Asianet Suvarna News Asianet Suvarna News

ಸೆ.22ರಿಂದ ಮೋದಿ 5 ದಿನ ಅಮೆರಿಕ ಪ್ರವಾಸ ಸಾಧ್ಯ​ತೆ: ಹೌಡಿ ಮೋದಿ ಬಳಿಕ ಮೊದಲ ಭೇಟಿ!

* 2019ರ ಬಳಿಕ ಮೊದಲ ಅಮೆ​ರಿಕ ಪ್ರವಾ​ಸ

* ಕ್ವಾಡ್‌ ಶೃಂಗದ ನಿಗದಿ ಆಧಾ​ರ​ದಲ್ಲಿ ಭೇಟಿ ಕುರಿತು ನಿರ್ಧಾ​ರ

* ಬೈಡೆನ್‌ ಜತೆ ದ್ವಿಪ​ಕ್ಷೀಯ ಚರ್ಚೆ ನಿರೀ​ಕ್ಷೆ

* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಭಾಗಿ ಸಾಧ್ಯ​ತೆ

PM Modi likely to visit US in September President Joe Biden Report pod
Author
Bangalore, First Published Sep 5, 2021, 10:01 AM IST

ನವದೆಹಲಿ(ಸೆ.05): ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ನಿರೀ​ಕ್ಷೆ​ಯಿ​ದೆ. ಅಮೆ​ರಿಕ ಅಧ್ಯಕ್ಷ ಜೋ ಬೈಡೆನ್‌ ಅಧ್ಯ​ಕ್ಷ​ತೆ​ಯ​ಲ್ಲಿ ‘ಕ್ವಾಡ್‌’ (ಆಸ್ಪ್ರೇ​ಲಿ​ಯಾ, ಅಮೆ​ರಿ​ಕ, ಜಪಾನ್‌, ಭಾರ​ತದ ಒಕ್ಕೂ​ಟ) ಶೃಂಗ ಸಮ್ಮೇ​ಳನ ನಡೆ​ಯುವ ನಿರೀ​ಕ್ಷೆ​ಯಿದ್ದು, ಶೃಂಗ ಖಚಿ​ತ​ಪ​ಟ್ಟರೆ ಮೋದಿ ಭೇಟಿ ಕುರಿ​ತ ಅಂತಿಮ ತೀರ್ಮಾನ ಆಗುವ ಸಾಧ್ಯ​ತೆ ಇದೆ.

3 ವರ್ಷಗಳಲ್ಲಿ ಮೋದಿ ಫಾರಿನ್ ಟೂರ್’ಗೆ 255 ಕೋಟಿ ರೂ. ಖರ್ಚು!

ಸಂಭಾವ್ಯ ವೇಳಾ​ಪ​ಟ್ಟಿಯ ಪ್ರಕಾರ ಪ್ರವಾ​ಸ ಸೆ.22ರಿಂದ 27ರವ​ರೆಗೆ ನಡೆ​ಯ​ಲಿದೆ. ಭೇಟಿ 3 ಉದ್ದೇ​ಶ​ಗ​ಳನ್ನು ಹೊಂದಿದೆ. ಅವು: ಕ್ವಾಡ್‌ ಶೃಂಗ ಸಮ್ಮೇ​ಳನ, ಜೋ ಬೈಡೆನ್‌ ಜತೆ ದ್ವಿಪ​ಕ್ಷೀಯ ಮಾತು​ಕತೆ ಹಾಗೂ ವಿಶ್ವ​ಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆ​ಯಲ್ಲಿ ಭಾಷ​ಣ.

ಆದರೆ ಕೆಲವು ವಿದ್ಯ​ಮಾ​ನ​ಗಳ ಕಾರಣ ಜಪಾನ್‌, ವರ್ಚು​ವಲ್‌ ಶೃಂಗಕ್ಕೆ ಬೇಡಿಕೆ ಇಟ್ಟಿದೆ. ಹೀಗಾಗಿ ಕ್ವಾಡ್‌ ಶೃಂಗ​ಸಭೆ ಭೌತಿಕ ರೂಪ​ದಲ್ಲಿ ನಡೆ​ಯುವ ಬಗ್ಗೆ ಅನು​ಮಾನ ಸೃಷ್ಟಿ​ಯಾ​ಗಿದೆ. ಹೀಗಾಗಿ ಮೋದಿ ಭೇಟಿಯ ಅಂತಿಮ ನಿರ್ಧಾರ ಆಗಿ​ಲ್ಲ. ಈ ಶೃಂಗದ ನಿಗದಿ ಆಧಾ​ರ​ದಲ್ಲಿ ಮೋದಿ ಭೇಟಿ ಅಂತಿಮವಾಗುವ ಸಾಧ್ಯತೆ ಇದೆ ಎಂದು ಮೂಲ​ಗಳು ಹೇಳಿ​ವೆ.

'ಇಂಡಿಯನ್ ಅಮೆರಿಕನ್ನರ ಓಟ್ ನನಗೆ': ಇದು ಮೋದಿ ಬೆಂಬಲ ಎಂದ ಟ್ರಂಪ್

2019ರಲ್ಲಿ ಟ್ರಂಪ್‌ ಅಧ್ಯಕ್ಷರಾಗಿದ್ದಾಗ ಅಮೆರಿಕಕ್ಕೆ ಭೇಟಿ ನೀಡಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಇದಾದ ನಂತರ ಕೊರೋನಾ ಹಾವಳಿ ಆರಂಭ​ವಾ​ಗಿ, ಅವರು ಅಮೆ​ರಿ​ಕಕ್ಕೆ ಭೇಟಿ ನೀಡಿ​ಲ್ಲ.

Follow Us:
Download App:
  • android
  • ios