ಚಂದ್ರಯಾನ-3ಕ್ಕೆ ಬಿಡಿಭಾಗ ಕೊಟ್ಟಿದ್ದು ಬೆಳಗಾವಿ ಮೂಲದ ಕಂಪನಿ; ಟೀಂ ನಲ್ಲಿದ್ದಾನೆ ಜಿಲ್ಲೆಯ ಯುವ ವಿಜ್ಞಾನಿ

ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಮೂರನೇ ಉಡಾವಣೆಯಾದ ಚಂದ್ರಯಾನ- 3 ನಭಕ್ಕೆ ಚಿಮ್ಮಿದ ರಾಕೆಟ್‌ಗೆ ಬೆಳಗಾವಿಯ ಸರ್ವೋ ಕಂಟ್ರೋಲ್ಸ್‌ ಆ್ಯಂಡ್‌ ಹೈಡ್ರಾಲಿಕ್‌ ಇಂಡಿಯಾ ಕಂಪನಿ ಸಿದ್ಧಪಡಿಸಿದ ಬಿಡಿಭಾಗಗಳನ್ನು ಪೂರೈಕೆ ಮಾಡಲಾಗಿದೆ. ಈ ಕಂಪನಿಯು ಇಸ್ರೊ ಜೊತೆಗೆ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದೆ.

Young scientist from Belagavi contributes to Chandrayaan-3 rav

ಬೆಳಗಾವಿ (ಜು.15) :  ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಮೂರನೇ ಉಡಾವಣೆಯಾದ ಚಂದ್ರಯಾನ- 3 ನಭಕ್ಕೆ ಚಿಮ್ಮಿದ ರಾಕೆಟ್‌ಗೆ ಬೆಳಗಾವಿಯ ಸರ್ವೋ ಕಂಟ್ರೋಲ್ಸ್‌ ಆ್ಯಂಡ್‌ ಹೈಡ್ರಾಲಿಕ್‌ ಇಂಡಿಯಾ ಕಂಪನಿ ಸಿದ್ಧಪಡಿಸಿದ ಬಿಡಿಭಾಗಗಳನ್ನು ಪೂರೈಕೆ ಮಾಡಲಾಗಿದೆ. ಈ ಕಂಪನಿಯು ಇಸ್ರೊ ಜೊತೆಗೆ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದೆ.

ಇಸ್ರೊ ಬೇಡಿಕೆಗೆ ಅನುಗುಣವಾಗಿ ಸಾಧನಗಳನ್ನು ಕಂಪನಿಯು ಪೂರೈಸುತ್ತಾ ಬಂದಿದೆ. ಮಂಗಳಯಾನ ಮತ್ತು ಅಗ್ನಿ- 5ರಲ್ಲಿಯೂ ಬಿಡಿಭಾಗಗಳನ್ನು ಸಂಸ್ಥೆ ಒದಗಿಸಲಾಗಿತ್ತು ಎಂದು ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದಶಕ ದೀಪಕ ದಡೋತಿ ಹೇಳಿದರು.

 

ISRO: ಚಂದ್ರಯಾನ-3 ತಂಡದಲ್ಲಿ ಬಾಳೆಹೊನ್ನೂರು ಯುವತಿ ಡಾ ಕೆ ನಂದಿನಿ

ರಾಕೆಟ್‌ ಬಿಡಿಭಾಗ ಸಿದ್ಧವಾಗುತ್ತಿವೆ. ಬಿಡಿಭಾಗ ತಯಾರಿಸಿ ಒದಗಿಸಲಾಗಿದೆ ಎಂಬುದು ಹೆಮ್ಮೆ ವಿಚಾರ. ಇಸ್ರೋ ಜೊತೆ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ ವಿಚಾರ. ಸೆನ್ಸಾರ್‌ ಮತ್ತು ಹೆಡ್ರಾಲಿಕ್ಸ್‌ ಬಿಡಿಭಾಗಗಳನ್ನು ಒದಗಿಸಿದ್ದೇವೆ. ಕ್ಷಿಪಣಿ ಉಡಾವಣೆ ಯಶಸ್ವಿಯಾಗಬೇಕು. 40 ದಿನ ಪ್ರವಾಸ ಮಾಡಿ ಆಮೇಲೆ ಚಂದ್ರದ ಕಕ್ಷೆಯಲ್ಲಿ ಬಂದು ಲ್ಯಾಂಡ್‌ ಆಗಬೇಕು. ಎಲ್ಲ ಬಿಡಿಭಾಗಗಳು ಕೂಡ ಕೆಲಸ ಮಾಡಬೇಕಾಗುತ್ತದೆ. ನಮಗೂ ಒಂದು ಕೌತುಕವಾಗಿದೆ. ಸ್ಪೇಶ್‌ ಗ್ರೇಡ್‌ಹೈಡ್ರಾಲಿಕ್‌ ಬಿಡಿಭಾಗ, ಎಲೆಕ್ಟ್ರಾನಿಕ್‌ ಬಿಡಿಭಾಗ ಮಾಡಲಾಗುತ್ತಿದೆ. ಭೂಮಿ ಕಕ್ಷೆಯಿಂದ ಹೊರಹೋಗುತ್ತದೆ ಎನ್ನುವುದು ಹೆಮ್ಮೆಯ ವಿಚಾರ. ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಬೇಕು. ಇದರ ಯಶಸ್ಸು ಇಸ್ರೋ ವಿಜ್ಞಾನಿಗಳು, ಎಂಜಿನಿಯರ್‌, ಉದ್ಯಮಗಳಿಗೆ ಸಲ್ಲುತ್ತದೆ.

