- 2021ರ ಜುಲೈನಲ್ಲಿ ನಡೆದಿದ್ದ ಪ್ರಕರಣ- ಗಣೇಶ ದೇವಸ್ಥಾನದ ಮೇಲೆ ನೂರಕ್ಕೂ ಹೆಚ್ಚು ಜನ ದಾಳಿ - ಪೊಲೀಸರ ಮೇಲೂ ದಾಳಿ ,  5 ವರ್ಷಗಳ ಕಾಲ ಜೈಲು ಶಿಕ್ಷೆ 

ಲಾಹೋರ್‌(ಮೇ.13): ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ಕೋರ್ಟ್‌ 22 ಮಂದಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

8 ವರ್ಷದ ಬಾಲಕನೊಬ್ಬ ಮುಸ್ಲಿಂ ಸೆಮಿನರಿಯನ್ನು ಅಪವಿತ್ರಗೊಳಿಸಿದ್ದಾನೆ ಎಂಬ ಆರೋಪದ ಮೇಲೆ 2021ರ ಜುಲೈನಲ್ಲಿ ಲಾಹೋರ್‌ನಿಂದ 590 ಕಿ.ಮೀ ದೂರದಲ್ಲಿರುವ ಬೋಂಗ್‌ ನಗರದ ಗಣೇಶ ದೇವಸ್ಥಾನದ ಮೇಲೆ ನೂರಕ್ಕೂ ಹೆಚ್ಚು ಜನ ದಾಳಿ ನಡೆಸಿ ದೇವಾಲಯವನ್ನು ಧ್ವಂಸ ಮಾಡಿದ್ದರು. ಈ ಗುಂಪು ಆಯುಧಗಳಿಂದ ದೇವಾಲಯದ ಬಳಿ ಇದ್ದ ಪೊಲೀಸರ ಮೇಲೂ ದಾಳಿ ನಡೆಸಿದ್ದರು. ದೇವಾಲಯದಲ್ಲಿದ್ದ ವಿಗ್ರಹಗಳು, ಬಾಗಿಲುಗಳು ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ನಾಶ ಮಾಡಿದ್ದರು.

ಪಿಒಕೆಯಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ ನಿರ್ಮಿತ ಹಾಸನಾಬಾದ್ ಸೇತುವೆ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 84 ಆರೋಪಿಗಳ ವಿಚಾರಣೆ ಕಳೆದ ವಾರ ಮುಕ್ತಾಯವಾಗಿದ್ದು, 22 ಜನರನ್ನು ಅಪರಾಧಿಗಳೆಂದು ಗುರುತಿಸಿ ಅವರಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಉಳಿದ 62 ಜನರನ್ನು ಬಿಡುಗಡೆ ಮಾಡಲಾಯಿತು. ಇವರಿಂದ ಈಗಾಗಲೇ ನಷ್ಟಪರಿಹಾರವಾಗಿ 4 ಲಕ್ಷ ರು.ಗಳನ್ನು ಸರ್ಕಾರ ವಸೂಲಿ ಮಾಡಿದೆ.

ಪಾಕ್‌ ಹಿಂದೂ ದೇಗುಲ ಧ್ವಂಸ: 50 ಜನ ಅರೆಸ್ಟ್‌, 150 ಮಂದಿ ಮೇಲೆ ಕೇಸ್‌
ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದಲ್ಲಿನ ಹಿಂದೂ ದೇವಾಲಯ ದ್ವಂಸಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಪೋಲಿಸ್‌ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ನಂತರ ಪೊಲೀಸರು 50 ಜನರನ್ನು ಬಂಧಿಸಿ 150ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ‘ಬೋಂಗ್‌ ದೇವಾಲಯ ಧ್ವಂಸಕ್ಕೆ ಸಂಬಂಧಿಸಿದಂತೆ ಈಗಾಗಲೇ 50 ಜನರನ್ನು ಬಂಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಬಂಧಿಯಾಗುವ ಸಾಧ್ಯತೆ ಇದೆ. ಇವರ ಮೇಲೆ ಭಯೋತ್ಪಾದನೆ ಮತ್ತು ಪಾಕಿಸ್ತಾನ್‌ ಪೀನಲ್‌ ಕೋಡ್‌ ಅನ್ವಯ ಪ್ರಕರಣ ದಾಖಲಿಸಿದ್ದೇವೆ. ಶಂಕಿತರನ್ನೆಲ್ಲಾ ಬಂಧಿಸುತ್ತೇವೆ. ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯ ಆರಂಭಿಸಲಾಗಿದೆ’ ಪೊಲೀಸ್‌ ಅಧಿಕಾರಿ ರಹೀಮ್‌ ಯಾರ್‌ ಖಾನ್‌ ಅಸದ್‌ ಸರ್ಫರಾಜ್‌ ಹೇಳಿದ್ದಾರೆ.

