ನನ್ನ ಬಳಿ ಎಲ್ಲಾ ಇದೆ ಎಂದ ಪಾಕ್ ಪ್ರಧಾನಿಗೆ ಮಾಜಿ ಪತ್ನಿ ಏನಂದ್ಲು ನೋಡಿ!

  • ನನ್ನ ಬಳಿ ಎಲ್ಲಾ ಇದೆ ಎಂದ ಪಾಕ್ ಪ್ರಧಾನಿ
  • ಇಮ್ರಾನ್ ಖಾನ್‌ ಹೇಳಿಕೆಗೆ ಮಾಜಿ ಪತ್ನಿಯ ತಿರುಗೇಟು
  • ಪಾಕ್ ಸಂಸತ್‌ನಲ್ಲಿ ಬಹುಮತ ಕಳೆದುಕೊಂಡಿರುವ ಖಾನ್‌
Pak Prime Minister Imran Khans ex-wife Reham Khans replied Imran Khans statement that I have everything akb

ಇಸ್ಲಾಮಾಬಾದ್‌(ಏ.3): ಬಹುಮತ ಕಳೆದುಕೊಂಡರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯದೇ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಮುಜುಗರಕ್ಕೊಳಗಾಗುತ್ತಿರುವ ಪಾಕ್ ಪ್ರಧಾನಿ (prime minister) ಇಮ್ರಾನ್ ಖಾನ್‌ಗೆ (Imran Khan) ಈಗ ಮಾಜಿ ಪತ್ನಿಯೂ ಮಂಗಳಾರತಿ ಮಾಡಿದ್ದಾರೆ. ನನ್ನ ಬಳಿ ಎಲ್ಲಾ ಇದೆ ಎಂಬ ಇಮ್ರಾನ್ ಖಾನ್ ಅವರ  ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಪತ್ನಿ ರೆಹಮ್ ಖಾನ್ (Reham Khan) ಆತನ ಬಳಿ ಅಖಲ್‌ವೊಂದು (ಪ್ರಜ್ಞೆಅಥವಾ ಬುದ್ಧಿವಂತಿಕೆ) ಬಿಟ್ಟು ಮತ್ತೆಲ್ಲವೂ ಇದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಮ್ರಾನ್ ಖಾನ್ ಇಮ್ರಾನ್ ಖಾನ್ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸಿದ ರೆಹಮ್ ಖಾನ್, ಇಮ್ರಾನ್‌ ಖಾನ್‌ ಪಾಕ್‌ ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನವು ಉತ್ತಮ ಸ್ಥಳವಾಗಿತ್ತು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ  ದೇವರ ದಯೆಯಿಂದ ಅವರು ಜೀವನದಲ್ಲಿ ಖ್ಯಾತಿ, ಸಂಪತ್ತು ಮುಂತಾದ ಎಲ್ಲವನ್ನೂ ಸಾಧಿಸಿರುವುದರಿಂದ ತನಗೆ ಏನೂ ಅಗತ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರೆಹಮ್ ಖಾನ್, ಇಮ್ರಾನ್ ಖಾನ್‌ಗೆ ಬುದ್ಧಿಯೊಂದನ್ನು ಬಿಟ್ಟು ಮತ್ತೆಲ್ಲವೂ ಇದೆ ಎಂದು ಪ್ರತಿಕ್ರಿಯಿಸಿದರು. ನಾನು ಬಾಲ್ಯದಲ್ಲಿದ್ದಾಗ ಪಾಕಿಸ್ತಾನವು ಅಗ್ರಸ್ಥಾನಕ್ಕೆ ಏರುವುದನ್ನು ನೋಡಿದ್ದೇನೆ ಎಂದ ಇಮ್ರಾನ್ ಖಾನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ರೆಹಮ್, ಹೌದು ಅವರ ಮಾತನ್ನು ಒಪ್ಪಿಕೊಳ್ಳುತ್ತೇನೆ. ನೀವು  ಪ್ರಧಾನಿ ಆಗಿಲ್ಲದ ಸಮಯದಲ್ಲಿ ಪಾಕಿಸ್ತಾನ ಉತ್ತಮವಾಗಿತ್ತು ಎಂದು ಹೇಳಿದರು. 

