Queen Elizabeth II Passes Away: 2.23 ಲಕ್ಷ ಕೋಟಿಯ ಸಂಪತ್ತಿಗೆ ಒಡತಿಯಾಗಿದ್ದ 2ನೇ ಕ್ವೀನ್‌ ಎಲಿಜಬೆತ್‌!

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ನಿಧನರಾದ ಬಳಿಕ ಅವರಲ್ಲಿದ್ದ ಆಸ್ತಿಯ ಮೌಲ್ಯವೆಷ್ಟು ಎನ್ನುವ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಸ್ಕಾಟ್ಲೆಂಡ್‌ನ ತನ್ನ ವೈಯಕ್ತಿಕ ನಿವಾಸ ಬಾಲ್ಮೋರಲ್‌ ಕ್ಯಾಸ್ಟ್ಲೆಯಲ್ಲಿ ಗುರುವಾರ ವಿಧಿವಶರಾದ ಎಲಿಜಬೆತ್‌ ರಾಣಿ ಬರೋಬ್ಬರಿ 2.23 ಲಕ್ಷ ಕೋಟಿ ರೂಪಾಯಿ ಆಸ್ತಿಯ ಒಡತಿ. ಭಾರತದ ಕೊಹಿನೂರ್‌ ವಜ್ರದಿಂದಲೂ ಅಲಂಕೃತವಾಗಿರುವ ದಿ ಕ್ರೌನ್‌ ಕಿರೀಟದ ಮೌಲ್ಯವೇ 4500 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
 

Royal life of Queen Elizabeth II  Kohinoor Diamond in crown lived in a palace with 775 rooms and 78 bathrooms san

ಲಂಡನ್‌ (ಸೆ.9): ಎಲಿಜಬೆತ್‌ ರಾಣಿ ನಿಧನರಾಗುವುದರೊಂದಿಗೆ ಬ್ರಿಟನ್‌ ರಾಜಮನೆತನದ ಅತಿದೊಡ್ಡ ಕೊಂಡಿ ಕಳಚಿದಂತಾಗಿದೆ. ರಾಣಿಯ ನಿಧನದ ನಡುವೆಯೆ ಬ್ರಿಟನ್‌ ರಾಜಮನೆತನದ ಆಸ್ತಿ ಎಷ್ಟಿರಬಹುದು ಎಂದು ವಿವಿಧ ಮೂಲಗಳ ಆಧರಿಸಿ ಅಂದಾಜು ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಬ್ರಿಟನ್‌ ರಾಜ ಕುಟುಂಬದ ಒಟ್ಟಾರೆ ಆಸ್ತಿ 2.23 ಲಕ್ಷ ಕೋಟಿ ರೂಪಾಯಿ. ಆದರೆ, ಇದರಲ್ಲಿ ಬಹುತೇಕ ಪಾಲು ರಾಜಮನೆತನದ ಆಸ್ತಿಯನ್ನು ನಿರ್ವಹಿಸುವ ಮಂಡಳಿ ನಿರ್ವಹಣೆ ಮಾಡುತ್ತದೆ. ಇದನ್ನು ಕ್ರೌನ್‌ ಸ್ಟೇಟ್‌ ಬೋರ್ಡ್‌ ಎನ್ನಲಾಗುತ್ತದೆ. ಇದರ ಮೇಲೆ ಸರ್ಕಾರಕ್ಕಾಗಿಲು, ಯಾವುದೇ ವೈಯಕ್ತಿಕ ರಾಜರಿಗಾಗಲಿ ಅಧಿಕಾರವಿಲ್ಲ. ಇದು ಬ್ರಿಟನ್‌ನ ರಾಜ ಅಥವಾ ರಾಣಿ ಎನಿಸಿಕೊಳ್ಳುವ ವ್ಯಕ್ತಿ ಅನುಭವಿಸಬಹುದಾದಂತ ಆಸ್ತಿ ಆಗಿದೆ. ಕ್ವೀನ್‌ ಎಲಿಜಬೆತ್‌ ನಿಧನರಾಗಿರುವ ಸ್ಕಾಟ್ಲೆಂಡ್‌ನಲ್ಲಿರುವ ನಿವಾಸ ಬಾಲ್ಮೋರಲ್‌ ಕ್ಯಾಸ್ಟ್ಲೆ ಅವರ ವೈಯಕ್ತಿಕ ಆಸ್ತಿಯಾಗಿದ್ದು, ಒಟ್ಟಾರೆ 50 ಸಾವಿರ ಎಕರೆ ವಿಸ್ತ್ರೀರ್ಣದಲ್ಲಿದೆ. ಈ ಅರಮನೆಯ ಮೌಲ್ಯ 1,116 ಕೋಟಿ ರೂಪಾಯಿಗಳು. ಈ ಅರಮನೆ ಅಥವಾ ಕೋಟಿ, ಬ್ರಿಟನ್‌ನ ರಾಜಮನೆತನದ ವ್ಯಕ್ತಿಗಳು ಹೊಂದಿರುವ ಹಲವು ಅರಮನೆಗಳ ಪೈಕಿ ಒಂದಾಗಿದೆ. ಲಂಡನ್‌ನ ರಾಜಮನೆತನ ಮತ್ತು ರಾಣಿಯ ರಾಜಮನೆತನದಲ್ಲಿ, ಅಂತಹ ಅನೇಕ ಅರಮನೆಗಳು, ತಾಜ್, ವ್ಯಾಗನ್‌ಗಳು, ವಾಹನಗಳು ಇದ್ದವು.

