದಲು ಆಸ್ಟ್ರೇಲಿಯಾದ ಜನ ಇನ್ನು 63 ವರ್ಷಗಳ ಕಾಲ ಕಾಯಬೇಕು. 

ಆದರೆ ಈಗ ರಾಣಿ ಆಗಲಿದ್ದು, ಈ ಪತ್ರದಲ್ಲಿ ಏನಿರಬಹುದು ಎಂದು ತಿಳಿಯುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಆದರೆ ಈ ಪತ್ರವನ್ನು ಓದಲು ಇನ್ನು ಬರೋಬ್ಬರಿ 63 ವರ್ಷ ಕಾಯಬೇಕಿದೆ. ರಾಣಿಯ ಅಣತಿಯಂತೆ ಈ ಪತ್ರವನ್ನು ಇನ್ನು ತೆರೆದು ನೋಡಿಲ್ಲ. 1986ರಲ್ಲಿ ಆಸ್ಟ್ರೇಲಿಯಾಗೆ ಭೇಟಿ ನೀಡಿದ ವೇಳೆ ರಾಣಿ ಈ ಪತ್ರವನ್ನು ಬರೆದಿದ್ದರು. ಅಲ್ಲದೇ ಇದನ್ನು ಯಾವಾಗ ತೆರೆದು ಓದಬೇಕು ಎಂಬುದನ್ನು ಪತ್ರದ (letter) ಮೇಲ್ಭಾಗದಲ್ಲೇ ನಮೂದಿಸಿದ್ದಾರಂತೆ. ರಾಣಿ ಎಲಿಜಬೆತ್‌ ಧೀರ್ಘಕಾಲದವರೆಗೆ ಆಸ್ಟ್ರೇಲಿಯಾದ ಮುಖ್ಯಸ್ಥರಾಗಿದ್ದರು. ಜೊತೆಗೆ ಆ ದೇಶದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದರು. ಅಲ್ಲದೇ ತಮ್ಮ ಅಧಿಕಾರವಧಿಯಲ್ಲಿ ಸುಮಾರು 16 ಬಾರಿ ಅವರು ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು. 

ರಾಣಿ ಅಗಲಿಕೆಯಿಂದ ಅನಾಥವಾದ ಕೊರ್ಗಿ ಶ್ವಾನಗಳು...

ಹೀಗಾಗಿ ಆಸ್ಟ್ರೇಲಿಯಾದ ಜನರನ್ನು ಉದ್ದೇಶಿಸಿ ರಾಣಿ ಬರೆದ ಪತ್ರಕ್ಕೆ ಈಗಾಗಲೇ 36 ವರ್ಷಗಳು ಕಳೆದಿದ್ದು ಇದನ್ನು ತೆರೆದು ಓದಲು ಇನ್ನು 63 ವರ್ಷ ಕಾಯಬೇಕಿದೆ. ಈ ಪತ್ರವನ್ನು ಆಸ್ಟ್ರೇಲಿಯಾದ ಐತಿಹಾಸಿಕ ರಾಣಿ ವಿಕ್ಟೋರಿಯಾ ಕಟ್ಟಡದಲ್ಲಿನ ಲಾಕರ್‌ನಲ್ಲಿ (Locker) ಇರಿಸಲಾಗಿದ್ದು, ಇನ್ನೂ 63 ವರ್ಷಗಳ ಇದು ಇಲ್ಲೇ ಭದ್ರವಾಗಿ ಇರಲಿದೆ. 

