Pakistan Crisis Latest Updates: ಪಾಕಿಸ್ತಾನದಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈ ಬಗ್ಗೆ ಖುದ್ದು ಇಮ್ರಾನ್‌ ಖಾನ್‌ ಮಾತನಾಡಿದ್ದಾರೆ. ಶಾಸನ ಸಭೆಯಲ್ಲಿ ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿರುವುದಾಗಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದ ಪಾಕಿಸ್ತಾನದಲ್ಲಿ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟು (Pakistan Constitutional Crisis) ತಾರ್ಕಿಕ ಅಂತ್ಯಕ್ಕೆ ಸಾಗುವ ಹಾದಿಯಲ್ಲಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ (Imran Khan litmus test) ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ವಿರೋಧ ಪಕ್ಷಗಳ ಬಳಿ ಒಟ್ಟೂ 175 ಸಂಸದರ ಬಲವಿದೆ ಎನ್ನಲಾಗಿತ್ತು. ಅಂದರೆ ಮ್ಯಾಜಿಕ್‌ ನಂಬರ್‌ 172 ಇಮ್ರಾನ್‌ ಖಾನ್‌ ಬಳಿ ಇರಲಿಲ್ಲ. ಇದೇ ಕಾರಣಕ್ಕಾಗಿ, ಅಧಿಕಾರದಿಂದ ಕೆಳಗಿಳಿಯುವುದಿಲ್ಲ ಎಂದು ಖಾನ್‌ ಪಟ್ಟು ಹಿಡಿದಿದ್ದರು. ಇಂದು ಪಾಕ್‌ ಸಂಸತ್ತಿನ ಉಪ ಸಭಾಪತಿ ಇಮ್ರಾನ್‌ ಖಾನ್‌ ವಿರುದ್ಧ ನಡೆದಿದ್ದ ಅವಿಶ್ವಾಸ ಗೊತ್ತುವಳಿ ಅಸಂವಿಧಾನಿಕ ಮತ್ತು ವಿದೇಶಿ ಶಕ್ತಿಗಳು ಇದರ ಹಿಂದಿದೆ ಎಂಬ ಅಭಿಪ್ರಾಯಪಟ್ಟು, ಕಲಾಪವನ್ನು ಮುಂದೂಡಿದ್ದಾರೆ. ಈ ಮೂಲಕ ಇಮ್ರಾನ್‌ ಖಾನ್‌ ದೇಶದ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. 

ಆದರೆ ಇದಾದ ಕೆಲವೇ ಕ್ಷಣಗಳ ಬಳಿಕ ಮಾತನಾಡಿರುವ ಇಮ್ರಾನ್‌ ಖಾನ್‌, ಶಾಸನ ಸಭೆಗಳನ್ನು ವಿಸರ್ಜಿಸುವಂತೆ (Dissolve Assemblies) ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕು ಮತ್ತು ಜನರೂ ಚುನಾವಣೆಗೆ ಸಿದ್ಧರಾಗಬೇಕು ಎಂಬ ಕರೆ ನೀಡಿದ್ದಾರೆ.

ಇದನ್ನೂ ಓದಿ: ಇತ್ತ ಪಾಕ್‌ನಲ್ಲಿ ರಾಜಕೀಯ ಬಿಕ್ಕಟ್ಟು ಅತ್ತ ಮಾಜಿ ಪ್ರಧಾನಿ ಮೇಲೆ ದಾಳಿ, ಕೇಳಿ ಬಂತು ಗಂಭೀರ ಆರೋಪ!

ಹಕ್ಕುಚ್ಯುತಿ ಮಂಡನೆ ಹಿಂದೆ ಮೋದಿ ಕೈವಾಡ ಆರೋಪ:

ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬ ಅರಿವಾದ ಬಳಿಕ ಇಮ್ರಾನ್‌ ಖಾನ್‌ ಭಾರತದ ವಿರುದ್ಧ ಹೇಳಿಕೆ ನೀಡಿದ್ದರು. ಪಾಕಿಸ್ತಾನದ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹಸ್ತಕ್ಷೇಪ ಮಾಡಿದ್ದಾರೆ. ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆಯ ಹಿಂದಿರುವುದು ಭಾರತ ಎಂಬ ಹೇಳಿಕೆಯನ್ನು ಇಮ್ರಾನ್‌ ಖಾನ್‌ ನೀಡಿದ್ದರು. ಪಾಕಿಸ್ತಾನದಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲರಾಗಿದ್ದರು, ಆದರೆ ಇತರೆ ಪಕ್ಷಗಳ ಸಹಾಯದಿಂದ ಸರ್ಕಾರ ರಚಿಸಿದ್ದರು. 