2.23 ಲಕ್ಷ ಕೋಟಿ ಆಸ್ತಿ, ಷರತ್ತುಗಳು ಅನ್ವಯ: ಬ್ರಿಟನ್‌ನ ರಾಜಮನೆತನದ ಒಟ್ಟಾರೆ ಆಸ್ತಿ 2.23 ಲಕ್ಷ ಕೋಟಿ ರೂಪಾಯಿ. ಆದರೆ, ಇಲ್ಲಿ ಎರಡು ಮಾದರಿಯ ಆಸ್ತಿಗಳಿವೆ. ದಿ ಕ್ರೌನ್‌ (The Crown) ಎನ್ನುವ ಆಸ್ತಿ ರಾಯಲ್‌ ಕುಟುಂಬದ ಸರ್ವಶ್ರೇಷ್ಠ ಆಸ್ತಿ. ದಿ ಕ್ರೌನ್‌ ಎನ್ನುವ ಹೆಸರಿನಲ್ಲಿರುವ ಆಸ್ತಿಗೆ ಬ್ರಿಟನ್‌ನ ( British Royal Family) ಯಾರೊಬ್ಬರೂ ಹಕ್ಕುಬಾಧ್ಯರಲ್ಲ. ಇದನ್ನು ಬ್ರಿಟನ್‌ನ ರಾಣಿ ಅಥವಾ ರಾಜನಾದವರು ಅನುಭವಿಸಬಹುದಾದಂಥ ಆಸ್ತಿ ಮಾತ್ರ. ಎರಡನೆಯದು ರಾಜ ಹಾಗೂ ರಾಣಿಯರು ಹೊಂದಿರುವ ವೈಯಕ್ತಿಕ ಆಸ್ತ್ರಿಗಳು. ಲಂಡನ್‌ನಲ್ಲಿರುವ ಬಕಿಂಗ್‌ಹ್ಯಾಂ ಅರಮನೆಯು ದಿ ಕ್ರೌನ್‌ ಹೆಸರಿನಲ್ಲಿದೆ. ಇದು ರಾಣಿಯ ಅಧಿಕೃತ ನಿವಾಸವಾಗಿದ್ದರೂ, ಇದು ಅವರದಾಗಿರುವುದಿಲ್ಲ. ಇನ್ನು ಸ್ಕಾಟ್ಲೆಂಡ್‌ನ ಬಾಲ್ಮೋರಲ್‌ ಕ್ಯಾಸ್ಟ್ಲೆಯಲ್ಲಿರುವ ನಿವಾಸ, ರಾಣಿಯ ವೈಯಕ್ತಿಕ ಆಸ್ತಿ. ಈಗ ಈ ಅರಮನೆಯು ಹಿರಿಯ ಪುತ್ರನ ಹೆಸರಿಗೆ ಹೋಗಲಿದೆ. ಕ್ರೌನ್ ಹೆಸರಿನಲ್ಲಿರುವ ಆಸ್ತಿಯು ವ್ಯಕ್ತಿಯ ವೈಯಕ್ತಿಕ ಆಸ್ತಿಯಲ್ಲ ಅಥವಾ ಅದು ಸರ್ಕಾರಕ್ಕೆ ಸೇರಿದ್ದಲ್ಲ. ಆಸ್ತಿಯನ್ನು ಕ್ರೌನ್ ಸ್ಟೇಟ್ ಬೋರ್ಡ್ ನಿಯಂತ್ರಿಸುತ್ತದೆ.

