'ಇಂಡಿಯನ್ ಅಮೆರಿಕನ್ನರ ಓಟ್ ನನಗೆ': ಇದು ಮೋದಿ ಬೆಂಬಲ ಎಂದ ಟ್ರಂಪ್

ಭಾರತ ಮತ್ತು ಅಮೆರಿಕ ನಡುವಿನ ಉತ್ತಮ ಸಂಬಂಧ, ವೈಯಕ್ತಿಕವಾಗಿ ಮೋದಿ ಜೊತೆಗಿನ ಸ್ನೇಹದಿಂದ ಮತಗಳು ನನಗೆ ಸಿಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Indian Americans will vote for me have great support from Prime Minister Modi says Donald Trump

ನವದೆಹಲಿ(ಸೆ.05): ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇಂಡಿಯನ್ ಅಮೆರಿಕನ್ನರ ಮತ ನನಗೆ ಸಿಗಲಿದೆ. ಭಾರತ ಮತ್ತು ಅಮೆರಿಕ ನಡುವಿನ ಉತ್ತಮ ಸಂಬಂಧ, ವೈಯಕ್ತಿಕವಾಗಿ ಮೋದಿ ಜೊತೆಗಿನ ಸ್ನೇಹದಿಂದ ಮತಗಳು ನನಗೆ ಸಿಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಹಾಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮವನ್ನು ನೆಪಿಸಿಕೊಂಡ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ನನಗೆ ಉತ್ತಮ ಸಂಬಂಧವಿದೆ. ಮೋದಿ ನನ್ನ ಸ್ನೇಹಿತ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಚುನಾವಣೆ ಗೆಲ್ಲಲು ಮೋದಿ ವಿಡಿಯೋಗೆ ಟ್ರಂಪ್‌ ಮೊರೆ!

ಈ ಬೃಹತ್ ಕಾರ್ಯಕ್ರಮಕ್ಕೆ  ಪ್ರಧಾನಿ ಮೋದಿಯವರು ಆಹ್ವಾನಿಸಿದ್ದರು, ಒಬ್ಬ ಪ್ರಧಾನಿ ಇದಕ್ಕೂ ಹೆಚ್ಚು ಉದಾರವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಡೆಮಾಕ್ರೇಟ್ಸ್‌ಗೆ ಮತ ಚಲಾಯಿಸುತ್ತಿದ್ದ ಇಂಡಿಯನ್ ಅಮೆರಿಕನ್ನರು ಮೋದಿ ಜೊತೆಗಿನ ಟ್ರಂಪ್ ಸ್ನೇಹದ ನಂತರ ರಿಪಬ್ಲಿಕನ್ ಪಕ್ಷಕ್ಕೆ ಮತ ಚಲಾಯಿಸುತ್ತಿದ್ದಾರೆ ಎಂಬುದು ಇತ್ತೀಚಿನ ಮಾಸನ್ ಇನ್ ಬಾಟಲ್‌ಗ್ರೌಂಡ್‌ನಲ್ಲಿ ತಿಳಿದು ಬಂದಿದೆ.

Indian Americans will vote for me have great support from Prime Minister Modi says Donald Trump

ಪ್ರಧಾನಿ ಮೋದಿ ಅಮೆರಿಕದಲ್ಲಿ ದೊಡ್ಡ ಸಮುದಾಯದಲ್ಲಿ ಪ್ರಭಾವಶಾಲಿ ವ್ಯಕ್ತಿ. ವಿಶೇಷವಾಗಿ ಇಂಡಿಯನ್ ಅಮೆರಿಕನ್ನರ ಮಧ್ಯೆ ಮೋದಿ ಜನಪ್ರಿಯತೆ ಹೆಚ್ಚಿದೆ. ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ಜೋ ಬಿಡನ್‌ನ ಪ್ರತಿದಿನಿಧಿಯಾಗಿ ಆಯ್ಕೆ ಮಾಡಿ ಭಾರತೀಯ-ಅಮೆರಿಕನ್ ಮತಗಳನ್ನು ರಿಪಬ್ಲಿಕ್ ಪಕ್ಷಕ್ಕೆ ವರ್ಗಾಯಿಸುವುದೇ ಇದರ ಹಿಂದಿನ ಉದ್ದೇಶ.

ಪೋರ್ನ್ ನಟಿ ಜೊತೆ ಟ್ರಂಪ್ ಸಂಬಂಧ: 33 ಲಕ್ಷ ಪಾವತಿಸಲು ಅಧ್ಯಕ್ಷನಿಗೆ ಕೋರ್ಟ್ ಆದೇಶ!

ಚುನಾವಣೆಯಲ್ಲಿ ಇಂಡಿಯನ್ ಅಮೆರಿಕನ್ನರ ಪಾತ್ರ ಬಹಳ ಮಹತ್ವ ಎಂದು ಟ್ರಂಪ್ ತಂಡ ನಂಬುತ್ತದೆ. 2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.85ರಷ್ಟು ಇಂಡಿಯನ್ ಅಮೆರಿಕನ್ಸ್ ಮತಗಳು ಡೆಮಾಕ್ರೆಟಿಕ್ ಪಕ್ಷಕ್ಕೆ ಹೋಗಿತ್ತು. ಅಮೆರಿಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಸಮುದಾಯದಲ್ಲಿ ಇಂಡಿಯನ್ ಅಮೆರಿಕನ್ನರ ಗುಂಪೂ ಮುಂಚೂಣಿಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಇಂಡಿಯನ್ ಅಮೆರಿಕನ್ನರು ಅಲ್ಲಿನ ರಾಜಕೀಯದಲ್ಲೂ ಹೆಚ್ಚು  ಭಾಗವಹಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios