ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ 49 ವರ್ಷದ ಸಚಿವನ 18ರ ಹರೆಯದ ಪತ್ನಿ

  • ಫೆಬ್ರವರಿಯಲ್ಲಿ ಪಾಕಿಸ್ತಾನ ಸಚಿವನ ಮದುವೆಯಾಗಿದ್ದ 18ರ ಯುವತಿ
  • ದೆವ್ವಕ್ಕಿಂತಲೂ ಪತಿ ಅಮೀರ್ ಲಿಯಾಖತ್ ಭಯಾನಕ ಎಂದ ಸೈಯದಾ
  • ವಿಚ್ಛೇದನಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸೈಯದಾ ದಾನಿಯಾ ಶಾ 
     
Pakistan politician Aamir Liaquats third wife aged 18 files for divorce akb

ಪಾಕಿಸ್ತಾನದ ರಾಜಕಾರಣಿ ಮತ್ತು ಟಿವಿ ಪರ್ಸನಾಲಿಟಿ ಅಮೀರ್ ಲಿಯಾಖತ್ (Aamir Liaquat) ಅವರ ಮೂರನೇ ಪತ್ನಿ ಸೈಯದಾ ದಾನಿಯಾ ಶಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ತಿಳಿಸಿದ್ದಾರೆ. ಕಾನೂನು ಕಾರ್ಯವಿಧಾನವನ್ನು ಕೈಗೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದೇನೆ ಎಂದು ಸೈಯದಾ ದಾನಿಯಾ ಶಾ (Syeda Dania Shah) ಹೇಳಿದ್ದಾರೆ. 

18 ವರ್ಷ ವಯಸ್ಸಿನ ಷಾ ಫೆಬ್ರವರಿಯಲ್ಲಿ 49 ವರ್ಷದ ರಾಜಕಾರಣಿಯನ್ನು ವಿವಾಹವಾಗಿದ್ದರು. ಲಿಯಾಖತ್ ಅವರ ಮೂರನೇ ಪತ್ನಿಯಾಗಿರುವ  ಸೈಯದಾ ದಾನಿಯಾ ಶಾ  ಅವರು ತಮ್ಮ ಪತಿಯಿಂದ ಖುಲಾ (ಮಹಿಳೆಯರ ವಿಚ್ಛೇದನದ ಹಕ್ಕು) ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು. ಲಿಯಾಖತ್ ಅವರು ಟಿವಿಯಲ್ಲಿ ತೋರುವಂತೆ ಇಲ್ಲ ಆತ ದೆವ್ವಕ್ಕಿಂತಲೂ ಭಯಾನಕವಾಗಿದ್ದಾನೆ ಎಂದು ಸೈಯದಾ ದಾನಿಯಾ ಶಾ  ಹೇಳಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ.

ಕಣಿವೆಗೆ ಉಪಗ್ರಹದಿಂದ ಇಂಟರ್ನೆಟ್: ಟ್ರೋಲ್‌ಗೊಳಗಾದ ಪಾಕ್ ಸಚಿವನ ಸ್ಪಷ್ಟನೆ!

ಅಮೀರ್ ಲಿಯಾಖತ್ ಅವರೊಂದಿಗಿನ ನಾಲ್ಕು ತಿಂಗಳ ಮದುವೆಯು ಭಯಾನಕ ಯಾತನೆಯೇ ಹೊರತು ಬೇರೇನೂ ಅಲ್ಲ ಎಂದು ಹೇಳಿದರು. ಕುಡಿದ ಅಮಲಿನಲ್ಲಿ ಲಿಯಾಖತ್ ತನಗೆ ಥಳಿಸುತ್ತಿದ್ದ ಎಂದು ಸೈಯದಾ ದಾನಿಯಾ ಶಾ ಆರೋಪಿಸಿದ್ದಾರೆ. ಆದರೆ ಈಕೆಯ ಆರೋಪವನ್ನು ಅಮೀರ್ ಲಿಯಾಖತ್ ನಿರಾಕರಿಸಿದ್ದು, ತಾನು ಮದ್ಯ ಸೇವಿಸಿಲ್ಲ ಅಥವಾ ಆಕೆಯ ಮೇಲೆ ಯಾವುದೇ ಹಿಂಸೆ ನೀಡಿಲ್ಲ ಎಂದು ಹೇಳಿದ್ದಾರೆ. ತನಗೆ PKR 115 ಮಿಲಿಯನ್‌ಗಿಂತಲೂ (4,72,85,694 ಭಾರತೀಯ ರೂಪಾಯಿ) ಹೆಚ್ಚಿನ  ಹಕ್ ಮೆಹರ್ (ಪರಿಹಾರ) ನೀಡಲು ಪತಿ ಲಿಯಾಖತ್‌ಗೆ ಆದೇಶಿಸುವಂತೆ ಸೈಯದಾ ದಾನಿಯಾ ಶಾ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ (Court) ಜೂನ್ 7ಕ್ಕೆ ನಿಗದಿಪಡಿಸಿದೆ. 18 ವರ್ಷದ ಸೈಯದಾ ದಾನಿಯಾ ಶಾ 49 ವರ್ಷದ ರಾಜಕಾರಣಿಯನ್ನು ಫೆಬ್ರವರಿಯಲ್ಲಿ ವಿವಾಹವಾಗಿದ್ದರು (Marriage). ಈಕೆ ಲಿಯಾಖತ್‌ನ ಮೂರನೇ ಪತ್ನಿಯಾಗಿದ್ದಾರೆ. 