ಬ್ರಿಟನ್‌ನ ರಾಜ-ರಾಣಿಯ ಹೆಸರಲ್ಲಿರುವ 2.23 ಲಕ್ಷ ಕೋಟಿ (ರೂಪಾಯಿಗಳಲ್ಲಿ) ಆಸ್ತಿಯ ವಿವರಗಳು
1. ರಾಜ ಅಥವಾ ರಾಣಿಯ ಕ್ರೌನ್ ಹೆಸರಿನಲ್ಲಿರುವ ಆಸ್ತಿಗಳು: 1.55 ಲಕ್ಷ ಕೋಟಿ
2. ಬಕಿಂಗ್‌ ಹ್ಯಾಂ ಅರಮನೆಯ ಒಟ್ಟು ಮೌಲ್ಯ: 39 ಸಾವಿರ ಕೋಟಿ
3. ಡಚಿ ಆಫ್ ಕಾರ್ನ್‌ವಾಲ್ ಹೆಸರಿನಲ್ಲಿರುವ ಆಸ್ತಿ: 10 ಸಾವಿರ ಕೋಟಿ
4. ಕೆನ್ಸಿಂಗ್ಟನ್ ಅರಮನೆಯ ಮೌಲ್ಯ: 5 ಸಾವಿರ ಕೋಟಿ
5. ಡಚಿ ಆಫ್ ಲ್ಯಾಂಕಾಸ್ಟರ್ ಹೆಸರಿನ ಆಸ್ತಿ: 5.96 ಸಾವಿರ ಕೋಟಿ
6. ಸ್ಕಾಟ್ಲೆಂಡ್‌ನಲ್ಲಿ ಕ್ರೌನ್ ಹೆಸರಿನಲ್ಲಿ ನಿವ್ವಳ ಆಸ್ತಿ: 4.71 ಸಾವಿರ ಕೋಟಿ

ರಾಣಿ ಅದ್ರೇನೂ ಸಮಸ್ಯೆ ತಪ್ಪಿರಲಿಲ್ಲ, ಮಗ, ಸೊಸೆ, ಮರಿಸೊಸೆಯ ವಿವಾದಗಳಿಗೆ ಮದ್ದು ಅರೆದಿದ್ದ ಎಲಿಜಬೆತ್‌!

4 ಸಾವಿರ ಕೋಟಿಯ ಒಡತಿ:  ಫೋರ್ಬ್ಸ್‌ ಮ್ಯಾಗಝೀನ್‌ನ ವರದಿಯ ಪ್ರಕಾರ ಬ್ರಿಟನ್‌ ರಾಣಿ ಎಲಿಜಬೆತ್‌ನ (Queen Elizabeth II) ಒಟ್ಟು ಆಸ್ತಿ 4 ಸಾವಿರ ಕೋಟಿ ರೂಪಾಯಿ. ಇದರಲ್ಲಿ ಆಕೆ ಮಾಡಿರುವ ಹೂಡಿಕೆಗಳು, ಕಲೆ, ದುಬಾರಿ ಬೆಲೆಯ ಸ್ಟೋನ್‌ಗಳು ಹಾಗೂ ರಿಯಲ್‌ ಎಸ್ಟೇಟ್‌ಗಳು ಸೇರಿವೆ. ಸ್ಯಾಂಡ್ರಿಂಗ್ಹ್ಯಾಮ್ ಹೌಸ್ (Sandringham House ) ಮತ್ತು ಬಾಲ್ಮೋರಲ್ ಫೋರ್ಟ್ (Balmoral Fort ) ಕೂಡ ರಾಣಿಯ ಖಾಸಗಿ ಆಸ್ತಿಯಾಗಿದೆ.

Queen Elizabeth II Passes Away: 10 ದಿನದ ನಂತರ ರಾಣಿಯ ಅಂತ್ಯಕ್ರಿಯೆ, ಹೊಸ ರಾಜನ ಕೈಗೆ ಮುತ್ತುಕೊಟ್ಟು ಸ್ವಾಗತ!

4500 ಕೋಟಿ ರೂಪಾಯಿಯ ಕಿರೀಟ: ರಾಣಿ ಎಲಿಜಬೆತ್ II ರ ಮನಮೋಹಕ ಮತ್ತು ಐಷಾರಾಮಿ ಜೀವನವನ್ನು ಅನುಭವಿಸುತ್ತಿದ್ದರು. 70 ವರ್ಷಗಳ ಕಾಲ ವಾಸಿಸುತ್ತಿದ್ದ ಬಕಿಂಗ್‌ ಹ್ಯಾಂ ಅರಮನೆ 775 ಕೊಠಡಿಗಳು ಮತ್ತು 78 ಸ್ನಾನಗೃಹಗಳನ್ನು ಹೊಂದಿದೆ. ಅಷ್ಟೇ ಅಲ್ಲ, ರಾಣಿಯ ಕಿರೀಟವನ್ನು 2900 ಅಮೂಲ್ಯ ವಜ್ರಗಳಿಂದ (Stone) ಅಲಂಕರಿಸಲಾಗಿತ್ತು. ಈ ಕಿರೀಟದ ವೆಚ್ಚ ಸುಮಾರು 4500 ಕೋಟಿಗಳು. ಈ ಕಿರೀಟದಲ್ಲಿ ಭಾರತದ ಕೊಹಿನೂರ್ ವಜ್ರವೂ ಅಡಕವಾಗಿದೆ. ಇದರೊಂದಿಗೆ ಇತರ ಅಮೂಲ್ಯ ವಜ್ರಗಳ ಬೆಲೆಯನ್ನು ನೀವು ಸೇರಿಸಿದರೆ, ಅದು ಸುಮಾರು 31 ಸಾವಿರ ಕೋಟಿ. ಇಷ್ಟೇ ಅಲ್ಲ, ಎಲಿಜಬೆತ್ 200 ಕ್ಕೂ ಹೆಚ್ಚು ವಿವಿಧ ಬಣ್ಣಗಳ ಕೈಚೀಲಗಳನ್ನು ಹೊಂದಿದ್ದರು.ಅದನ್ನು ಆಗಾಗ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರ. ರಾಣಿ ಎಲಿಜಬೆತ್ II ಲ್ಯಾಂಡ್ ರೋವರ್ ಕಾರನ್ನು ಪ್ರೀತಿಸುತ್ತಿದ್ದರು, ಅದರ ಹೆಸರು ಡಿಫೆಂಡರ್ ಎನ್ನುವುದಾಗಿತ್ತು. ಫೋರ್ಬ್ಸ್ ವರದಿಯ ಪ್ರಕಾರ, 2020 ರಲ್ಲಿ ರಾಜಮನೆತನಕ್ಕೆ 3.78 ಸಾವಿರ ಕೋಟಿ ರೂಪಾಯಿ ಸೇರಿದ ಆದಾಯವಿತ್ತು. ಅದರಲ್ಲಿ ಕೇವಲ 25% ಮಾತ್ರ ರಾಜಮನೆತನಕ್ಕೆ ಹೋಗಿದೆ, ಉಳಿದ 75% ಬ್ರಿಟಿಷ್ ಖಜಾನೆಗೆ ಸೇರಿದೆ.

Latest Videos
Follow Us:
Download App:
  • android
  • ios