ಫೋನ್‌ಗೆ ಬಂತು ತಂಗಿಯ ವಿಡಿಯೋ: ಗುಂಡಿಕ್ಕಿ ಕೊಂದ ಅಣ್ಣ

ಪಾಕ್‌ ದೇಗುಲ ಧ್ವಂಸ ಪ್ರಕರಣ: 350 ದುಷ್ಕರ್ಮಿಗಳ ಮೇಲಿನ ಕೇಸು ರದ್ದು
ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ದೇಗುಲ ದಾಳಿ ಪ್ರಕರಣದ ಆರೋಪಿಗಳನ್ನು ಅಲ್ಪಸಂಖ್ಯಾತ ಹಿಂದು ಸಮುದಾಯ ಕ್ಷಮಿಸಿರುವ ಹಿನ್ನೆಲೆಯಲ್ಲಿ, 350 ಜನರ ಮೇಲಿದ್ದ ಕ್ರಿಮಿನಲ್‌ ಪ್ರಕರಣವನ್ನು ಹಿಂಪಡೆಯಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಸರ್ಕಾರ ನೇಮಿಸಿದ್ದ ಹಿರಿಯರ ಸಮ್ಮುಖದಲ್ಲಿ ನಡೆದ ಪಂಚಾಯ್ತಿಯಲ್ಲಿ ಆರೋಪಿಗಳನ್ನು ಅಲ್ಲಿನ ಹಿಂದೂ ಸಮುದಾಯ ಕ್ಷಮಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಉದ್ರಿಕ್ತ ಗುಂಪೊಂದು ಇಲ್ಲಿನ ಹಿಂದೂ ದೇಗುಲದ ಮೇಲೆ ದಾಳಿ ನಡೆಸಿ ದೇಗುಲ ಧ್ವಂಸ ಮಾಡಿತ್ತು. ಪ್ರಕರಣ ಸಂಬಂಧ 109 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಅದೇ ಜಾಗದಲ್ಲಿ ದೇಗುಲ ಪುನರ್‌ನಿರ್ಮಾಣಕ್ಕೆ ಅಲ್ಲಿನ ಸುಪ್ರೀಂಕೋರ್ಟ್‌ ಆದೇಶಿಸಿತ್ತು.

ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ: ನಾಲ್ವರ ಬಂಧ​ನ
ಬಾಂಗ್ಲಾದೇಶದ ಕಿಶೋರ್‌ ಗಂಜ್‌ ಜಿಲ್ಲೆಯಲ್ಲಿ ಕಾಳಿ ದೇಗುಲ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಬಂಧಿ​ಸ​ಲಾ​ಗಿ​ದೆ.ಕಳೆದ ಶುಕ್ರವಾರ ವಿಜಯದಶಮಿ ಹಿನ್ನೆಲೆ ಹಿಂದೂಗಳು ದೇಗುಲದಲ್ಲಿ ಕಾಳಿಮಾತೆಯ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಮುಸ್ಲಿಂ ಧಾರ್ಮಿಕ ಮುಖಂಡ ಇಮಾಮ್‌ನ ಪ್ರಚೋದನೆಯಿಂದ ದೇಗುಲಕ್ಕೆ ನುಗ್ಗಿದ ಆರೋಪಿಗಳು, ಅರ್ಚಕರು ಸೇರಿದಂತೆ ಭಕ್ತರ ಮೇಲೆ ಹಲ್ಲೆ ನಡೆಸಿ, ಐದು ಮೂರ್ತಿಗಳನ್ನು ಭಗ್ನಗೊಳಿಸಿ ದೇಗುಲವನ್ನು ಧ್ವಂಸಗೊಳಿದ್ದರು.