ಕೆನಡಾ ಚುನಾವಣೆಯಲ್ಲಿ ಖಲಿಸ್ತಾನಿ ಪರ ನಾಯಕ ಜಗ್ಮಿತ್ ಸಿಂಗ್ ಸೋಲು ಕಂಡಿದ್ದು, ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ನವದೆಹಲಿ: ಕೆನಡಾ ಚುನಾವಣೆಯಲ್ಲಿ ಖಲಿಸ್ತಾನಿ ಬೆಂಬಲಿತ ನಾಯಕ ನ್ಯೂ ಡೆಮಾಕ್ರಟಿಕ್ ಪಾರ್ಟಿಯ ಮುಖ್ಯಸ್ಥ ಜಗ್ಮಿತ್ ಸಿಂಗ್ ಸೋಲು ಕಂಡಿದ್ದು, ಈ ಹಿನ್ನೆಲೆಯಲ್ಲಿ ಅವರು ತಮ್ಮ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆನಡಾ ಪ್ರಧಾನಿ ಮಾರ್ಕ್ ಕರ್ನಿ ಅವರ ಲಿಬರಲ್ ಪಕ್ಷವೂ ಅಧಿಕಾರಕ್ಕೆ ಬಂದರೂ ಅವರಿಗೆ ಸಂಪೂರ್ಣ ಬಹುಮತ ಸಿಕ್ಕಿಲ್ಲ. 

ನ್ಯೂ ಡೆಮಾಕ್ರಟಿಕ್ ಪಾರ್ಟಿಯ ಮುಖ್ಯಸ್ಥನೂ ಆಗಿದ್ದ ಜಗ್ಮಿತ್ ಸಿಂಗ್ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಬ್ರಿಟಿಷ್ ಕೊಲಂಬಿಯಾದ ಬರ್ನಾಬಿ ಸೆಂಟ್ರಲ್ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅವರು ಲಿಬರಲ್ ಅಭ್ಯರ್ಥಿ ವೇಡ್ ಚಾಂಗ್ ವಿರುದ್ಧ ಸೋಲು ಕಂಡಿದ್ದಾರೆ. ಜಗ್ಮಿತ್ ಸಿಂಗ್ ಸುಮಾರು ಶೇಕಡಾ 27 ರಷ್ಟು ಮತಗಳನ್ನು ಪಡೆದಿದ್ದರೆ ವೇಡೆ ಚಾಂಗ್ ಶೇಕಡಾ 40 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಹಾಗೆಯೇ ಜಗ್ಮಿತ್ ಸಿಂಗ್ ಅವರ ಪಕ್ಷವೂ ಕೂಡ ಹೀನಾಯ ಸೋಲು ಕಂಡಿದ್ದು, ಪಕ್ಷದ ರಾಷ್ಟ್ರೀಯ ಸ್ಥಾನಮಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೆನಡಾದಲ್ಲಿ ಪಕ್ಷಗಳು ರಾಜಕೀಯ ಸ್ಥಾನಮಾನ ಪಡೆದುಕೊಳ್ಳಲು ಕನಿಷ್ಠ 12 ಸೀಟುಗಳನ್ನಾದರೂ ಗಳಿಸಬೇಕು. 

ಇದನ್ನೂ ಓದಿ:ಕೆನಡಾದಲ್ಲಿ ಎಎಪಿ ನಾಯಕ ಪುತ್ರಿಯ ನಿಗೂಢ ಸಾವು

ನ್ಯೂ ಡೆಮೋಕ್ರಾಟ್‌ ಪಕ್ಷಕ್ಕೆ ಈ ರಾತ್ರಿ ನಿರಾಶಾದಾಯಕವಾಗಿದೆ ಎಂದು ನನಗೆ ತಿಳಿದಿದೆ. ಆದರೆ ನಾವು ಎಂದಿಗೂ ಉತ್ತಮ ಕೆನಡಾದ ಕನಸು ಕಾಣಲು ಸಾಧ್ಯವಿಲ್ಲ ಎಂದು ಹೇಳುವವರನ್ನು ನಂಬಿದಾಗ ಮಾತ್ರ ನಮಗೆ ಅದು ನಿಜವಾದ ಸೋಲು ಆಗುತ್ತದೆ ಜಗ್ಮಿತ್ ಸಿಂಗ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 2017ರಲ್ಲಿ ಸಿಂಗ್ ನ್ಯೂ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿದ್ದರು. ತಮ್ಮ ಪಕ್ಷವೂ ಹೆಚ್ಚಿನ ಸೀಟು ಗೆದ್ದಿಲ್ಲದೇ ಇರೋದ್ರಿಂದ ಬಹಳ ಬೇಜಾರಾಗಿದೆ. ಆದರೆ ನಮ್ಮ ಚಳುವಳಿಯ ಬಗ್ಗೆ ನನಗೆ ಬೇಸರವಿಲ್ಲ, ನಾನು ನಮ್ಮ ಪಕ್ಷದ ಬಗ್ಗೆ ಭರವಸೆ ಹೊಂದಿದ್ದೇನೆ ಎಂದು ಹೇಳಿದ್ದಾರೆ. 

