Asianet Suvarna News Asianet Suvarna News

ಫೋನ್‌ಗೆ ಬಂತು ತಂಗಿಯ ವಿಡಿಯೋ: ಗುಂಡಿಕ್ಕಿ ಕೊಂದ ಅಣ್ಣ

  • 21 ವರ್ಷದ ಸಹೋದರಿಯನ್ನು ಗುಂಡಿಕ್ಕಿ ಕೊಂದ ಸಹೋದರ
  • ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಘಟನೆ
  • ಮಾಡೆಲಿಂಗ್ ಮಾಡುತ್ತಿದ್ದ ತಂಗಿ ಸಿದ್ರಾ
21 year old dancer shot dead by brother in pakistan akb
Author
Lahore, First Published May 11, 2022, 12:14 PM IST

ಲಾಹೋರ್: ಪಾಕಿಸ್ತಾನದಲ್ಲಿ (Pakistan) ಮತ್ತೊಂದು ಮರ್ಯಾದೆ ಹತ್ಯೆ ನಡೆದಿದೆ. 21 ವರ್ಷದ ಸಹೋದರಿಯನ್ನೇ ಸಹೋದರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ನೃತ್ಯ ಹಾಗೂ ಮಾಡೆಲಿಂಗ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಸಹೋದರ ಈ ಕೃತ್ಯವೆಸಗಿದ್ದಾನೆ. 21 ವರ್ಷದ ಸಿದ್ರಾ ಮೃತ ಯುವತಿ. ಸಿದ್ರಾ ಸ್ಥಳೀಯ ಬಟ್ಟೆ ಬ್ರಾಂಡ್‌ಗಳಿಗೆ ಮಾಡೆಲಿಂಗ್ ಮಾಡುತ್ತಿದ್ದಳು ಮತ್ತು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಫೈಸಲಾಬಾದ್ ನಗರದ ಚಿತ್ರಮಂದಿರಗಳಲ್ಲಿ ನೃತ್ಯ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ (Punjab province) ಈ ಘಟನೆ ನಡೆದಿದೆ. ಸಹೋದರನಿಂದ ಹತ್ಯೆಗೀಡಾದ ಸಿದ್ರಾ (Sidra) ಪ್ರಾಂತೀಯ ರಾಜಧಾನಿ ಲಾಹೋರ್‌ನಿಂದ 130 ಕಿಮೀ ದೂರದಲ್ಲಿರುವ ರೆನಾಲಾ ಖುರ್ದ್ ಒಕಾರಾದ (Renala Khurd Okara) ನಿವಾಸಿ. ಮಾಡೆಲಿಂಗ್‌ ತಮ್ಮ ಕುಟುಂಬದ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಹಾಗಾಗಿ ಅದನ್ನು ಮಾಡದಂತೆ ಹಾಗೂ ಆ ವೃತ್ತಿಯನ್ನು ತೊರೆಯುವಂತೆ ಆಕೆಗೆ ಪೋಷಕರು ಒತ್ತಾಯಿಸಿದ್ದರು. ಆದಾಗ್ಯೂ ಸಿದ್ರಾ ಯಾರಿಗೂ ಕ್ಯಾರೇ ಮಾಡದೇ ತನ್ನ ವೃತ್ತಿ ಮುಂದುವರೆಸಿದ್ದಳು.

ರಾಯಚೂರು; ನಿಶ್ಚಿತಾರ್ಥವಾಗಿದ್ದ ತಂಗಿಯನ್ನೇ ಸಿಲ್ಲಿ ರೀಸನ್‌ಗೆ ಹತ್ಯೆ ಮಾಡಿದ ಅಣ್ಣ

ಕಳೆದ ವಾರ ಸಿದ್ರಾ ತನ್ನ ಕುಟುಂಬದೊಂದಿಗೆ ಈದ್ ಆಚರಿಸಲು ಫೈಸಲಾಬಾದ್‌ನಿಂದ (Faisalabad)ಮನೆಗೆ ಬಂದಿದ್ದರು. ಕಳೆದ ಗುರುವಾರ, ಆಕೆಯ ಪೋಷಕರು ಮತ್ತು ಸಹೋದರ ಹಮ್ಜಾ ಆಕೆಯ ಈ ವೃತ್ತಿಯಿಂದ ತಮ್ಮ ಮನೆತನದ ಮರ್ಯಾದೆ ಹೋಗುತ್ತಿರುವುದಾಗಿ ಅವಳೊಂದಿಗೆ ಜಗಳವಾಡಿದರು ಮತ್ತು ಡಾನ್ಸ್‌ ಮಾಡದಂತೆ ಆಕೆಗೆ ಥಳಿಸಿದ್ದರು. ನಂತರ ದಿನದಲ್ಲಿ ಸಹೋದರ ಹಮ್ಜಾ ಸಿದ್ರಾ ಮೇಲೆ ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು ಅಪರಾಧವನ್ನು ಒಪ್ಪಿಕೊಂಡ ಹಮ್ಜಾನನ್ನು (Hamza) ಬಂಧಿಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಫ್ರಾಝ್ ಹಮೀದ್ (Fraz Hamid) ಮಾತನಾಡಿ, ಹಮ್ಜಾ ತನ್ನ ಮೊಬೈಲ್ ಫೋನ್‌ನಲ್ಲಿ ಸಿದ್ರಾ ಅವರ ನೃತ್ಯ ಪ್ರದರ್ಶನವನ್ನು ಸಂಬಂಧಿಯೊಬ್ಬರು ಫಾರ್ವರ್ಡ್ ಮಾಡಿರುವುದನ್ನು ನೋಡಿದ ಮೇಲೆ ಕೋಪಗೊಂಡಿದ್ದ. ಕೋಪದ ಭರದಲ್ಲಿ ಅವನು ತನ್ನ ಸಹೋದರಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಹಮ್ಜಾ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅವರು ಹೇಳಿದರು. 