ಫೆಬ್ರವರಿಯಲ್ಲಿ, 18 ವರ್ಷದ ಯುವತಿಯೊಂದಿಗೆ ತಾನು ಮೂರನೇ ಮದುವೆಯಾಗಿದ್ದನ್ನು ಲಿಯಾಖತ್ ತನ್ನ  ಇನ್ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದರು. ಕಳೆದ ರಾತ್ರಿ, 18 ವರ್ಷದ ಸೈಯದಾ ದಾನಿಯಾ ಷಾ ಅವರೊಂದಿಗೆ ನಾನು ಮದುವೆಯಾದೆ. ಆಕೆ ದಕ್ಷಿಣ ಪಂಜಾಬ್‌ನ (South Punjab) ಲೋಧ್ರಾನ್‌ನ (Lodhran)ಗೌರವಾನ್ವಿತ ನಜೀಬ್ ಉತ್ ತಾರ್ಫೈನ್ ಸಾದಾತ್ ಕುಟುಂಬಕ್ಕೆ ಸೇರಿದವರು ಎಂದು ಅವರು ಇನ್ಸ್ಟಾದಲ್ಲಿ ಬರೆದುಕೊಂಡಿದ್ದರು. ಆಕೆ ಸುಂದರ, ಆಕರ್ಷಕ, ಸರಳ  ವ್ಯಕ್ತಿತ್ವದ ಪ್ರಿಯತಮೆ,  ದಯವಿಟ್ಟು ನಮಗಾಗಿ ಪ್ರಾರ್ಥಿಸಿ ಎಂದು ನಾನು ನನ್ನ ಎಲ್ಲಾ ಹಿತೈಷಿಗಳನ್ನು ವಿನಂತಿಸಲು ಬಯಸುತ್ತೇನೆ ಎಂದು ಲಿಯಾಖತ್ ಬರೆದುಕೊಂಡಿದ್ದರು.

Facebook ಲೈವ್‌ ಶೋ ಮಾಡಲು ಹೋಗಿ ಪಾಕ್ ಸಚಿವನ ಎಡವಟ್ಟು!
 

ಸೈಯದಾ ದಾನಿಯಾ ಷಾ ಲಿಯಾಖತ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದನ್ನು ನಟ ತುಬಾ ಅಮೀರ್ ಖಚಿತಪಡಿಸಿದ್ದಾರೆ. ಭಾರವಾದ ಹೃದಯದಿಂದ, ನನ್ನ ಜೀವನದಲ್ಲಿನ ಬೆಳವಣಿಗೆಯ ಬಗ್ಗೆ ಜನರಿಗೆ ಅರಿವು ತಿಳಿಸಲು ನಾನು ಬಯಸುತ್ತೇನೆ. ನಮ್ಮಿಬ್ಬರಲ್ಲಿ ಸಮನ್ವಯದ ಭರವಸೆ ಇರಲಿಲ್ಲ ಹೀಗಾಗಿ ನ್ಯಾಯಾಲಯದಿಂದ ಖುಲಾ ತೆಗೆದುಕೊಳ್ಳಲು ಬಯಸಿದ್ದೇನೆ. ಅದು ಎಷ್ಟು ಕಷ್ಟಕರವಾಗಿದೆ ಎಂದು ನಾನು ವ್ಯಕ್ತಪಡಿಸಲು ಸಾಧ್ಯವಿಲ್ಲ ಆದರೆ ನಾನು ಅಲ್ಲಾ ಮತ್ತು ಅವನ ಯೋಜನೆಗಳನ್ನು ನಂಬುತ್ತೇನೆ. ಈ ಪರೀಕ್ಷೆಯ ಸಮಯದಲ್ಲಿ ನನ್ನ ನಿರ್ಧಾರವನ್ನು ಗೌರವಿಸಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಸೈಯದಾ ಷಾ ತಮ್ಮ ಇನ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios