ನವದೆಹಲಿ(ನ.22): ಪ್ರಧಾನಿ ಮೋದಿ ವಿದೇಶ ಪ್ರವಾಸಗಳಿಗೆ ಹೆಸರುವಾಸಿ. ಪ್ರಧಾನಿಯಾದಾಗಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ವಿದೇಶಗಳನ್ನು ಸುತ್ತುತ್ತಿರುವ ಮೋದಿ, ಭಾರತದ ಕುರಿತಾದ ಜಗತ್ತಿನ ವ್ಯಾಖ್ಯಾನವನ್ನು ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅದರಂತೆ ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿ ವಿದೇಶ ಯಾತ್ರೆಗಳಿಗೆ ಸರ್ಕಾರದ ಖಜಾನೆಯಿಂದ ಬರೋಬ್ಬರಿ 255 ಕೋಟಿ ರೂ. ನೀಡಲಾಗಿದೆ ಎಂಬುದು ಬಹಿರಂಗವಾಗಿದೆ.

'ಹೌಡಿ ಮೋದಿ' ಆಗ್ತಿದ್ದಂಗೇ 'ಸವಸ್ದಿ ಮೋದಿ'ಗೆ ಹೊರಟ ಪ್ರಧಾನಿ!

ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿರುವ ವಿದೇಶಾಂಗ ರಾಜ್ಯ ಸಚಿವ ವಿ ಮುರುಳಿಧರನ್, ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ವಿದೇಶ ಪ್ರವಾಸಕ್ಕೆ 255 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸದ ಖರ್ಚು ಇಂತಿದೆ:

2016-17- 76.27 ಕೋಟಿ ರೂ.
2017-18- 99.32 ಕೋಟಿ ರೂ.
2018-19- 79.91 ಕೋಟಿ ರೂ.

ಕಳೆದ ಆಗಸ್ಟ್’ನಿಂದ ನವೆಂಬರ್’ವರೆಗೆ ಪ್ರಧಾನಿ ಮೋದಿ 7 ವಿದೇಶ ಯಾತ್ರೆಗಳನ್ನು ಕೈಗೊಂಡಿದ್ದು, 9 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಮುರುಳಿಧರನ್ ಮಾಹಿತಿ ನೀಡಿದ್ದಾರೆ.

ಸೌದಿಗೆ ಪ್ರವಾಸ: ಪ್ರಧಾನಿ ಮೋದಿಗೆ ವೈಮಾನಿಕ ಮಾರ್ಗ ಅನುಮತಿ ನಿರಾಕರಿಸಿದ ಪಾಕ್

ಪ್ರಧಾನಿ ಮೋದಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿಂತ ದುಪ್ಪಟ್ಟು ವಿದೇಶ ಯಾತ್ರೆಗಳನ್ನು ಕೈಗೊಂಡಿರುವುದು ವಿಶೇಷ.

ರಾಷ್ಟ್ರಪತಿ ರಾಮನಾಥ್ ಕೋವಿಂದ್:
ಕಳೆದ ಆಗಸ್ಟ್’ನಿಂದ ನವೆಂಬರ್’ವರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ 3 ವಿದೇಶ ಯಾತ್ರೆಗಳನ್ನು ಕೈಗೊಂಡಿದ್ದು, 7 ದೇಶಗಳಿಗೆ ಭೇಟಿ ನೀಡಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು:
ಕಳೆದ ಆಗಸ್ಟ್’ನಿಂದ ನವೆಂಬರ್’ವರೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು 3 ವಿದೇಶ ಯಾತ್ರೆಗಳನ್ನು ಕೈಗೊಂಡಿದ್ದು, 6 ದೇಶಗಳಿಗೆ ಭೇಟಿ ನೀಡಿದ್ದಾರೆ.

ವಿದೇಶಾಂಗ ಸಚಿವ ಜೈಶಂಕರ್:
ಕಳೆದ ಆಗಸ್ಟ್’ನಿಂದ ನವೆಂಬರ್’ವರೆಗೆ ವಿದೇಶಾಂಗ ಸಚಿವ  ಜೈಶಂಕರ್ 13 ವಿದೇಶ ಯಾತ್ರೆಗಳನ್ನು ಕೈಗೊಂಡಿದ್ದು, 16 ದೇಶಗಳಿಗೆ ಭೇಟಿ ನೀಡಿದ್ದಾರೆ.

ವಿದೇಶಾಂಗ ರಾಜ್ಯ ಸಚಿವ ಮುರುಳಿಧರನ್:
ಕಳೆದ ಆಗಸ್ಟ್’ನಿಂದ ನವೆಂಬರ್’ವರೆಗೆ ವಿದೇಶಾಂಗ ರಾಜ್ಯ ಸಚಿವ ಮುರುಳಿಧರನ್ 10 ವಿದೇಶ ಯಾತ್ರೆಗಳನ್ನು ಕೈಗೊಂಡಿದ್ದು, 16 ದೇಶಗಳಿಗೆ ಭೇಟಿ ನೀಡಿದ್ದಾರೆ.

ಕಳೆದ ಆಗಸ್ಟ್’ನಿಂದ ನವೆಂಬರ್’ ಅವಧಿಯಲ್ಲಿ ಜರ್ಮನ್ ಚಾನ್ಸಲರ್ ಏಂಜಲಾ ಮಾರ್ಕೆಲ್, ಚೀನಾ ಅಧ್ಯಕ್ಷ ಕ್ಸಿ ಜಿನ್’ಪಿಂಗ್ ಭಾರತಕ್ಕೆ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದಾರೆ.