ಕಣಿವೆಗೆ ಉಪಗ್ರಹದಿಂದ ಇಂಟರ್ನೆಟ್: ಟ್ರೋಲ್‌ಗೊಳಗಾದ ಪಾಕ್ ಸಚಿವನ ಸ್ಪಷ್ಟನೆ!

ಕಣಿವೆಗೆ ಉಪಗ್ರಹದಿಂದ ಇಂಟರ್ನೆಟ್ ಕೊಡ್ತಿವಿ ಎಂದ ಪಾಕ್ ಸಚಿವ|  ಪಾಕಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ| ಉಪಗ್ರಹದಿಂದ ಕಾಶ್ಮೀರಿ ಜನತೆಗೆ ಇಂಟರ್ನೆಟ್ ಸೇವೆ ಕೊಡುವುದಾಗಿ ಹೇಳಿದ ಫವಾದ್| ಫವಾದ್ ಹುಸೇನ್ ಚೌಧರಿ ಹೇಳಿಕೆಗೆ ನೆಟ್ಟಿಗರು ಗರಂ| ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೊಳಗಾದ ಪಾಕ್ ಸಚಿವ| ಇಸ್ರೋದ ಚಂದ್ರಯಾನ-2 ವಿಫಲತೆಗೆ ವ್ಯಂಗ್ಯವಾಡಿದ್ದ ಚೌಧರಿ| ಸ್ಪಷ್ಟನೆ ನೀಡುವಲ್ಲೂ ತಡಬಡಾಯಿಸಿದ ಸಚಿವ ಫವಾದ್ ಹುಸೇನ್| 

We Provide Internet in Kashmir Through Satellite Says Pakistan Minister

ಇಸ್ಲಾಮಾಬಾದ್(ನ.16): ಭಾರತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಧಗಿತಗೊಳಿಸಿರುವುದಿಂದ, ಉಪಗ್ರಹದ ಮೂಲಕ ಜನರಿಗೆ ಇಂಟರ್ನೆಟ್ ಒದಗಿಸುವುದಾಗಿ ಹೇಳಿ ಪಾಕಿಸ್ತಾನ ಸಚಿವರೊಬ್ಬರು ಟ್ರೋಲ್‌ಗೊಳಗಾಗಿದ್ದಾರೆ. 

ಪಾಕಿಸ್ತಾನದ ಉಪಗ್ರಹಗಳ ಮೂಲಕ ಕಾಶ್ಮೀರಿಗರಿಗೆ ಅಂತರಜಾಲ ಸೇವೆ ಒದಗಿಸುವುದಾಗಿ  ಪಾಕಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ ಹೇಳಿದ್ದಾರೆ.

ಕಾಶ್ಮೀರಕ್ಕೆ ಉಪಗ್ರಹದಿಂದ ಇಂಟರ್‌ನೆಟ್‌: ಆಫರ್‌ ನೀಡಿ ಜೋಕರ್ ಆದ ಪಾಕ್ ಸಚಿವ!

ಭದ್ರತಾ ದೃಷ್ಟಿಯಿಂದ ಕಳೆದ ಮೂರು ತಿಂಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾವು ಉಪಗ್ರಹದ ಮೂಲಕ ಕಾಶ್ಮೀರಿ ಜನರಿಗೆ ಇಂಟರ್ನೆಟ್ ಸೇವೆ ನೀಡುತ್ತೇವೆ ಎಂದು ಫವಾದ್ ಹೇಳಿದ್ದಾರೆ.

ಪಾಕಿಸ್ತಾನ ಇದುವರೆಗೂ ಸ್ವಂತ ಬಲದ ಮೇಲೆ ಉಪಗ್ರಹ ನಿರ್ಮಿಸುವ ಅಥವಾ ಉಡಾಯಿಸುವ ಸಾಮರ್ಥ್ಯ ಹೊಂದಿಲ್ಲ. ಹೀಗಿರುವಾಗ ಕಾಶ್ಮೀರಿ ಜನರಿಗೆ ಉಪಗ್ರಹದ ಮೂಲಕ ಇಂಟರ್ನೆಟ್ ಸೇವೆ ಒದಗಿಸಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಸಚಿವರ ಕಾಲೆಳೆದಿದ್ದಾರೆ.

ಆ 58 ರಾಷ್ಟ್ರಗಳ ಹೆಸರೇಳಿ ಸ್ವಾಮಿ: ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಪಾಕ್ ಆಸಾಮಿ!

ಇನ್ನು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಲು ಮುಂದಾದ ಫವಾದ್ ಹುಸೇನ್, ಕಾಶ್ಮೀರ ಜನತೆಯ ಹಕ್ಕಿನ  ರಕ್ಷಣೆಗಾಗಿ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಉಪಗ್ರಹದಿಂದ ಇಂಟರ್ನೆಟ್ ಸೇವೆ ಒದಗಿಸಲು ಸಾಧ್ಯ ಎಂದಾದರೆ ನಾವು ಅದನ್ನೂ ಮಾಡುತ್ತೇವೆ ಎಂದಿಉ ಹುಸೇನ್ ಹೇಳಿದ್ದಾರೆ.

ಇಸ್ರೋದ ಚಂದ್ರಯಾನ-2 ವಿಫಲವಾದಾಗ ಇದೇ ಫವಾದ್ ಹುಸೇನ್ ಭಾರತದ ತಂತ್ರಜ್ಞಾನ ಸಾಮರ್ಥ್ಯವನ್ನು ಅಪಹಾಸ್ಯ ಮಾಡಿದ್ದರು. ಇದೀಗ ಉಪಗ್ರಹದ ಮೂಲಕ ಕಾಶ್ಮೀರಕ್ಕೆ ಇಂಟರ್ನೆಟ್ ಸೇವೆ ಒದಗಿಸುವುದಾಗಿ ಹೇಳುವ ಮೂಲಕ ಖುದ್ದು ಟ್ರೋಲ್‌ಗೊಳಗಾಗಿದ್ದಾರೆ.

ಸಾರೆ ಜಹಾ ಸೇ ಅಚ್ಛಾ..: ಮೇಜು ಕುಟ್ಟಿ ಭಾರತ ನೆನೆದ ಪಾಕ್ ನಾಯಕ!

Latest Videos
Follow Us:
Download App:
  • android
  • ios