ನಾವು ಯಾವಾಗಲೂ ಭಯಕ್ಕಿಂತ ಭರವಸೆಯನ್ನು ಆರಿಸಿಕೊಳ್ಳುತ್ತೇವೆ. ನ್ಯೂ ಟೆಮಾಕ್ರಟಿಕ್‌ ಈ ದೇಶವನ್ನು ನಿರ್ಮಿಸಿತು. ನಾವು ಕೆನಡಾಗೆ ಅತ್ಯುತ್ತಮವಾದದ್ದನ್ನು ನಿರ್ಮಿಸಿದ್ದೇವೆ. ಮತ್ತು ನಾವು ಎಲ್ಲಿಗೂ ಹೋಗುವುದಿಲ್ಲ, ಹೋರಾಟದ ಬದಲು ಆಶಾವಾದವನ್ನು ಆಯ್ಕೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ:ಚೀನಾಗೆ ಕಾಶ್ಮೀರ ಜಾಗದ ಆಫರ್, ಪ್ರತಿಯಾಗಿ ಭಾರತಕ್ಕೆ ಬ್ರಹ್ಮಪುತ್ರ ನದಿ ನೀರು ನಿಲ್ಲಿಸಲು ಪಾಕ್ ಮನವಿ

ಕೆನಡಾ ಚುನಾವಣೆಯಲ್ಲಿ ಪ್ರಧಾನಿ ಮಾರ್ಕ್ ಕಾರ್ನಿಯ ಲಿಬರಲ್‌ಗೆ ಗೆಲುವು
ಕೆನಡಾದ ಸಾರ್ವಜನಿಕ ಪ್ರಸಾರಕ ಸಿಬಿಸಿ ಮತ್ತು ಇತರ ಮಾಧ್ಯಮಗಳು ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಲಿಬರಲ್ಸ್ ಕೆನಡಾದ ಮುಂದಿನ ಸರ್ಕಾರವನ್ನು ರಚಿಸುತ್ತವೆ ಎಂದು ಊಹಿಸಿವೆ . ಆದರೂ ಅವರ ಪಕ್ಷ ಸಂಸತ್ತಿನಲ್ಲಿ ಬಹುಮತವನ್ನು ಪಡೆಯುವ ಬಗ್ಗೆ ಇನ್ನೂ ಸಂಶಯವಿದೆ. ಅವರ ಲಿಬರಲ್‌ ಪಕ್ಷದ ಅಭ್ಯರ್ಥಿಗಳು 164 ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ 147 ಸ್ಥಾನಗಳೊಂದಿಗೆ ಕನ್ಸರ್ವೇಟಿವ್‌ ಪಕ್ಷ ಇದೆ ಇನ್ನು ಮತ ಎಣಿಕೆ ನಡೆಯುತ್ತಿದೆ. ಸತತ ನಾಲ್ಕು ಚುನಾವಣೆಗಳಲ್ಲಿ ಗೆದ್ದಿರುವ ಲಿಬರಲ್‌ ಪಕ್ಷವೂ, ಸಣ್ಣ ಪಕ್ಷದ ಬೆಂಬಲವಿಲ್ಲದೆ ಆಡಳಿತ ನಡೆಸಲು ಅನುವು ಮಾಡಿಕೊಡುವ ಬಹುಮತಕ್ಕಾಗಿ ಹೌಸ್ ಆಫ್ ಕಾಮನ್ಸ್‌ನಲ್ಲಿ 172 ಸ್ಥಾನಗಳನ್ನು ಪಡೆದುಕೊಳ್ಳಬೇಕಾಗುತ್ತದೆ.


ಎಎಪಿ ನಾಯಕನ ಪುತ್ರಿ ಕೆನಡಾದಲ್ಲಿ ಶವವಾಗಿ ಪತ್ತೆ

ಚಂಡೀಗಢ: ಕೆನಡಾದಲ್ಲಿ ಈಗ ಪಂಜಾಬ್ ಮೂಲದ ಎಎಪಿ ನಾಯಕನ ಪುತ್ರಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಹಲವು ಅನುಮಾನ ಮೂಡಿದೆ. 21 ವರ್ಷದ ವಂನ್ಶಿಕಾ ಸೈನಿ ನಿಗೂಢವಾಗಿ ಸಾವನ್ನಪ್ಪಿದ ಯುವತಿ. ಈಕೆ ಪಂಜಾಬ್‌ ಎಎಪಿ ನಾಯಕ ದವೀಂದರ್ ಸೈನಿಯವರ ಪುತ್ರಿಯಾಗಿದ್ದು, ಏಪ್ರಿಲ್ 22ರಿಂದಲೂ ಈಕೆ ನಾಪತ್ತೆಯಾಗಿದ್ದಳು. ಆದರೆ ಈಗ ಆಕೆಯ ಶವ ಕೆನಡಾದ ಒಟ್ಟವಾದಲ್ಲಿ ಪತ್ತೆಯಾಗಿದೆ. ಕೆನಡಾದ ರಾಜಧಾನಿ ಒಟ್ಟವಾದ ಕಡಲತೀರದ ಬಳಿ ವಂನ್ಶಿಕಾ ಸೈನಿ ಶವ ಪತ್ತೆಯಾಗಿದೆ. ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಂನ್ಶಿಕಾ ಸೈನಿ ಏಪ್ರಿಲ್ 22ರಿಂದಲೂ ನಾಪತ್ತೆಯಾಗಿದ್ದಳು. ಅಂದು ಮನೆ ಬಿಟ್ಟು ಹೋದ ಹುಡುಗಿ ಮತ್ತೆ ವಾಪಸ್ ಬಂದಿರಲಿಲ್ಲ.