Asianet Suvarna News Asianet Suvarna News

US State Dept Report : 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ವಿಚಾರಣೆ ಮಾಡಲು ಪಾಕ್ ವಿಫಲ

ಭಾರತವನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕ ಸಂಘಟನೆಗಳು ಪಾಕ್ ನಲ್ಲಿ ಇನ್ನೂ ಸಕ್ರಿಯ
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ವಿಚಾರಣೆ ನಡೆಸಲು ವಿಫಲ
ಪಾಕಿಸ್ತಾನಕ್ಕೆ ಚಾಟಿಯೇಟು ನೀಡಿದ ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ವರದಿ

Pakistan failed to prosecute terrorists including 2008 mumbai attack mastermind masood azhar and others san
Author
New Delhi, First Published Dec 17, 2021, 1:32 AM IST
  • Facebook
  • Twitter
  • Whatsapp

ವಾಷಿಂಗ್ಟನ್ (ಡಿ.17): ಭಯೋತ್ಪಾದನೆ ನಿಗ್ರಹ ಮತ್ತು 2008ರ ಮುಂಬೈ ದಾಳಿಯ (2008 Mumbai attacks ) ಮಾಸ್ಟರ್ ಮೈಂಡ್‌ ಗಳಾದ ಜೈಶ್-ಎ-ಮೊಹಮದ್ (ಜೆಇಎಂ) ಸಂಸ್ಥಾಪಕ ಮಸೂದ್ ಅಜರ್ (Masood Azhar ) ಮತ್ತು ಲಷ್ಕರ್-ಎ-ತೈಬಾದ (ಎಲ್ ಇಟಿ) ಸಾಜಿದ್ ಮಿರ್ (Sajid Mir) ಸೇರಿದಂತೆ ಭಯೋತ್ಪಾದಕರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ( US State Dept Report)ತನ್ನ ನೂತನ ವರದಿಯಲ್ಲಿ ತಿಳಿಸಿದೆ. ಅದರೊಂದಿಗೆ ಭಯೋತ್ಪಾದನೆ ನಿಗ್ರಹ ಮಾಡುವ ವಿಚಾರದಲ್ಲಿ ಪಾಕಿಸ್ತಾನ ತಾನೇ ಹೇಳಿದ ಮಾತುಗಳಿಗೆ ಬದ್ಧವಾಗಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.

ಭಯೋತ್ಪಾದನೆ ನಿಗ್ರಹ ನಿಟ್ಟಿನಲ್ಲಿ ಪಾಕಿಸ್ತಾನ ಸಲ್ಲಿಸಿದ 2015ರ ತನ್ನ ರಾಷ್ಟ್ರೀಯ ಕ್ರಿಯಾ ಯೋಜನೆಯಲ್ಲಿ(2015 National Action Plan) ದೇಶದಲ್ಲಿರುವ ಎಲ್ಲಾ ಭಯೋತ್ಪಾದಕ ಸಂಘಟನೆಯನ್ನು ಬುಡಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಯಾವುದೇ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಇದು ಆ ಯೋಜನೆಯ ಅತ್ಯಂತ ಕಷ್ಟಕರ ಕ್ರಮವೂ ಆಗಿತ್ತು. ಆದರೆ, ಇದನ್ನು ಸಾಧಿಸುವಲ್ಲಿಯೇ ಪಾಕಿಸ್ತಾನ ಸೀಮಿತ ಪ್ರಗತಿ ಸಾಧಿಸಿದೆ' ಎಂದು ಭಯೋತ್ಪಾದನೆ ಕುರಿತಾಗಿ ದೇಶಗಳ ವರದಿ (ಕಂಟ್ರೀಸ್ ರಿಪೋರ್ಟ್ಸ್ ಆನ್ ಟೆರರಿಸಂ) 2020ಯಲ್ಲಿ (2020 Country Reports on Terrorism)ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿದೆ.

ಅದಲ್ಲದೆ, ಪಾಕಿಸ್ತಾನದಲ್ಲಿ ಇಂದಿಗೂ ಸಾಕಷ್ಟು ಭಯೋತ್ಪಾದನೆ ಸಂಘಟನೆಗಳಿದ್ದು, ಇಂದಿಗೂ ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಎಲ್ ಇಟಿ (LeT)ಹಾಗೂ ಅದರ ಅಡಿಯಲ್ಲಿ ಬರುವ ಇತರ ಸಂಘಟನೆಗಳು, ಜೈಶ್-ಎ-ಮೊಹಮದ್ (Jaish-e-Mohammed)ಇದಕ್ಕೆ ಕೆಲವು ಉದಾಹರಣೆಗಳು ಎಂದು ಹೇಳಿದೆ. ಸ್ವತಃ ವಿಶ್ವಸಂಸ್ಥೆಯೇ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟ ಮಸೂದ್ ಅಜರ್, 2008ರ ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಸಾಜಿದ್ ಮಿರ್ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ವಿಫಲವಾಗಿದೆ. ಇಂದಿಗೂ ಅವರು ಪಾಕಿಸ್ತಾನದಲ್ಲಿ ಸಲೀಸಾಗಿ ತಿರುಗಾಟ ನಡೆಸುತ್ತಿದ್ದಾರೆ ಎಂದು ಹೇಳಿದೆ.


