ಚೀನಾದ ಎಕಾನಾಮಿಕ್ ಕಾರಿಡಾರ್ ಯೋಜನೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತಷ್ಟು ಅನುಕೂಲತೆ ಕಲ್ಪಿಸಲು ಆಫರ್ ಮುಂದಿಟ್ಟು ವಿಶೇಷ ಬೇಡಿಕೆಯನ್ನು ಚೀನಾ ಮುಂದಿಟ್ಟಿದೆ. ಭಾರತಕ್ಕೆ ಹರಿಯುವ ಬ್ರಹ್ಮಪುತ್ರ ನದಿ ನೀರು ನಿಲ್ಲಿಸಲು ಪಾಕಿಸ್ತಾನ ಚೀನಾ ಬಳಿ ಮನವಿ ಮಾಡಿದೆ.

ನವದೆಹಲಿ(ಏ.29) ಪೆಹಲ್ಗಾಂ ದಾಳಿ ಬಳಿಕ ಭಾರತ ಕೈಗೊಂಡ ನಿರ್ಧಾರಗಳಿಂದ ಪಾಕಿಸ್ತಾನ ಕಂಗಾಲಾಗಿದೆ. ಪ್ರಮುಖವಾಗಿ ಸಿಂಧೂ ನದಿ ಒಪ್ಪಂದ ರದ್ದು ಹಾಗೂ ವಾಘಾ ಘಡಿ ಬಂದ್ ನಿರ್ಧಾರ ಪಾಕಿಸ್ತಾನವನ್ನು ಮತ್ತಷ್ಟು ಹೈರಾಣಾಗಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡುತ್ತಿದೆ. ಇದೀಗ ಚೀನಾಗೆ ಕೆಲ ಆಫರ್ ಮುಂದಿಟ್ಟು, ಭಾರತದಕ್ಕೆ ಬ್ರಹ್ಮಪುತ್ರ ನದಿ ನೀರನ್ನು ನಿಲ್ಲಿಸಲು ಚೀನಾ ಮನವಿ ಮಾಡಿದೆ ಅನ್ನೋ ವರದಿ ಬಹಿರಂಗವಾಗಿದೆ. 

ಸಿಂಧೂ ನದಿಗೆ ಪ್ರತಿಯಾಗಿ ಬ್ರಹ್ಮಪುತ್ರ ಅಸ್ತ್ರ
ಭಾರತದ ಬ್ರಹ್ಮಪುತ್ರ ನದಿ ಚೀನಾದಲ್ಲಿ ಹುಟ್ಟಿ, ಭಾರತದ ಮೂಲಕ ಬಾಂಗ್ಲಾದೇಶಕ್ಕೆ ಹರಿದು ಸಮುದ್ರ ಸೇರುತ್ತಿದೆ. ಬ್ರಹ್ಮಪುತ್ರ ಭಾರತದ ಈಶಾನ್ಯ ರಾಜ್ಯಗಳ ಪ್ರಮುಖ ಆಧಾರಸ್ತಂಬವಾಗಿದೆ. ಚೀನಾದಲ್ಲಿ ನದಿ ಹುಟ್ಟಿದರೂ ಶೇಕಡಾ 80 ರಷ್ಟು ನೀರು ಭಾರತದಲ್ಲಿ ಹರಿಯುತ್ತದೆ. ಇದೀಗ ಸಿಂಧೂ ನದಿ ಒಪ್ಪಂದ ರದ್ದು ಮಾಡಿದ ಕಾರಣಕ್ಕೆ ಪಾಕಿಸ್ತಾನ ಪ್ರತಿಯಾಗಿ ಚೀನಾ ಮೂಲಕ ಭಾರತದ ಮೇಲೆ ಒತ್ತಡ ಹೇರವ ತಂತ್ರ ಪ್ರಯೋಗಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಸರ್ಕಾರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಪಿಂಗ್‌ಗೆ ಬ್ರಹ್ಮಪುತ್ರ ನದಿ ನೀರು ನಿಲ್ಲಿಸಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಪೆಹಲ್ಗಾಂ ದಾಳಿ: ಜಿಪ್‌ಲೈನ್ ಸವಾರಿ ವಿಡಿಯೋದಲ್ಲಿ ಅನುಮಾನ ಮೂಡಿಸಿದ ಆಪರೇಟರ್ ಘೋಷಣೆ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುವ ಚೀನಾ ಕಾರಿಡಾರ್‌ಗೆ ಅನುಕೂಲ
ಪಾಕಿಸ್ತಾನ ಹೇಳಿದ ತಕ್ಷಣ ಚೀನಾ ಬ್ರಹ್ಮಪುತ್ರ ನದಿ ನೀರು ನಿಲ್ಲಿಸಲ್ಲ ಅನ್ನೋ ವಿಚಾರ ಪಾಕಿಸ್ತಾನಕ್ಕೂ ತಿಳಿದಿದೆ. ಇದಕ್ಕಾಗಿ ಪಾಕಿಸ್ತಾನ ಹೊಸ ತಂತ್ರ ಪ್ರಯೋಗಿಸಿದೆ. ಚೀನಾದ ಬಹುನಿರೀಕ್ಷಿತ ಎಕಾನಾಮಿಕ್ ಕಾರಿಡಾರ್ ಪ್ರಗತಿಯಲ್ಲಿದೆ. ಇದರ ಬಹುಪಾಲು ಹಾದು ಹೋಗುತ್ತಿರುವುದು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ. ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚಿನ ಪ್ರದೇಶ ಹಾಗೂ ಇತರ ಅನುಕೂಲತೆ ಮಾಡಿಕೊಡುವುದಾಗಿ ಚೀನಾಗೆ ಆಫರ್ ನೀಡಲಾಗಿದೆ.

