ಭಾರತ ಮತ್ತು ಅಫ್ಘಾನ್ ತಾಲಿಬಾನ್ ವಿರುದ್ಧ ಎರಡು ಮುಂಚೂಣಿ ಯುದ್ಧಕ್ಕೆ ಸಿದ್ಧ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಘೋಷಿಸಿದ್ದಾರೆ. ಆದರೆ, ದೇಶದ ದುರ್ಬಲ ಆರ್ಥಿಕತೆ, ಭಾರತಕ್ಕೆ ಹೋಲಿಸಿದರೆ ಸಣ್ಣ ಸೈನ್ಯ, ಮತ್ತು ತೀವ್ರ ಶಸ್ತ್ರಾಸ್ತ್ರಗಳ ಕೊರತೆಯು ಈ ಹೇಳಿಕೆಯ ವಾಸ್ತವತೆಯನ್ನು ಪ್ರಶ್ನಿಸುತ್ತದೆ.
ಇಸ್ಲಾಮಾಬಾದ್‌ನಲ್ಲಿ ಸಂಭವಿಸಿದ ಎರಡು ಆತ್ಮ೧ಹತ್ಯಾ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಪೂರ್ವದಲ್ಲಿ ಭಾರತ ಮತ್ತು ಪಶ್ಚಿಮದಲ್ಲಿ ಅಫ್ಘಾನ್ ತಾಲಿಬಾನ್ ವಿರುದ್ಧ ಎರಡು ಮುಂಚೂಣಿ ಯುದ್ಧಕ್ಕೆ ಪಾಕಿಸ್ತಾನ ಸಂಪೂರ್ಣ ಸಿದ್ಧವಾಗಿದೆ ಎಂದು ಅವರು ಘೋಷಿಸಿದ್ದಾರೆ. ದೇಶದ ಆಂತರಿಕ ಅಸ್ಥಿರತೆ, ಆರ್ಥಿಕ ಸಂಕಷ್ಟಗಳು ಮತ್ತು ನೆರೆಯ ದೇಶಗಳೊಂದಿಗಿನ ಘರ್ಷಣೆಗಳನ್ನು ಎದುರಿಸುತ್ತಿರುವಾಗ ಈ ಹೇಳಿಕೆ ಬಂದಿದೆ. ಇದರೊಂದಿಗೆ ಒಂದು ಮಹತ್ವದ ಸಂಶಯ ಉದ್ಭವಿಸುತ್ತದೆ. ನಿಜವಾಗಲು ಎರಡು ದೇಶಗಳೊಂದಿಗೆ ಒಟ್ಟಿಗೆ ಯುದ್ಧ ಮಾಡುವಷ್ಟು ಪಾಕಿಸ್ತಾನಕ್ಕೆ ಸಾಮರ್ಥ್ಯವಿದೆಯೇ? ಪಾಕಿಸ್ತಾನ ನಿಜಕ್ಕೂ ಇಂತಹ ದ್ವಿಮುಖ ಯುದ್ಧಕ್ಕೆ ಸಾಕಷ್ಟು ಬಲ ಹೊಂದಿದೆಯೇ?
ಪಾಕಿಸ್ತಾನದ ದುರ್ಬಲ ಆರ್ಥಿಕ ಸ್ಥಿತಿ:
ವಿಶೇಷವಾಗಿ ಎರಡು ರಾಷ್ಟ್ರಗಳೊಂದಿಗೆ ಅದರಲ್ಲೂ ಭಾರತದಂತಹ ಬಲಾಢ್ಯ ಸೈನ್ಯದ ಎದುರು ಯುದ್ಧ ಮಾಡಲು ಬಲವಾದ ಆರ್ಥಿಕ ಶಕ್ತಿ, ಸ್ಥಿರ ಉತ್ಪಾದನಾ ವ್ಯವಸ್ಥೆ ಮತ್ತು ನಿರ್ಭರ ಸರ್ಕಾರ ಅತ್ಯಗತ್ಯ. ಆದರೆ ಪಾಕಿಸ್ತಾನ ಇವುಗಳೆಲ್ಲದರಲ್ಲೂ ಹಿಂದೆ ಬಿದ್ದಿದೆ. ದೇಶದ ವಿದೇಶಿ ವಿನಿಮಯ ಸಂಪನ್ಮೂಲಗಳು ಕಡಿಮೆಯಾಗಿವೆ, ಬೆಲೆ ಏರಿಕೆಯು ತೀವ್ರಗೊಂಡಿದ್ದು, IMFನಂತಹ ಸಂಸ್ಥೆಗಳಿಂದಾಗಿ ಆಗಾಗ ನಿರ್ಬಂಧಗಳು ಎದುರಾಗುತ್ತಿವೆ. ಯುದ್ಧದ ಖರ್ಚುಗಳು ಈ ದುರ್ಬಲ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶಪಡಿಸುವುದರಿಂದ, ಪಾಕಿಸ್ತಾನ ಕೆಲವೇ ದಿನಗಳಲ್ಲಿ – ತಿಂಗಳಲ್ಲಿ, ದಿನಗಳಲ್ಲೇ ಆರ್ಥಿಕ ಪತನಕ್ಕೆ ಒಳಗಾಗಬಹುದು.
