ಪಾಕ್‌ನಾದ್ಯಂತ ಭಾರಿ ವಿದ್ಯುತ್ ವ್ಯತ್ಯಯ: ತನಿಖೆಗೆ ಆದೇಶಿಸಿದ ಪ್ರಧಾನಿ ಶೆಹಬಾಜ್ ಷರೀಫ್
ತರಂಗಾಂತರ ಮತ್ತು ವೋಲ್ಟೇಜ್ನಲ್ಲಿ ಉಂಟಾದ ಸಮಸ್ಯೆಯಿಂದಾಗಿ ಗ್ರಿಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಹಲವು ಪ್ರದೇಶಗಳ ಜನರು ವಿದ್ಯುತ್ ಇಲ್ಲದೇ ಪರದಾಡುವಂತಾಯಿತು.
ಇಸ್ಲಾಮಾಬಾದ್ (ಜನವರಿ 24, 2023): ಇಂಧನ ಉಳಿಸುವುದಕ್ಕಾಗಿ ಮತ್ತು ಚಳಿಗಾಲದಲ್ಲಿ ವಿದ್ಯುತ್ ಬೇಡಿಕೆ ಕಡಿಮೆ ಇರುವ ಕಾರಣ ರಾತ್ರಿ ಆಫ್ ಮಾಡಲಾಗಿದ್ದ ರಾಷ್ಟ್ರೀಯ ಪವರ್ಗ್ರಿಡ್ ಮುಂಜಾನೆ ಆನ್ ಆಗದೇ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್, ಲಾಹೋರ್, ಕರಾಚಿ ಮತ್ತು ಪೇಶಾವರ ನಗರಗಳು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಪಾಕಿಸ್ತಾನದ ಇಂಧನ ಸಚಿವಾಲಯದ ಪ್ರಕಾರ ಸೋಮವಾರ ಬೆಳಿಗ್ಗೆ 7.34ರ ಸುಮಾರಿಗೆ ಪವರ್ಗ್ರಿಡ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತರಂಗಾಂತರ ಮತ್ತು ವೋಲ್ಟೇಜ್ನಲ್ಲಿ ಉಂಟಾದ ಸಮಸ್ಯೆಯಿಂದಾಗಿ ಗ್ರಿಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಹಲವು ಪ್ರದೇಶಗಳ ಜನರು ವಿದ್ಯುತ್ ಇಲ್ಲದೇ ಪರದಾಡುವಂತಾಯಿತು. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಮುಂದಿನ 12 ಗಂಟೆಗಳಲ್ಲಿ ಇದನ್ನು ಸರಿಪಡಿಸಲಾಗುತ್ತದೆ ಎಂದು ಸಚಿವಾಲಯ ಹೇಳಿತ್ತು. ಇದರ ಬೆನ್ನಲ್ಲೇ ಸೋಮವಾರ ಸಂಜೆ ಸ್ಥಿತಿ ಸಹಜಕ್ಕೆ ಬಂದಿದೆ ಎಂದು ಹೇಳಲಾಗಿದ್ದರೂ, ಹಲವೆಡೆ ಇನ್ನೂ ವಿದ್ಯುತ್ ಲಭ್ಯವಿಲ್ಲ ಎಂದು ತಿಳಿದುಬಂದಿದೆ.
ಇನ್ನು, ವಿದ್ಯುತ್ (Electricity) ಇಲ್ಲದೆ ದೇಶದ (Country) ಪ್ರಮುಖ ನಗರಗಳು ಸಹ ಪರದಾಡಿದ ಘಟನೆ ಹಿನ್ನೆಲೆ, ಈ ಬಗ್ಗೆ ತನಿಖೆಗೆ ಪಾಕಿಸ್ತಾನ ಪ್ರಧಾನಿ (Pakistan Prime Minister) ಶೆಹಬಾಜ್ ಷರೀಫ್ (Shehbaz Sharif) ಆದೇಶಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ಟಿವಿ (Geo TV) ವರದಿ ಮಾಡಿದೆ. ಆದರೂ, ವಿದ್ಯುತ್ ಅನ್ನು ಇನ್ನೂ ರಾಷ್ಟ್ರವ್ಯಾಪಿ ಸಂಪೂರ್ಣವಾಗಿ ಮರುಸ್ಥಾಪಿಸಲಾಗಿಲ್ಲ ಎಂದು ತಿಳಿದುಬಂದಿದ್ದು, ಇದರಿಂದ ಕಂಪನಿಗಳಿಗೆ ಮತ್ತು 22 ಕೋಟಿಗೂ ಹೆಚ್ಚು ಜನರ (People) ದೈನಂದಿನ ಜೀವನವನ್ನು ಅಡ್ಡಿಪಡಿಸುತ್ತಿದೆ.
ಇದನ್ನು ಓದಿ: ಭಿಕ್ಷೆ ಬೇಡುವುದು, ವಿದೇಶಿ ಸಾಲ ಕೇಳುವುದು ನಾಚಿಕೆಗೇಡಿನ ಸಂಗತಿ: ಪಾಕ್ ಪ್ರಧಾನಿ; ನಿಜವಾದ ಮೋದಿ ಭವಿಷ್ಯ..!
