Asianet Suvarna News Asianet Suvarna News

ಪಿಒಕೆಯಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ ನಿರ್ಮಿತ ಹಾಸನಾಬಾದ್ ಸೇತುವೆ!

ಈ ವಾರಾಂತ್ಯದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶವಾದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಹಾಸನಾಬಾದ್ ಸೇತುವೆ ಕುಸಿದುಹೋಗಿದೆ. ಉಷ್ಣಮಾರುತದ ಕಾರಣದಿಂದಾಗಿ ಈ ಪ್ರದೇಶದ ಹಿಮನದಿಗಳು ಕರಗುತ್ತಿದ್ದು, ಇದು ಪ್ರವಾಸಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
 

POK Hassanabad bridge important line connecting Pakistan and China collapses as water from melting glacier causes flood amid heatwave san
Author
Bengaluru, First Published May 11, 2022, 4:53 PM IST

ನವದೆಹಲಿ (ಮೇ. 11): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pak occupied Kashmir) ಚೀನಾ (China)ಹಾಗೂ ಪಾಕಿಸ್ತಾನಕ್ಕೆ (Pakistan) ಸಂಪರ್ಕ ಕಲ್ಪಿಸುವ ಪ್ರಧಾನ ಸೇತುವೆಯಾಗಿದ್ದ ಚೀನಾ ನಿರ್ಮಾಣ ಮಾಡಿದ್ದ ಹಾಸನಾಬಾದ್ ಬ್ರಿಜ್ (Hassanabad bridge) ಪ್ರವಾಹಕ್ಕೆ (Flood) ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಸೇತುವೆ ಕೊಚ್ಚಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ (Gilghit-Baltisthan) ಪ್ರದೇಶದ ಐತಿಹಾಸಿಕ ಹಾಸನಾಬಾದ್ ಸೇತುವೆಯು ಹಿಮನದಿಯ (Glaciar)ಸರೋವರದ ಪ್ರವಾಹದ ನೀರಿನಿಂದ ಶನಿವಾರ ಸಂಪೂರ್ಣವಾಗಿ ನಾಶವಾಗಿದೆ. ಕಾರಕೋರಂ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಸೇತುವೆಯು ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಶಿಶ್ಪರ್ ಪರ್ವತದ ಬಳಿ ಇರುವ ಶಿಶ್ಪರ್ ಹಿಮನದಿಯ ಪ್ರವಾಹದಿಂದ ಕೊಚ್ಚಿಹೋಗಿದೆ. ಈ ಭಾಗದಲ್ಲಿ ಉಷ್ಣ ಮಾರುತದಿಂದಾಗಿ (Heat Wave) ಹಿಮನದಿ ಕರಗುತ್ತಿದೆ. ಇದರಿಂದ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಪ್ರವಾಹ ಉಂಟಾಗುತ್ತಿದೆ ಎಂದು ವರದಿಯಾಗಿದೆ.

ಹವಮಾನ ಬದಲಾವಣೆಯ ಕುರಿತಾದ ಫೆಡರಲ್ ಸಚಿವ ಹಾಗೂ ಸೆನೆಟರ್ ಶೆರಿ ರೆಹಮಾನ್ ( Pakistan's Federal Minister Climate Change and Senator Sherry Rehman ) ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನೀರಿನ ಮಟ್ಟ ಹೆಚ್ಚಾದಂತೆ ಸೇತುವೆ ಕುಸಿಯುವ ಮತ್ತು ಬೀಳುವ ನಾಟಕೀಯ ದೃಶ್ಯಗಳನ್ನು ತೋರಿಸುತ್ತದೆ. ಸೇತುವೆ ಕೊಚ್ಚಿ ಹೋಗಿರುವುದರಿಂದ ಸೇತುವೆಯ ಸಮೀಪ ನಿಂತಿರುವ ಜನರನ್ನು ದೂರ ಸರಿಯುವಂತೆ ಹೇಳುತ್ತಿರುವ ದೃಶ್ಯವೂ ದಾಖಲಾಗಿದೆ.


"ಕೆಲವು ದಿನಗಳ ಹಿಂದೆ ಹವಾಮಾನ ಬದಲಾವಣೆ ಸಚಿವಾಲಯವು ಹೆಚ್ಚಿನ ತಾಪಮಾನದಿಂದಾಗಿ ಪಾಕಿಸ್ತಾನದ ದುರ್ಬಲತೆ ಹೆಚ್ಚಿದೆ ಎಂದು ಎಚ್ಚರಿಸಿದೆ. ಕೆಕೆಹೆಚ್‌ನಲ್ಲಿನ ಹಾಸನಾಬಾದ್ ಸೇತುವೆಯು ಕರಗುತ್ತಿರುವ ಶಿಸ್ಪರ್ (Shispher) ಹಿಮನದಿಯಿಂದ ಹಿಮದ ಸರೋವರದ ಪ್ರಕೋಪ ಪ್ರವಾಹ (GLOF) ಕಾರಣದಿಂದಾಗಿ ಕುಸಿದಿದೆ, ಇದು ಸವೆತಕ್ಕೆ ಕಾರಣವಾಯಿತು. 48 ಗಂಟೆಗಳಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಗುವುದು ಎಂದು FWO ಗೆ ತಿಳಿಸಲಾಗಿದೆ ಎಂದು ಬರೆದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, "ಅದೇ ಸಮಯದಲ್ಲಿ, ಅಂತಹ ಅನೇಕ ಪ್ರದೇಶಗಳು ಉತ್ತರದಲ್ಲಿ ದುರ್ಬಲವಾಗಿವೆ, ವಿಶೇಷವಾಗಿ ಜಿಬಿ (GB), ಕೆಪಿ. ಪಾಕಿಸ್ತಾನವು ಧ್ರುವ ಪ್ರದೇಶದ ಹೊರಗೆ ಅತಿ ಹೆಚ್ಚು ಹಿಮನದಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ಜಾಗತಿಕ ತಾಪಮಾನದಿಂದಾಗಿ ಅನೇಕವು ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತಿವೆ. ಹೊರಸೂಸುವಿಕೆಯನ್ನು ಕಡಿಮೆ ಮಾಡಲು ನಮಗೆ ಜಾಗತಿಕ ನಾಯಕರು ಬೇಕು' ಎಂದು ಬರೆದುಕೊಂಡಿದ್ದಾರೆ.

ಅಕ್ಯುವೆದರ್ (AcueWether ) ಪ್ರಕಾರ, ಉತ್ತರ ಪಾಕಿಸ್ತಾನದ (North Pakistan) ಎತ್ತರದ ಪ್ರದೇಶಗಳು ಕಳೆದ ಕೆಲವು ವಾರಗಳಲ್ಲಿ ಸುಮಾರು 80 ° F ನಿಂದ 90 ° F ವರೆಗೆ ತಾಪಮಾನವನ್ನು ದಾಖಲಿಸಿದರೆ, ಕಡಿಮೆ ಎತ್ತರದಲ್ಲಿ ತಾಪಮಾನವು 110 ° F ಗಿಂತ ಹೆಚ್ಚಾಯಿತು. ತಾಪಮಾನವು ಸರಾಸರಿಗಿಂತ ಐದರಿಂದ 10 ಡಿಗ್ರಿ ಹೆಚ್ಚಾಗಿದೆ ಎಂದು ಹವಾಮಾನ ಸೈಟ್ ತಿಳಿಸಿದೆ.

Follow Us:
Download App:
  • android
  • ios