ಪಾಕಿಸ್ತಾನ ಸೈನ್ಯ ಸಣ್ಣದು:
ಪಾಕಿಸ್ತಾನದ ಸೇನೆಯ ಗಾತ್ರ ಭಾರತದ್ದಕ್ಕೆ ಹೋಲಿಸಿದರೆ ತುಂಬಾ ಸಣ್ಣದು. ಭಾರತ ಬಲವಾದ ವಾಯುಸೇನೆ, ಕ್ಷಿಪಣಿ, ನೌಕಾಪಡೆಯ ಆಧಿಪತ್ಯ, ಮೇಲ್ವಿಚಾರಣಾ ಜಾಲಗಳು ಮತ್ತು ಡಿಜಿಟಲ್ ಯುದ್ಧ ಸಾಮರ್ಥ್ಯಗಳನ್ನು ಹೊಂದಿದೆ. ಇದರ ಜೊತೆಗೆ, ಪಶ್ಚಿಮ ಗಡಿಯಲ್ಲಿ ಅಫ್ಘಾನ್ ತಾಲಿಬಾನ್‌ನೊಂದಿಗಿನ ನಿರಂತರ ಘರ್ಷಣೆಗಳು ಪಾಕಿಸ್ತಾನವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ತಾಲಿಬಾನ್ ಯಾವುದೇ ಸಂಘಟಿತ ಸೈನ್ಯವಲ್ಲ; ಅದು ಅನುಶಾಸನರಹಿತ, ಯುದ್ಧಕ್ಕೆ ತರಬೇತಿ ಪಡೆದ ಗೆರಿಲ್ಲಾ ಶಕ್ತಿಯಾಗಿದ್ದು, ಆಕಸ್ಮಿಕ ದಾಳಿಗಳ ಮೂಲಕ ದೀರ್ಘಕಾಲೀನ ಹಾನಿಯನ್ನುಂಟುಮಾಡುವ ಚಾತುರ್ಯ ಹೊಂದಿದೆ. ಒಂದು ಕಡೆ ಭಾರತೀಯ ಸೈನ್ಯ ಮತ್ತು ಮತ್ತೊಂದು ಕಡೆ ತಾಲಿಬಾನ್ ಹೋರಾಟಗಾರರೊಂದಿಗೆ ಎದುರಿಸುವುದು ಪಾಕಿಸ್ತಾನಕ್ಕೆ ಸಾಕಷ್ಟು ಯುದ್ಧ ಸಾಮಗ್ರಿಗಳಾಗಲಿ, ಆರ್ಥಿಕ ಸಂಪನ್ಮೂಲಗಳನ್ನು ಇಲ್ಲ.
ಶಸ್ತ್ರಾಸ್ತ್ರಗಳ ಕೊರತೆ:
2025ರ ವರದಿಗಳ ಪ್ರಕಾರ, ತೀವ್ರ ಯುದ್ಧಕ್ಕಾಗಿ ಪಾಕಿಸ್ತಾನದ ಬಳಿ ಕೇವಲ 96 ಗಂಟೆಗಳ ಅವಧಿಯ ಮದ್ದುಗುಂಡುಗಳ ಮೀಸಲು ಮಾತ್ರ ಇದೆ. ಹಳೆಯ ಶಸ್ತ್ರಸಾಮಗ್ರಿ ಉತ್ಪಾದನಾ ಘಟಕಗಳು, ಕಡಿಮೆ ಸಾಮರ್ಥ್ಯದ ಉತ್ಪಾದನೆ ಮತ್ತು ಉಕ್ರೇನ್‌ನಂತಹ ದೇಶಗಳಿಗೆ ಮದ್ದುಗುಂಡುಗಳ ರಫ್ತುಗಳು ಈ ಕೊರತೆಗೆ ಕಾರಣ. ಶಾಂತ ಸಮಯದಲ್ಲಿ ತರಬೇತಿಗೆ ಬಳಸುವಂತಹ ಮೀಸಲುಗಳ ಪ್ರಮಾಣಕ್ಕಿಂತಲೂ ಕಡಿಮೆಯಿರುವ ಈ ಸ್ಥಿತಿ, ಎರಡು ಮುಂಚೂಣಿ ಯುದ್ಧ ಮಾಡುವ ಸಾಮರ್ಥ್ಯವೇ ಇಲ್ಲ.
ತಾಲಿಬಾನ್‌ನಿಂದ ನಿರಂತರ ಬೆದರಿಕೆ
ಪಾಕಿಸ್ತಾನದ ಪಶ್ಚಿಮ ನೆರೆಯ ಅಫ್ಘಾನಿಸ್ತಾನ ಯಾವುದೇ ಸಾಂಪ್ರದಾಯಿಕ ಸೈನ್ಯದ ರೂಪದಲ್ಲಿಲ್ಲ. ತಾಲಿಬಾನ್ ಗೆರಿಲ್ಲಾ ಯುದ್ಧ ಕೌಶಲ್ಯಗಳು, ಅನಿರೀಕ್ಷಿತ ದಾಳಿಗಳು ಮತ್ತು ಗಡಿ ದಾಟಿ ದಾಳಿಗಳಲ್ಲಿ ಪರಿಣತರಾಗಿದ್ದು, ಯಾವುದೇ ಸಂಘರ್ಷದಲ್ಲಿ ತೊಡಗಿದರೆ ಅಥವಾ ಶತ್ರುತ್ವವನ್ನು ತೀವ್ರಗೊಳಿಸಿದರೆ ಪಾಕಿಸ್ತಾನಕ್ಕೆ ಗಂಭೀರವಾದ ತೊಂದರೆಗಳು ಉಂಟಾಗುತ್ತವೆ.