ಇಸ್ಲಾಮಾಬಾದ್‌ನಲ್ಲಿ ತಾಪಮಾನವು ಸುಮಾರು 4 ಡಿಗ್ರಿ ಸೆಲ್ಸಿಯಸ್ ಮತ್ತು ಕರಾಚಿಯಲ್ಲಿ 8 ಡಿಗ್ರಿ ಸೆಲ್ಸಿಯಸ್ ಕುಸಿಯುವ ಮುನ್ಸೂಚನೆಯ ನಡುವೆ 16 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಸ್ಥಗಿತಗೊಂಡಿದೆ. ವಿದ್ಯುತ್ ಉಲ್ಬಣದಿಂದ ಈ ತೊಂದರೆಯಾಗಿದೆ ಎಂದು ಇಂಧನ ಸಚಿವ ಖುರ್ರಂ ದಸ್ತಗಿರ್ ಅವರು ಹೇಳಿಕೊಂಡಿದ್ದಾರೆ. ಆದರೂ, 3 ತಿಂಗಳಲ್ಲಿ ಎರಡನೇ ಮಹತ್ವದ ಗ್ರಿಡ್ ಸ್ಥಗಿತವಾಗಿದೆ ಮತ್ತು ಪಾಕಿಸ್ತಾನದ ಜನಸಂಖ್ಯೆಗೆ ಪ್ರತಿದಿನವೂ ಕತ್ತಲ ರಾತ್ರಿ ಅನುಭವಿಸುವಂತಾಗಿದೆ.
ಗುಡ್ಡುದಿಂದ ಕ್ವೆಟ್ಟಾವರೆಗಿನ ಪ್ರಸರಣ ಮಾರ್ಗದಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ ವಿದ್ಯುತ್ ಕಡಿತವು ಸಂಭವಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಜೆ ನ್ಯೂಸ್ ವರದಿ ಮಾಡಿದೆ. ಸಿಂಧ್, ಪಂಜಾಬ್ ಮತ್ತು ಇಸ್ಲಾಮಾಬಾದ್ ಪ್ರದೇಶಗಳು ವಿದ್ಯುತ್ ಸ್ಥಗಿತದಿಂದ ಪ್ರಭಾವಿತವಾಗಿವೆ ಎಂದು ಮೂಲಗಳು ಬಹಿರಂಗಪಡಿಸಿವೆ. ಮೂಲಗಳ ಪ್ರಕಾರ, ವಿದ್ಯುತ್ ಸಂಪೂರ್ಣ ಮರುಸ್ಥಾಪನೆಗೆ ಸಮಯ ತೆಗೆದುಕೊಳ್ಳಬಹುದು. ಪಾಕಿಸ್ತಾನದಲ್ಲಿ ಕಳೆದ 4 ತಿಂಗಳುಗಳಲ್ಲಿ ವರದಿಯಾದ ಎರಡನೇ ವಿದ್ಯುತ್ ದೊಡ್ಡ ವ್ಯತ್ಯಯ ಇದಾಗಿದ್ದು, ಇದು ಪ್ರಸ್ತುತ ಇಂಧನ ಬಿಕ್ಕಟ್ಟು ಮತ್ತು ಹೆಚ್ಚಿನ ಇಂಧನ ವೆಚ್ಚವನ್ನು ಎದುರಿಸುತ್ತಿದೆ.
ಇದನ್ನೂ ಓದಿ: ನಾವು ಪಾಠ ಕಲಿತಿದ್ದೇವೆ: ಪ್ರಧಾನಿ ಮೋದಿ ಜತೆ ಪ್ರಾಮಾಣಿಕ ಮಾತುಕತೆ ನಡೆಸಬೇಕು ಎಂದ ಪಾಕ್ ಪಿಎಂ ಶೆಹಬಾಜ್..!
ಇಸ್ಲಾಮಾಬಾದ್, ರಾವಲ್ಪಿಂಡಿ, ಅಟ್ಟಾಕ್, ಜೇಲಂ, ಚಕ್ವಾಲ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (Pak Occupied Kashmir) (ಪಿಒಕೆ) ಭಾಗಗಳಿಗೆ ವಿದ್ಯುತ್ ಒದಗಿಸುವ ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿ (Islamabad Electricity Supply Company) (ಐಇಎಸ್‌ಸಿಒ) ತನ್ನ ಕಂಪನಿಯ 117 ಗ್ರಿಡ್ ಸ್ಟೇಷನ್‌ಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸುದ್ದಿ ವರದಿ ಹೇಳಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಇಂಧನ ವೆಚ್ಚವನ್ನು ಉಳಿತಾಯ ಮಾಡಲು ರಾತ್ರಿಯ ವೇಳೆ ವಿದ್ಯುತ್ ಬಳಕೆಯನ್ನು ಸೀಮಿತಗೊಳಿಸಿದೆ. ಅಲ್ಲದೆ, ತೀವ್ರ ಚಳಿಗಾಲದ ಕಾರಣ ವಿದ್ಯುತ್‌ಗೆ ಕಡಿಮೆ ಬೇಡಿಕೆ ಇದೆ. ಹೀಗಾಗಿ ಪವರ್ ಗ್ರಿಡ್‌ನಲ್ಲಿ ರಾತ್ರಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗುತ್ತಿದೆ. ಪಾಕಿಸ್ತಾನ ಈ ತಾಂತ್ರಿಕ ಸಮಸ್ಯೆಯ ಕಾರಣ ವಿದ್ಯುತ್ ವ್ಯತ್ಯಯ ಎದುರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್ನಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡು ಇಡೀ ದೇಶ 12 ಗಂಟೆಗಳ ಕಾಲ ಕತ್ತಲಲ್ಲಿ ಮುಳುಗಿತ್ತು.
ಇದನ್ನೂ ಓದಿ: ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ: ಗನ್ ಹಿಡಿದು ಸರ್ಕಾರದಿಂದ ಆಹಾರ ವಿತರಣೆ