ಇದನ್ನೂ ಓದಿ: ಅಧಿಕಾರ ಉಳಿಸಲು ಇಮ್ರಾನ್ ಖಾನ್ ಈ 'ಹೊಸ ರಣತಂತ್ರ', ಉಳಿಸಿಕೊಳ್ತಾರಾ ಕುರ್ಚಿ?

ಇಂದು ನಡೆದ ಕಲಾಪದಲ್ಲಿ ಉಪ ಸಭಾಪತಿ ಖಾಸಿಂ ಸೂರಿ, ಇಮ್ರಾನ್‌ ಖಾನ್‌ ವಿರುದ್ಧದ ಹಕ್ಕುಚ್ಯುತಿ ನಿರ್ಣಯವನ್ನು ಕಾನೂನು ಬಾಹಿರ ಎಂದು ಅಲ್ಲಗಳೆದಿದ್ದಾರೆ. ಪಾಕಿಸ್ತಾನದ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಬಾಹ್ಯ ಶಕ್ತಿಯ ಕೈವಾಡವಿದೆ, ಇದು ಪಾಕಿಸ್ತಾನದ ಸಂವಿಧಾನದ ಬಾಹಿರವಾಗಿದೆ, ಎಂಬ ಕಾರಣ ನೀಡಿ ಖಾಸಿಂ ಸೂರಿ, ಅವಿಶ್ವಾಸ ನಿರ್ಣಯ ವಿಧೇಯಕವನ್ನು ಅನರ್ಹಗೊಳಿಸಿದ್ದಾರೆ. 

ಬಹುಮತ ಪರೀಕ್ಷೆಯಲ್ಲಿ ಬಚಾವಾಗಲು ಮಾಡಿದ ಪ್ರಯತ್ನಗಳೇನು?:

ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮತದಾನದ ದಿನದಂದು ಎಲ್ಲಾ ಎಂಎನ್‌ಎಗಳು ಗೈರುಹಾಜರಾಗಲು ಈ ಹಿಂದೆ ನಿರ್ಧರಿಸಲಾಗಿತ್ತು. ಇದಕ್ಕಾಗಿ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ದಿನದಂದು ಎಲ್ಲರೂ ರಾಷ್ಟ್ರೀಯ ಅಸೆಂಬ್ಲಿಯ (ಎನ್‌ಎ) ಅಧಿವೇಶನದಲ್ಲಿ ಭಾಗವಹಿಸದಂತೆ ಇಮ್ರಾನ್ ಖಾನ್ ಪಿಟಿಐನ ಎಂಎನ್‌ಎಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ: ನನ್ನ ಬಳಿ ಎಲ್ಲಾ ಇದೆ ಎಂದ ಪಾಕ್ ಪ್ರಧಾನಿಗೆ ಮಾಜಿ ಪತ್ನಿ ಏನಂದ್ಲು ನೋಡಿ!

ಪಾಲಿಸದಿದ್ದರೆ ಕಠಿಣ ಕ್ರಮದ ಬೆದರಿಕೆ:

ಮತದಾನದ ದಿನದಂದು ಯಾವುದೇ ಎಂಎನ್‌ಎ ಸಂಸತ್ ಭವನದಲ್ಲಿ ಉಳಿಯಬಾರದು ಎಂದು ನಿರ್ದೇಶನ ನೀಡಲಾಗಿದೆ. ಪಕ್ಷದ ಅಧ್ಯಕ್ಷರ ಸೂಚನೆಗಳನ್ನು ಯಾರಾದರೂ ಉಲ್ಲಂಘಿಸಿದರೆ ಅವರ ವಿರುದ್ಧ ಕಲಂ 63 (ಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸೂಚನೆಗಳ ಪ್ರತಿಯನ್ನು ಆ ಹೊತ್ತಿಗೆ ಎಲ್ಲಾ ಪಿಟಿಐ ಸಂಸದರಿಗೆ ವೈಯಕ್ತಿಕವಾಗಿ ಕಳುಹಿಸಲಾಗಿತ್ತು.

ಬುಡಮೇಲಾದ ಖಾನ್‌ ಲೆಕ್ಕಾಚಾರ:

69ರ ಹರೆಯದ ಕ್ರಿಕೆಟಿಗ-ರಾಜಕಾರಣಿಯಾಗಿರುವ ಇವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿದ್ದಾರೆ. ಮಾರ್ಚ್ 28 ರಂದು, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಅವರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಇಂದು ಅವಿಶ್ವಾಸ ನಿರ್ಣಯ ಮಂಡನೆಯಾಗಬೇಕಿತ್ತು, ಆದರೆ ಉಪ ಸಭಾಪತಿಯವರು ಅವಿಶ್ವಾಸ ನಿರ್ಣಯ ಗೊತ್ತುವಳಿಯನ್ನು ಅನರ್ಹಗೊಳಿಸಿದ್ದಾರೆ.