"ಜೆಇಎಂ ಸಂಸ್ಥಾಪಕ ಮಸೂದ್ ಅಜರ್,ಎಲ್ ಇಟಿಯ ಸಾಜಿದ್ ಮಿರ್ ಮೇಲೆ ದೇಶೀಯ ಅಧಿಕಾರಿಗಳ ಅಡಿಯಲ್ಲಿ ಯಾವುದೇ ಕ್ರಮವನ್ನು ಈವರೆಗೂ ಕೈಗೊಳ್ಳಲಾಗಿಲ್ಲ' ಎಂದು ತಿಳಿಸಲಾಗಿದೆ. ಫೆಬ್ರವರಿಯಲ್ಲಿ ಮತ್ತು ನವೆಂಬರ್‌ನಲ್ಲಿ ಲಾಹೋರ್‌ನ ಭಯೋತ್ಪಾದನಾ-ವಿರೋಧಿ ನ್ಯಾಯಾಲಯವು ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಹಲವು ಆರೋಪಗಳ ಮೇಲೆ ದೋಷಿ ಎಂದು ಘೋಷಣೆ ಮಾಡಿದ್ದಲ್ಲದೆ 5 ವರ್ಷ 6 ತಿಂಗಳ ಶಿಕ್ಷೆಯನ್ನೂ ವಿಧಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಪಾಕಿಸ್ತಾನ ಸೇನೆ ಹಾಗೂ ರಕ್ಷಣಾ ಪಡೆಗಳು, ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗೆ ಕಾರಣವಾದ ತೆಹ್ರಿಕ್-ತಾಲಿಬಾಲ್-ಪಾಕಿಸ್ತಾನ್, ಐಸಿಸ್-ಕೆ ಹಾಗೂ ಬಲೂಚಿಸ್ತಾನ ಲಿಬರೇಷನ್ ಆರ್ಮಿ ವಿರುದ್ಧ ಸಾಕಷ್ಟು ಭಯೋತ್ಪಾದನಾ ವಿರೋಧಿ ಆಪರೇಷನ್ ಗಳನ್ನು ಮಾಡಿದೆ.

2001 Parliament Attack: ಸಂಸತ್ ದಾಳಿ ನಡೆದು 2 ದಶಕ: 20 ವರ್ಷದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ಬದಲು!
ದೇಶದ ಮಿಲಿಟರಿ, ಪ್ಯಾರಾ ಮಿಲಿಟರಿ ಹಾಗೂ ಭದ್ರತಾ ಸಂಸ್ಥೆಗಳು ಈಗಾಗಲೇ ಸಾಕಷ್ಟು ದೇಶ ವಿರೋಧಿ ಕೃತ್ಯ ನಡೆಸಿದವರನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ. ಆದರೆ, ಇದೇ ಮಾತನ್ನು ಭಾರತದ ಗುರಿಯಾಗಿಸಿಕೊಂಡು ದಾಳಿ ಮಾಡುವ ಭಯೋತ್ಪಾದಕರ ಕುರಿತಾಗಿ ಆಗಿಲ್ಲ ಎಂದು ವರದಿ ಮಾಡಿದೆ. ಅಫ್ಘಾನಿಸ್ತಾನದ ಶಾಂತಿ ಪ್ರಕ್ರಿಯೆಗೆ ಪಾಕಿಸ್ತಾನ ಕಾಣಿಕೆ ನೀಡಿದ್ದರೂ, ಅಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಅಫ್ಘಾನಿಸ್ತಾನ ತಾಲಿಬಾನ್ ಹಾಗೂ ಹಕ್ಕಾನಿ ನೆಟ್ ವರ್ಕ್ ಇಂದಿಗೂ ಪಾಕಿಸ್ತಾನದ ನೆಲದಿಂದ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆರೋಪ ಮಾಡಿದೆ. 

Pakistan: ಶ್ರೀಲಂಕಾ ಪ್ರಜೆಯನ್ನು ಕೊಂದು ಸುಟ್ಟ ಘಟನೆ, 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಪಾಕ್
2020ರ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (Financial Action Task Force) ಆಕ್ಷನ್ ಪ್ಲ್ಯಾನ್ ಅನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಕೆಲ ಪ್ರಗತಿ ಸಾಧಿಸಿದ್ದರೂ, ಈವರೆಗೂ ಆ ಲಿಸ್ಟ್ ನಲ್ಲಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿಯೇ ಪಾಕ್ ಇಂದಿಗೂ ಎಫ್ಎಟಿಎಫ್ ನಲ್ಲಿ(FATF) "ಬೂದು ಪಟ್ಟಿ"ಯಲ್ಲಿಯೇ (grey list) ಉಳಿದುಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

Follow Us:
Download App:
  • android
  • ios