ಪಾಕಿಸ್ತಾನದ ಪೇಷಾವರದಲ್ಲಿ ಶಾಲೆ ಛಾವಣಿ ಕುಸಿದು ದುರಂತ ಘಟನೆ ಸಂಭವಿಸಿದ್ದು, 27 ವಿದ್ಯಾರ್ಥಿಗಳು ಸೇರಿ ಒಟ್ಟು 28 ಜನರು ದುರ್ಮರಣಕ್ಕೀಡಾದ ಬಗ್ಗೆ ವರದಿಯಾಗಿದೆ. ಘಟನೆ ಹೇಗಾಯ್ತು? ಕಾರಣವೇನು ವಿವರಗಳಿಗಾಗಿ ಪೂರ್ತಿ ಓದಿ.
ಪಾಕಿಸ್ತಾನದ ಪೇಶಾವರದಲ್ಲಿ ಗುರುವಾರ ಭೀಕರ ದುರಂತ ಸಂಭವಿಸಿದ್ದು, ಶಾಲೆಯ ಛಾವಣಿ ಕುಸಿದು ಸುಮಾರು 27 ವಿದ್ಯಾರ್ಥಿಗಳು ಸೇರಿದಂತೆ 28 ಜನರು ದುರ್ಮರಣಕ್ಕೀಡಾಗಿದ್ದಾರೆ. ಈ ದುರ್ಘಟನೆಯಲ್ಲಿ ಓರ್ವ ಶಿಕ್ಷಕ ಕೂಡ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು 13 ವರ್ಷದೊಳಗಿನ ಮಕ್ಕಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಳ?
ಕೆಲವು ವರದಿಗಳು ಪ್ರಕಾರ ಸಾವಿನ ಸಂಖ್ಯೆ ಮೂವತ್ತಕ್ಕೂ ಹೆಚ್ಚಿದೆ ಎಂದು ಹೇಳಿವೆ. ಆದರೆ ಅಧಿಕಾರಿಗಳು ಇಲ್ಲಿಯವರೆಗೆ ಕಡಿಮೆ ಅಂಕಿ ದೃಢಪಡಿಸಿದ್ದಾರೆ.
ಅಲ್ ಖೈರ್ ಶಾಲೆಯ ಛಾವಣಿ ಕುಸಿದು ಈ ದುರಂತ ಸಂಭವಿಸಿದೆ ವಿದ್ಯಾರ್ಥಿಗಳು ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಘಟನೆ ನಡೆದಾಗ ವಿದ್ಯಾರ್ಥಿಗಳು ತರಗತಿಯಲ್ಲಿದ್ದರು ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.
ಲೇಡಿ ರೀಡಿಂಗ್ ಆಸ್ಪತ್ರೆಯ ವಕ್ತಾರ ಮುಹಮ್ಮದ್ ಅಸಿಮ್ ಹೇಳಿಕೆ ಪ್ರಕಾರ, ಏಳು ರಿಂದ 12 ವರ್ಷದೊಳಗಿನ 18 ಹುಡುಗರು ಮತ್ತು ಇಬ್ಬರು ಹುಡುಗಿಯರು ಸೇರಿದಂತೆ 20 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಒಬ್ಬ ಮಹಿಳಾ ಶಿಕ್ಷಕಿ ಕೂಡ ಇದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೋಷಕ ಸಮಿಯುಲ್ಲಾ ಎಂಟು ವರ್ಷದೊಳಗಿನ ಮೂವರು ಹುಡುಗಿಯರನ್ನು ರಕ್ಷಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.