ಚೆನ್ನೈ: ದಂಪತಿ ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಎಸ್ಕೇಪಾಗಿದ್ದ ಮನೆಕೆಲಸದವ ಅರೆಸ್ಟ್
 

ಈ ವರ್ಷದ ಫೆಬ್ರವರಿಯಲ್ಲಿ ಫೈಸಲಾಬಾದ್‌ನಲ್ಲಿ 19 ವರ್ಷದ ಮಹಿಳಾ ನರ್ತಕಿ ಆಯೇಷಾ (Ayesha)ಅವರನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದರು. ಪಾಕಿಸ್ತಾನದಲ್ಲಿ ವಿಶೇಷವಾಗಿ ಉತ್ತರ ಮತ್ತು ಪಶ್ಚಿಮದಲ್ಲಿರುವ ಬುಡಕಟ್ಟು ಪ್ರದೇಶಗಳಿಗೆ ಸಮೀಪವಿರುವ ಪ್ರದೇಶಗಳಲ್ಲಿ ಮರ್ಯಾದೆ ಹತ್ಯೆಯ ಪ್ರಕರಣಗಳು  ಇತ್ತೀಚೆಗೆ ಹೆಚ್ಚು ಹೆಚ್ಚು ನಡೆಯುತ್ತಿವೆ. 

ತಾಯಿಯ ಜೊತೆಗೆ ಅಕ್ರಮ ಸಂಬಂಧ: ದೊಣ್ಣೆಯಲ್ಲಿ ಹೊಡೆದು ವ್ಯಕ್ತಿಯ ಕೊಲೆ

 ಆಕೆಗೆ ಮದುವೆಯಾದ ಮಗಳಿದ್ದಳು. ಮದುವೆ ವಯಸ್ಸಿಗೆ ಬಂದ ಮಗನೂ ಇದ್ದ. ಗಂಡ ಕೆಲ ವರ್ಷಗಳ ಹಿಂದೆಯೇ ಆಕೆಯನ್ನು ಬಿಟ್ಟು ಬೇರೊಂದು ಮದುವೆಯಾಗಿದ್ದ. ಆದರೆ ಆಕೆಗೆ ತನಗಿಂತ  ಹತ್ತು ವರ್ಷ ಕಿರಿಯ ವಯಸ್ಸಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇತ್ತೆಂಬ ಆರೋಪ ಇತ್ತು. ಇದರಿಂದ ಮಹಿಳೆಯ ಮಗ ಬೇಸತ್ತು ಹೋಗಿದ್ದ. ತನ್ನ ತಾಯಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಪದೇ ಪದೇ ಮನೆಯ ಹತ್ತಿರ ಬರುತ್ತಿರುವುದನ್ನು ನೋಡಿದ ಮಗ ರೋಸಿ ಆತನನ್ನು ದೊಣ್ಣೆಯಲ್ಲಿ ಹೊಡೆದು ಕೊಂದೆ ಬಿಟ್ಟಿದ್ದಾನೆ. 33 ವರ್ಷದ ಸಿದ್ದರಾಜು ಕೊಲೆಯಾದ ವ್ಯಕ್ತಿ ಚಾಮರಾಜನಗರ ತಾಲೂಕು ಯಾನಗಹಳ್ಳಿ ಗ್ರಾಮದ ನಿವಾಸಿಯಾದ ಈತನಿಗೆ ಇನ್ನು ಮದುವೆಯಾಗಿರಲಿಲ್ಲ. ಈತ ವಯಸ್ಸಿನಲ್ಲಿ ತನಗಿಂತ ಹತ್ತು ವರ್ಷ ದೊಡ್ಡವಳಾದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.  

 

Follow Us:
Download App:
  • android
  • ios