ಫೇಸ್‌ಬುಕ್ ಲೈವ್ ಶೋ ಮಾಡಲು ಹೋಗಿ ಪಾಕಿಸ್ತಾನ ಸಚಿವ ಎಡವಟ್ಟು| ಮುಖದ ಮೇಲೆ ಬೆಕ್ಕಿನ ಮೀಸೆ, ಕಿವಿ ಚಿತ್ರ: ನಗೆಪಾಟಲು| ಆಪ್ತನೊಬ್ಬ ಕ್ಯಾಟ್ ಫಿಲ್ಟರ್ ಆಯ್ಕೆ ಮಾಡಿದ್ದರಿಂದ ಸಮಸ್ಯೆ
ಇಸ್ಲಾಮಾಬಾದ್[ಜೂ.16]: ತಮ್ಮ ಸುದ್ದಿಗೋಷ್ಠಿಯನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್ ಪ್ರಸಾರ ಮಾಡಲು ಹೋದ ಪಾಕಿಸ್ತಾನದ ಸಚಿವರೊಬ್ಬರು ಎಡವಟ್ಟು ಮಾಡಿಕೊಂಡು ನಗೆಪಾಟಲಿಗೆ ಈಡಾಗಿರುವ ಘಟನೆ ನಡೆದಿದೆ.
ಖೈಬರ್ ಪಖ್ತೂಂಖ್ವಾ ಪ್ರಾಂತ್ಯದ ವಾರ್ತಾ ಸಚಿವರಾಗಿರುವ ಶೌಕತ್ ಯೂಸುಫ್‌ಝೈ ಅವರು ಇತರೆ ಸಚಿವರ ಜತೆ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಲು ಉದ್ದೇಶಿಸಿದ್ದರು. ಈ ಪತ್ರಿಕಾಗೋಷ್ಠಿಯನ್ನು ಫೇಸ್‌ಬುಕ್‌ನಲ್ಲಿ ಲೈವ್ ಪ್ರಸಾರ ಮಾಡುವಂತೆ ತಮ್ಮ ಆಪ್ತನೊಬ್ಬನಿಗೆ ಸೂಚಿಸಿದ್ದರು. ಅದರಂತೆ ಲೈವ್ ಶೋ ಆರಂಭಿಸಿದ ಆತ, ಫೇಸ್‌ಬುಕ್‌ನಲ್ಲಿರುವ ‘ಕ್ಯಾಟ್ ಫಿಲ್ಟರ್’ ಆಯ್ಕೆಯನ್ನು ಅಚಾನಕ್ಕಾಗಿ ಒತ್ತಿಬಿಟ್ಟಿದ್ದಾನೆ.ಇದರಿಂದಾಗಿ ಸಚಿವರು ಹಾಗೂ ಅವರ ಜತೆಗಿದ್ದವರ ಮುಖದಲ್ಲಿ ಬೆಕ್ಕಿನ ಕಿವಿ ಹಾಗೂ ಮೀಸೆಗಳ ಚಿತ್ರ ಮೂಡಿದೆ. ಇದು ಪಾಕಿಸ್ತಾನದಾದ್ಯಂತ ವೈರಲ್ ಆಗಿದೆ.
ಸಚಿವರನ್ನು ತಮಾಷೆಯ ಟ್ವೀಟ್‌ಗಳ ಮೂಲಕ ಜಾಲತಾಣಿಗರು ಕುಟುಕಿದ್ದಾರೆ.