ಪತ್ರದಲ್ಲಿರುವ ವಿಚಾರಗಳನ್ನು ಸಾರ್ವಜನಿಕರಿಗೆ ಯಾವಾಗ ಬಹಿರಂಗಪಡಿಸಬೇಕು ಎಂಬುದರ ಕುರಿತು ಸ್ಪಷ್ಟ ಸೂಚನೆಗಳನ್ನು ಇದರಲ್ಲಿ ನೀಡಲಾಗಿದೆ. ಆಸ್ಟ್ರೇಲಿಯಾದ ಸಿಡ್ನಿಯ  ಮೇಯರ್ ಅವರನ್ನು ಉದ್ದೇಶಿಸಿ ರಾಣಿ ಬರೆದ  ಪತ್ರದ ಲಕೋಟೆಯ ಮೇಲೆ, 'ಶುಭಾಶಯಗಳು. 2085 A.D. ವರ್ಷದಲ್ಲಿ ನೀವು ಆಯ್ಕೆ ಮಾಡಿದ ಸೂಕ್ತವಾದ ದಿನದಂದು ಈ ಪತ್ರವನ್ನು ತೆರೆದು ಈ ಪತ್ರದಲ್ಲಿರುವ ನನ್ನ ಸಂದೇಶವನ್ನು ಸಿಡ್ನಿ ನಾಗರಿಕರಿಗೆ ತಿಳಿಸಿ ಎಂದು ನಿರ್ದಿಷ್ಟವಾಗಿ ವರ್ಷವನ್ನು ಉಲ್ಲೇಖಿಸಿ ಬರೆಯಲಾಗಿದೆ. ಇತ್ತ ರಾಣಿ ಬರೆದ ಪತ್ರವವನ್ನು ಇಟ್ಟಿರುವ ಲಾಕರ್ ಇರುವ ರಾಣಿ ವಿಕ್ಟೋರಿಯಾ ಕಟ್ಟಡವನ್ನು 1898ರಲ್ಲಿ ರಾಣಿ ವಿಕ್ಟೋರಿಯಾ (Queen Victoria) ಅವರ ವಜ್ರ ಮಹೋತ್ಸವದ (Diamond Jubilee) ನೆನಪಿಗಾಗಿ ನಿರ್ಮಾಣ ಮಾಡಲಾಗಿತ್ತು. 

Queen Elizabeth II Passes Away: 2.23 ಲಕ್ಷ ಕೋಟಿಯ ಸಂಪತ್ತಿಗೆ ಒಡತಿಯಾಗಿದ್ದ 2ನೇ ಕ್ವೀನ್‌ ಎಲಿಜಬೆತ್‌!

1999ರಲ್ಲಿ ಆಸ್ಟ್ರೇಲಿಯಾವೂ (Australia ಬ್ರಿಟನ್ ವಸಾಹತುಶಾಹಿಯಿಂದ ಬೇರ್ಪಟ್ಟು ಸ್ವತಂತ್ರ ಗಣರಾಜ್ಯವಾಗಬೇಕೆಂದು ನಿರ್ಧರಿಸುವುದಕ್ಕಾಗಿ ಜನಾಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಈ ವೇಳೆ ಶೇ.50ಕ್ಕಿಂತ ಹೆಚ್ಚು ಜನ ಬ್ರಿಟಿಷ್‌ ರಾಣಿಯೇ ರಾಷ್ಟ್ರದ ಮುಖ್ಯಸ್ಥೆಯಾಗಿಯೇ ಉಳಿಯಲಿ ಎಂಬುದರ ಪರ ಮತ ಚಲಾಯಿಸಿದ್ದರು. ಹೀಗಾಗಿ ಆಸ್ಟ್ರೇಲಿಯಾದಲ್ಲಿ ರಾಣಿಯ ಮುಖ್ಯಸ್ಥ ಸ್ಥಾನ ಹಾಗೆಯೇ ಮುಂದುವರೆಯಿತು. ಹೀಗಾಗಿ ಬ್ರಿಟನ್‌ನಲ್ಲಿ ಯಾರೂ ರಾಜರಾಗಿರುತ್ತಾರೋ ಅವರು ಆಸ್ಟ್ರೇಲಿಯಾದ ಮುಖ್ಯಸ್ಥರಾಗಿರುತ್ತಾರೆ. ಈಗ ರಾಣಿ ಎಲಿಜಬೆತ್ ಆಗಲಿದ್ದು, ಅವರ ಪುತ್ರ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕಾರ ಸ್ವೀಕರಿಸಿ ಆಗಿದೆ. 

Follow Us:
Download App:
  • android
  • ios