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದಲ್ಲಿ ಬರ್ಖಾ ದತ್ ಹೆಸರು ಉಲ್ಲೇಖ!
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ವಿಶ್ವಾಸಮತ ಯಾಚನೆಗೆ ಮುನ್ನ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಇಮ್ರಾನ್ ಖಾನ್ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಹಿಂದಿನ ಪ್ರೇರಕ ಶಕ್ತಿ  ಅಮೆರಿಕಾ ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು. ಆದರೆ ಇದನ್ನು ಯುಎಸ್ ಸ್ಪಷ್ಟವಾಗಿ ನಿರಾಕರಿಸಿತು. ಹೀಗೆ ಅಮೆರಿಕಾ ತಾನಲ್ಲ ಎಂದ ನಂತರದಲ್ಲಿ ಹೊಸ ರಾಗ ತೆಗೆದ ಇಮ್ರಾನ್ ಖಾನ್, ಅಮೆರಿಕಾ ಅಲ್ಲ ವಿದೇಶಿ ದೇಶ, ಅದರ ಹೆಸರು ಹೇಳಲು ಸಾಧ್ಯವಿಲ್ಲ ಅಂದರೆ ವಿದೇಶದಿಂದ ನಮಗೆ ಸಂದೇಶ ಬಂದಿದೆ ಎಂದಿದ್ದರು. ಇಮ್ರಾನ್ ಖಾನ್‌ಗೆ ಯಾವುದೇ ಬೆದರಿಕೆಯನ್ನು ಕಳುಹಿಸಿಲ್ಲ ಎಂಬ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಪತ್ನಿ ರೆಹಮ್ ಖಾನ್, "ಮುಜುಗರ ಮುಂದುವರಿದಿದೆ" ಎಂದು ಟ್ವೀಟ್ ಮಾಡಿದ್ದರು.

Pakistan ಬೀದಿಗೆ ಬಂದು ಪ್ರತಿಭಟಿಸಿ ಎಂದು ಕರೆಕೊಟ್ಟ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ಪಾಕಿಸ್ತಾನದ ಕಳೆದುಹೋದ ವೈಭವದ ಬಗ್ಗೆ ಮಾತನಾಡಿದ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ವಿಭಿನ್ನ ಪಾಕಿಸ್ತಾನವು ಬೆಳೆಯುತ್ತಿರುವುದನ್ನು ನೋಡಿದ್ದೇನೆ ಎಂದು ಹೇಳಿದರು. ಮಲೇಷಿಯಾದ ರಾಜಕುಮಾರರು (Malaysian princes) ನನ್ನೊಂದಿಗೆ ಶಾಲೆಯಲ್ಲಿ ಓದುತ್ತಿದ್ದರು. "ನಾವು ಹೇಗೆ ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಯಲು ದಕ್ಷಿಣ ಕೊರಿಯಾದವರು (South Korea) ಪಾಕಿಸ್ತಾನಕ್ಕೆ ಬರುತ್ತಿದ್ದರು. ಮಧ್ಯಪ್ರಾಚ್ಯ ದೇಶಗಳ ಜನ ನಮ್ಮ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದವು. ಆದೆ ಇದೆಲ್ಲವೂ ಮುಳುಗುವುದನ್ನು ನಾನು ನೋಡಿದ್ದೇನೆ, ನನ್ನ ದೇಶವನ್ನು ಅವಮಾನಿಸುವುದನ್ನು ನಾನು ನೋಡಿದ್ದೇನೆ ಎಂದು ಇಮ್ರಾನ್ ಖಾನ್ ಅವರು ಹೇಳಿದರು.

ಇಮ್ರಾನ್ ಖಾನ್ ತಾನು  ಬಹುಮತವನ್ನು ಕಳೆದುಕೊಂಡಿರುವುದನ್ನು ಹೊರತುಪಡಿಸಿ ಮತ್ತೆ ಎಲ್ಲವನ್ನೂ ತಿಳಿದಿರುವನು ಎಂದ ರೆಹಮ್ ಖಾನ್, ನೀವು ಒಬ್ಬ ವ್ಯಕ್ತಿಯಾಗಿದ್ದಲ್ಲಿ ಇದು ಎಲ್ಲರಿಗೂ ಪಾಠವಾಗಿದೆ. ಕಾರಣವಿಲ್ಲದೆ ಮಹತ್ವಾಕಾಂಕ್ಷೆಯುಳ್ಳವರಾಗಿದ್ದರೆ, ನೀವು ಯಾವುದೇ ಸಾಧನೆ ಮಾಡದೇ ಹೋಗುತ್ತೀರಿ ಎಂದು ರೆಹಮ್ ಹೇಳಿದ್ದಾರೆ. ರೆಹಮ್ ಖಾನ್ 2014 ರಲ್ಲಿ ಇಮ್ರಾನ್ ಖಾನ್ ಅವರನ್ನು ವಿವಾಹವಾಗಿದ್ದರು ಮತ್ತು ಒಂದು ವರ್ಷದ ನಂತರ ಅವರು ಪರಸ್ಪರ ಬೇರೆಯಾದರು. ಬ್ರಿಟಿಷ್-ಪಾಕಿಸ್ತಾನಿ ಮೂಲದ ಪತ್ರಕರ್ತೆಯಾಗಿರುವ ರೆಹಮ್ ಖಾನ್ ಇಮ್ರಾನ್ ಖಾನ್ ಅವರ ಎರಡನೇ ಪತ್ನಿಯಾಗಿದ್ದರು.
 

Latest Videos
Follow Us:
Download App:
  • android
  • ios