ಪಾಕಿಸ್ತಾನದ ನಾಯಕ, ಸಂಸದರೊಬ್ಬರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವೇಳೆ ಭಾರತ ಚಂದ್ರಯಾನ-3 ಯಶಸ್ಸನ್ನು ಹಾಡಿ ಹೊಗಳಿದ್ದಾರೆ. ಈ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ನಾಯಕ, ಸಂಸದ ಸೈಯ್ಯದ್ ಮುಸ್ತಾಫಾ ಕಮಾಲ್ ಭಾಷಣದ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುತಾಹಿದಾ ಕೌಮಿ ಮೂವಮೆಂಟ್ (MQM-P) ಪಕ್ಷದಲ್ಲಿ ಮುಸ್ತಾಫಾ ಕಮಾಲ್ ಗುರುತಿಸಿಕೊಂಡಿದ್ದಾರೆ. ಬುಧವಾರ ಕರಾಚಿಯ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಮುಸ್ತಾಫಾ ಭಾರತವನ್ನು ಹಾಡಿ ಹೊಗಳಿದ್ದಾರೆ.
ಪಾಕಿಸ್ತಾನದ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾವನ್ನಪ್ಪುತ್ತಿದ್ದಾರೆ. ಇತ್ತ ನಮ್ಮ ನೆರೆಯ ರಾಷ್ಟ್ರ ಭಾರತ ಚಂದ್ರನ ಮೇಲೆ ಹೋಗುತ್ತಿದೆ ಎಂದು ಹೇಳುವ ಮೂಲಕ ಕರಾಚಿಯಲ್ಲಿಯ ಚರಂಡಿಗಳಿಗೆ (Manhole) ಮುಚ್ಚಳ ಇಲ್ಲದಿರುವ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸಿದರು. ಈ ಸಮಸ್ಯೆಯಿಂದ ಮಕ್ಕಳು ಚರಂಡಿಗೆ ಬಿದ್ದು ಸಾವನ್ನಪ್ಪುತ್ತಿರೋ ಪ್ರಕರಣಗಳು ವರದಿಯಾಗುತ್ತಿವೆ.
ಚರಂಡಿಯಲ್ಲಿ ಬಿದ್ದು ಮಕ್ಕಳು ಸಾಯುತ್ತಿದ್ದಾರೆ
ಇಡೀ ಜಗತ್ತು ಚಂದ್ರನ ಮೇಲೆ ಹೋಗುತ್ತಿದ್ರೆ ನಮ್ಮ ಮಕ್ಕಳು ತೆರೆದ ಚರಂಡಿಯಲ್ಲಿ ಬಿದ್ದು ಜೀವ ಕಳೆದುಕೊಳ್ಳುತ್ತಿದ್ದಾರೆ. ಸ್ಕ್ರೀನ್ ಮೇಲೆ ಭಾರತ ಚಂದ್ರನ ಮೇಲೆ ಹೋದ ನ್ಯೂಸ್ ಹೋದ್ರೆ, ಎರಡೇ ಸೆಕೆಂಡ್‌ನಲ್ಲಿ ಕರಾಚಿಯ ಚರಂಡಿಯಲ್ಲಿ ಬಿದ್ದು ಮಕ್ಕಳು ಸಾವನ್ನಪ್ಪಿದ ಸುದ್ದಿ ಬರುತ್ತದೆ. ಇದು ಕಳೆದ ಹದಿನೈದು ವರ್ಷಗಳಿಂದ ಪ್ರತಿ ಮೂರು ದಿನಕ್ಕೆ ಇಂತಹ ಸುದ್ದಿಗಳು ಬರುತ್ತಿವೆ. ಇದೇ ವೇಳೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆಯೂ ಸದನದ ಗಮನಕ್ಕೆ ತಂದರು. ಕರಾಚಿ ನಗರದಲ್ಲಿ ಸುಮಾರು 1.49 ಕೋಟಿ ಜನರು ವಾಸಿಸುತ್ತಿದ್ದಾರೆ ಎಂದು ಮುಸ್ತಾಫಾ ಹೇಳಿದರು.
ADITYA-L1: ಚಂದ್ರಯಾನದ ಬಳಿಕ ಇಸ್ರೋದ ‘ಸೂರ‍್ಯಯಾನ!
ಮೂಲಭೂತ ಸೌಕರ್ಯ ಸಮಸ್ಯೆ
ತಮ್ಮ ಮಾತಯ ಮುಂದುವರಿಸಿದ ಮುಸ್ತಾಫಾ ಕಮಾಲ್, ಕರಾಚಿ ನಗರ ಪಾಕಿಸ್ತಾನದ ಆದಾಯದ ಇಂಜಿನ್ ಆಗಿದೆ. ಪಾಕಿಸ್ತಾನದ ಎರಡು ಪ್ರಮುಖ ಬಂದರುಗಳು ಸಹ ಕರಾಚಿಯಲ್ಲಿವೆ. ಆದ್ರೂ ಕರಾಚಿ ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದೆ. ಕರಾಚಿ ನಗರವೊಂದೇ ಪಾಕಿಸ್ತಾನಕ್ಕೆ ಶೇ.68ರಷ್ಟು ಆದಾಯವನ್ನು ನೀಡುತ್ತಿದೆ ಎಂದು ಹೇಳಿದರು.
15 ವರ್ಷದಿಂದ ಕರಾಚಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಅದು ಸಹ ಟ್ಯಾಂಕರ್ ಮಾಫಿಯಾಗೆ ಸೇರುತ್ತಿದೆ ಎಂದು ಕಮಾಲ್ ಆರೋಪಿಸಿದರು.
ಚಂದ್ರಯಾನ-3ಕ್ಕೆ ಬಿಡಿಭಾಗ ಕೊಟ್ಟಿದ್ದು ಬೆಳಗಾವಿ ಮೂಲದ ಕಂಪನಿ; ಟೀಂ ನಲ್ಲಿದ್ದಾನೆ ಜಿಲ್ಲೆಯ ಯುವ ವಿಜ್ಞಾನಿ
ಸುಮಾರು 2.62 ಕೋಟಿಯಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಿಂಧ್ ಪ್ರಾಂತದಲ್ಲಿ 48 ಸಾವಿರ ಶಾಲೆಗಳಿದ್ದು, 11 ಸಾವಿರ ಶಾಲಾ ಕಟ್ಟಡಗಳು ಭೂತದ ಬಂಗಲೆಗಳಾಗಿ ಬದಲಾಗಿವೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
