ತುತ್ತು ಅನ್ನವಿಲ್ಲದೆ ಪಾಕಿಸ್ತಾನ ಜನ ಹೈರಾಣು, 1 ಲಕ್ಷ ರೂ ಕ್ಯಾಪ್ ಧರಿಸಿ ಷರೀಫ್ ಕ್ಯಾಂಪೇನ್!
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನೋ ಗಾದೆ ಮಾತು ಪಾಕಿಸ್ತಾನದ ಜನನಾಯಕರಿಗೆ ಸೂಕ್ತವಾಗಿದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಬಿಡಿಸಿ ಹೇಳಾಬೇಕಾಗಿಲ್ಲ. ಇದರ ನಡುವೆ ಚುನಾವಣೆ ಕೂಡ ಆಗಮಿಸಿದೆ. ಪ್ರಚಾರದಲ್ಲಿ ತೊಡಗಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ 1 ಲಕ್ಷ ರೂಪಾಯಿ ಗುಚ್ಚಿ ಬ್ರ್ಯಾಂಡ್ ಕ್ಯಾಪ್ ಧರಿಸಿ ಪ್ರಚಾರಕ್ಕಿಳಿದಿದ್ದಾರೆ ಎಂದು ಪಾಕ್ ಜನತೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಸ್ಲಾಮಾಬಾದ್(ಜ.28) ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇತ್ತ ಪಾಕಿಸ್ತಾನ ಚುನಾವಣೆಗೆ ಸಜ್ಜಾಗುತ್ತಿದೆ. ಹೀಗಾಗಿ ಭರ್ಜರಿ ಪ್ರಚಾರಗಳು ನಡೆಯುತ್ತಲೇ ಇದೆ. ಇದರ ನಡುವೆ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನದೆಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ನವಾಜ್ ಮತ್ತೆ ಪ್ರಧಾನಿಯಾಗುತ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಪಾಕಿಸ್ತಾನ ಜನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿದ್ದರೆ, ಇತ್ತ ನವಾಜ್ ಷರೀಫ್ ಒಂದು ಲಕ್ಷ ರೂಪಾಯಿ ಮೌಲ್ಯದ ಗುಚ್ಚಿ ಫ್ಯಾಶನ್ ಬ್ರ್ಯಾಂಡ್ ಕ್ಯಾಪ್ ಧರಿಸಿ ಪ್ರಚಾರಕ್ಕಿಳಿದಿದ್ದಾರೆ ಎಂದು ಪಾಕಿಸ್ತಾನ ಜನತೆ ಆಕ್ರೋಶ ಹೊರಹಾಕಿದ್ದಾರೆ.
ಪಂಜಾಬ್ ಪ್ರಾಂತ್ಯದ ನಂಕಾನ ಸಾಹಿಬ್ ಜಿಲ್ಲೆಯಲ್ಲಿ ನವಾಜ್ ಷರೀಫ್ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಭರ್ಜರಿ ರೋಡ್ ಶೋ, ರ್ಯಾಲಿ ಆಯೋಜಿಸಿದ ನವಾಜ್ ಷರೀಫ್ ಭಾರಿ ಜನರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ನವಾಜ್ ಷರೀಫ್ ಇಟಲಿಯ ಅತ್ಯಂತ ದುಬಾರಿ ಫ್ಯಾಶನ್ ಬ್ರ್ಯಾಂಡ್ ಗುಚ್ಚಿಯ ಕ್ಯಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ.
ರಾಮಮಂದಿರ ಪ್ರಾಣಪ್ರತಿಷ್ಠೆಯಿಂದ ಪಾಕಿಸ್ತಾನಕ್ಕೆ ಪ್ರಾಣಸಂಕಟ, ಮಧ್ಯಪ್ರವೇಶಕ್ಕೆ ವಿಶ್ವಸಂಸ್ಥೆಗೆ ಮನವಿ!
ಪಾಕಿಸ್ತಾನ ಜನರಿಗೆ ಹೊಟ್ಟೆಗೆ ಒಂದು ತುತ್ತು ಅನ್ನ ಇಲ್ಲ. ಆದರೆ ಇದೇ ಪಾಕಿಸ್ತಾನದ ಜನನಾಯಕರು ಜನರಿಂದ ಲೂಟಿ ಹೊಡೆದ ಹಣದಲ್ಲಿ ಲಕ್ಷ ಲಕ್ಷ ರೂಪಾಯಿ ಮೌಲ್ಯದ ವಸ್ತ್ರ, ಕ್ಯಾಪ್ ಧರಿಸುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ದುಡ್ಡಲ್ಲಿ ನಾಯಕರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಪಾಕಿಸ್ತಾನದ ಅಭಿವೃದ್ಧಿ, ಪಾಕಿಸ್ತಾನದ ಜನತೆಗೆ ಒಂದು ರೂಪಾಯಿಯ ಮೂಲಭೂತ ಸೌಕರ್ಯ ನೀಡದೆ ತಾವು ಅನುಭವಿಸುತ್ತಿದ್ದಾರೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.
ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಫೆ.8ರಂದು ನಡೆಯಲಿದೆ. ಆ.9ರಂದು ನ್ಯಾಷನಲ್ ಅಸೆಂಬ್ಲಿ ವಿಸರ್ಜನೆಯಾಗಿ 90 ದಿನಗಳೊಳಗೆ ಚುನಾವಣೆ ನಡೆಸಬೇಕೆಂಬ ನಿಯಮವನ್ನು ಉಲ್ಲಂಘಿಸುತ್ತಿರುವುದಾಗಿ ಪಾಕಿಸ್ತಾನದ ಸುಪ್ರೀಮ ಕೋರ್ಟ್ ಬಾರ್ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಖಾಜಿ಼ ಫಯೆಸ್ ಇಸಾ ಅವರ ನೇತೃತ್ವದ ಪೀಠಕ್ಕೆ ಚುನಾವಣಾ ಆಯೋಗವು ಈ ಮಾಹಿತಿಯನ್ನು ನೀಡಿದೆ. ಪಾಕಿಸ್ತಾನದ ಚುನಾವಣಾಧಿಕಾರಿ ಸಂಜೀಲ್ ಸ್ವತಿ ಅವರು, ‘ಕ್ಷೇತ್ರಗಳ ವಿಂಗಡಣಾ ಪ್ರಕ್ರಿಯೆ ಜನವರಿ 29ಕ್ಕೆ ಮುಗಿಯಲಿದ್ದು, ಫೆ.8ಕ್ಕೆ ಚುನಾವಣೆ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
ಇರಾನ್ ವಿರುದ್ಧ ತಿರುಗಿಬಿದ್ದ ಪಾಕಿಸ್ತಾನ: ಪ್ರತ್ಯೇಕತಾವಾದಿ ಗುಂಪುಗಳ ಮೇಲೆ ಪ್ರತೀಕಾರ ದಾಳಿ