ನೀರು ನಿಲ್ಲಿಸುತ್ತಾ ಚೀನಾ?
ಭಾರತ ಅಧಿಕೃತವಾಗಿ ಭಯೋತ್ಪಾದಕರ ವಿರುದ್ದ ಹೋರಾಡಲಿದೆ ಎಂದು ಹೇಳಿದೆ. ಪ್ರಧಾನಿ ಮೋದಿ ಕೂಡ ಪೆಹಲ್ಗಾಂನಲ್ಲಿ ದಾಳಿ ಮಾಡಿದ ಉಗ್ರರನ್ನು ಭಾರತ ಪತ್ತೆ ಹಚ್ಚಲಿದೆ. ಅವರಿಗೆ ಊಹೆಗೂ ನಿಲುಕ ಶಿಕ್ಷೆ ನೀಡಲಿದೆ ಎಂದಿದ್ದಾರೆ. ದಾಳಿ ಹಿಂದೆ ಪಾಕಿಸ್ತಾನದ ಕೈವಾಡವಿದೆ ಅನ್ನೋದು ಅಷ್ಟೇ ಸತ್ಯ. ಉಗ್ರರ ವಿರುದ್ಧದ ಹೋರಾಟದಲ್ಲಿ ಚೀನಾ ಅಡ್ಡಗಾಲು ಹಾಕಿದರೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಹೊಡೆತ ಬೀಳಲಿದೆ. ಇಷ್ಟೇ ಅಲ್ಲ ಭಾರತ ಹಾಗೂ ಚೀನಾ ನಡುವೆ ಉಗ್ರತ್ವದ ಹೋರಾಟವಿಲ್ಲ. ಗಡಿ ತಕರಾರು ಮಾತ್ರ. ಗಡಿ ತಕರಾರು ಕುರಿತು ಹಲವು ಸುತ್ತಿನ ಮಾತುಕತೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಈ ಮಾತುಕತೆ ಹೆಚ್ಚಾಗಿದೆ. ಹೀಗಾಗಿ ಪಾಕಿಸ್ತಾನದ ಮನವಿ ಆಧರಿಸಿ ಭಾರತಕ್ಕೆ ಬ್ರಹ್ಮಪುತ್ರ ನದಿ ನೀರು ನಿಲ್ಲಿಸುವ ಸಾಹಸಕ್ಕೆ ಚೀನಾ ಕೈಹಾಕುವ ಸಾಧ್ಯತೆ ಕಡಿಮೆ. 

ಭಾರತದ ಟಾರ್ಗೆಟ್ ಉಗ್ರರು
ಭಾರತ ತನ್ನ ಅಧಿಕೃತ ಹೇಳಿಕೆಯಲ್ಲಿ ಉಗ್ರರ ಟಾರ್ಗೆಟ್ ಮಾಡಿ ಹತ್ಯೆ ಮಾಡಲಿದೆ ಎಂದು ಎಚ್ಚರಿಸಿದೆ. ಉಗ್ರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದರೂ ಸರಿ, ಅಥವಾ ಪಾಕಿಸ್ತಾನದ ಸುಭದ್ರ ಕೋಟೆಯಲ್ಲಿದ್ದರೂ ಸರಿ. ಎಲ್ಲಿದ್ದರೂ ದಾಳಿ ನಿಶ್ಚಿತ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದರೆ, ಏರ್‌ಸ್ಟ್ರಕ್, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಕೆಲ ದಾಳಿ ಈಗಾಗಲೇ ಭಾರತ ಮಾಡಿ ತೋರಿಸಿದೆ. ಇನ್ನು ಪಾಕಿಸ್ತಾನ ರಕ್ಷಣೆಯಲ್ಲಿದ್ದರೂ ಅಪರಿಚಿತನ ಗುಂಡಿನ ದಾಳಿಗೆ ಹತ್ಯೆಯಾದ ಭಾರತದ ಮೋಸ್ಟ್ ವಾಂಟೆಟ್ ಉಗ್ರ ಅನ್ನೋ ಪರಿಪಾಠವನ್ನು ಮಾಡಲಾಗಿದೆ. ಇದರ ಫಲ ಫಾಕಿಸ್ತಾನ ಅನುಭವಿಸಬೇಕು ಅನ್ನೋದು ಖಚಿತ. ಹೀಗಾಗಿ ಅಂತಾರಾಷ್ಟ್ರೀಯ ವೇದಿಕೆಗಳು ಭಾರತವನ್ನು ಬೊಟ್ಟು ಮಾಡಲು ಸಾಧ್ಯವಿಲ್ಲ. ಭಾರತ ಎಲ್ಲೂ ಪಾಕಿಸ್ತಾನ ಮೇಲೆ ದಾಳಿ ಮಾಡುತ್ತೆ ಎಂದು ಹೇಳಿಲ್ಲ. 

ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲ, ರಾಜ್ಯ ಸ್ಥಾನಮಾನ ಕೇಳಲ್ಲ; ಸಿಎಂ ಓಮರ್ ಭಾವುಕ