ಸರ್ವೋ ಕಂಟ್ರೋಲ್ಸ್‌ ಹಾಗೂ ಇಸ್ರೊ ಜೊತೆಗೆ ಅವಿನಾಭಾವ ಸಂಬಂಧ ಇದೆ. ಇಸ್ರೊ ಡಿಸೈನ್‌ ಪ್ರಕಾರವೇ ನಾವು ಬಿಡಿಭಾಗ ಸಿದ್ಧಪಡಿಸಿ ಪೂರೈಸುತ್ತ ಬಂದಿದ್ದೇವೆ. ನಾವು ಸಿದ್ಧಪಡಿಸಿರುವ ಬಿಡಿಭಾಗಳು ಗುಣಮಟ್ಟಹಾಗೂ ತಂತ್ರಜ್ಞಾನದಿಂದ ಕೂಡಿವೆ. ಅದರಲ್ಲಿಯೂ ಬಿಡಿಭಾಗ ಮಾಡುತ್ತಿರುವುದು ಸೂಕ್ಷ್ಮ ವಿಚಾರ. ಚಂದ್ರಯಾನ ರಾಕೆಟ್‌ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ. ಆದಾಗ್ಯೂ ವಿಫಲವಾದರೆ ಎನ್ನುವ ಭಯವೂ ನಮ್ಮನ್ನು ಕಾಡುತ್ತದೆ ಎಂದು ಹೇಳಿದರು.

ಚಂದ್ರಯಾನ3ಗೆ ಬೆಳಗಾವಿ ಯುವ ವಿಜ್ಞಾನಿ ಕೊಡುಗೆ

ಬೆಳಗಾವಿ:  ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ಇಸ್ರೊ)ಯ ಮಹತ್ವಾಕಾಂಕ್ಷಿ ಮೂರನೇ ಚಂದ್ರಯಾನ 3 ಉಡ್ಡಯನ ಯಶಸ್ವಿಯಾಗಿದೆ. ಈ ಚಂದ್ರಯಾನ 3ಕ್ಕೆ ಬೆಳಗಾವಿಯ ಯುವ ವಿಜ್ಞಾನಿಯೊಬ್ಬರು ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆ ಮತ್ತು ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪೆಡ್ನೇಕರ(Prakash padnekar) ಎಂಬ ಯುವ ವಿಜ್ಞಾನಿ ಚಂದ್ರಯಾನ 3 ಮಿಷನ್‌ನಲ್ಲಿ ಕೆಲಸ ಮಾಡಿದವರು. ಅಲ್ಲದೇ, ಚಂದ್ರಯಾನ 2ರಲ್ಲಿಯೂ ಇವರು ಕೆಲಸ ಮಾಡಿದ್ದರು. ಕಳೆದ ಐದು ವರ್ಷಗಳಿಂದ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಯುವ ವಿಜ್ಞಾನಿ ಸಹೋದರ ಪರಶುರಾಮ ಪೆಡ್ನೇಕರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

News Hour: ಚಂದ್ರನೂರಿಗೆ ಭಾರತದ ತೇರು, ಇನ್ನೇನಿದ್ದರು ಗಮನ ಆಗಸ್ಟ್‌ 23!

ಚಂದ್ರಯಾನ -3 ಯಶಸ್ವಿಯಾಗಲಿ:

ಇಡೀ ವಿಶ್ವದಲ್ಲೇ ಭಾರತದ ಕೀರ್ತಿಯನ್ನು ಅಜರಾಮರಗೊಳಿಸಿದ ಶ್ರೇಯಸ್ಸು ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ಇಸ್ರೊ)ಗೆ ಸಲ್ಲುತ್ತದೆ. ಪ್ರಸ್ತುತ ಇಸ್ರೊ ಕೋಟ್ಯಂತರ ಭಾರತೀಯರ ಕನಸು ನನಸುಗೊಳಿಸಲು ಹೊರಟಿದೆ. ಚಂದ್ರಯಾನ 3 ಅನ್ನು ಎಲ್‌ವಿಎಂ 3 ರಾಕೆಟ್‌ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದು ಅತ್ಯಂತ ಯಶಸ್ವಿಯಾಗಬೇಕು. ಈ ಮೂಲಕ ಭಾರತೀಯರಿಗೆ ಚಂದ್ರನ ಬಗ್ಗೆ ಅಪಾರ ಜ್ಞಾನ ಮತ್ತು ಮಾಹಿತಿ ದೊರೆಯಬೇಕು ಎಂದು ಬೆಳಗಾವಿಯ ಡಾ.ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ಡಾ.ರಾಜಶೇಖರ ಪಾಟೀಲ ಹೇಳಿದ್ದಾರೆ.

Latest Videos
Follow Us:
Download App:
  • android
  • ios