Asianet Suvarna News Asianet Suvarna News

Pakistan: ಶ್ರೀಲಂಕಾ ಪ್ರಜೆಯನ್ನು ಕೊಂದು ಸುಟ್ಟ ಘಟನೆ, 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಪಾಕ್

  • ಶ್ರೀಲಂಕಾ ಪ್ರಜೆಯನ್ನು ಕೊಂದು ಸಾರ್ವಜನಿಕವಾಗಿ ಸುಟ್ಟ ಪಾಕ್ ಉಗ್ರಸಂಘಟನೆ
  • ಶ್ರೀಲಂಕಾ ಜತೆಗಿನ ಸ್ನೇಹಕ್ಕೆ ಪೆಟ್ಟು, ಆಕ್ರೋಶ ವ್ಯಕ್ತಪಡಿಸಿದ ಪಾಕ್ ಪ್ರಧಾನಿ 
  • 100 ಕ್ಕೂ ಹೆಚ್ಚು ಜನರ ಬಂಧನ
     
Dozens of people have been arrested in Pakistan after a Sri Lankan factory manager death
Author
Bengaluru, First Published Dec 5, 2021, 11:47 AM IST

ಪಾಕಿಸ್ತಾನ(ಡಿ.5): ಶ್ರೀಲಂಕಾ ಪ್ರಜೆ ಯೊಬ್ಬರನನ್ನು ಮತಾಂಧ ಗುಂಪೊಂದು ಧರ್ಮನಿಂದೆಯ ಆರೋಪದ ಮೇಲೆ  ಹೊಡೆದು ಕೊಂದು ಸುಟ್ಟು ಹಾಕಿದ ನಂತರ ಪಾಕಿಸ್ತಾನದಲ್ಲಿ (Pakistan) 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಹೇಳಿದ್ದಾರೆ. ಈ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ಇಮ್ರಾನ್ ಖಾನ್ (Imran Khan) ಇದು ಪಾಕಿಸ್ತಾನಕ್ಕೆ ಅವಮಾನದ ದಿನ ಎಂದಿದ್ದು,  ಘಟನೆ ಬಗ್ಗೆ ಶ್ರೀಲಂಕಾ (Sri Lankan) ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ.  ಘಟನೆಗೆ ಕಾರಣರಾದ ಯಾರನ್ನೂ ಬಿಡುವುದಿಲ್ಲ. ಮೃತ ಪ್ರಿಯಾಂತ ದಿಯಾವದನ ಕುಮಾರ (Priyantha Diyawadana)  ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸುವುದಾಗಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. 

Pakistan Embassy: 3 ತಿಂಗಳಿಂದ ವೇತನ ಸಿಕ್ಕಿಲ್ಲ, ಪಾಕ್ ಪ್ರಧಾನಿ ಇಮ್ರಾನ್‌ಗೆ ರಾಯಭಾರ ಕಚೇರಿಯಿಂದ 'ಪೂಜೆ'!

ಪಾಕಿಸ್ತಾನದ ಜೊತೆ ಹಿಂದಿನಿಂದಲೂ ಸೌಹಾರ್ದ ಸಂಬಂಧ ಹೊಂದಿರುವ ಶ್ರೀಲಂಕಾ, ಈ ಘೋರ ಘಟನೆಗೆ ಆಘಾತ ವ್ಯಕ್ತಪಡಿಸಿತ್ತು. ಅಪರಾಧಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಒತ್ತಾಯಿಸಿತ್ತು.

India's Aid to Afghan : ಅಫ್ಘಾನ್‌ಗೆ ಭಾರತದ ನೆರವಿಗೆ ಪಾಕ್‌ ಅಡ್ಡಿ

ಏನಿದು ಘಟನೆ: ಶ್ರೀಲಂಕಾ ನಾಗರಿಕರಾಗಿದ್ದ 40 ವರ್ಷದ ಪ್ರಿಯಾಂತ ಎಂಬುವವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್​ಕೋಟ್ ನಗರದಲ್ಲಿರುವ ರಾಜ್​ಕೋ ಇಂಡಸ್ಟ್ರೀಸ್ ಎಂಬ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಧರ್ಮನಿಂದೆಯ ಆರೋಪದ ಮೇಲೆ ಮತಾಂಧ ಗುಂಪೊಂದು  ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಲ್ಲು ತೂರಿ ಸಾಯಿಸಿ, ಅವರ ದೇಹವನ್ನು ಸುಟ್ಟುಹಾಕಿದ್ದರು.  ಡಿ.3 ರ ಶುಕ್ರವಾರ ನಡೆದ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Man Arrested For Spying: ಪಾಕಿಸ್ತಾನ ಪರ ಬೇಹುಗಾರಿಕೆ : ಓರ್ವ ಸೆರೆ!

ಶ್ರೀಲಂಕಾ ಪ್ರಜೆಯ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ 13 ಪ್ರಮುಖ ಶಂಕಿತರು ಸೇರಿದಂತೆ 118 ಶಂಕಿತರನ್ನು ಪೊಲೀಸರು ಇಲ್ಲಿಯವರೆಗೆ ಬಂಧಿಸಿದ್ದಾರೆ. ಭಯೋತ್ಪಾದನೆ ಅಡಿಯಲ್ಲಿ 800 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಿಯಾಂತ ದಿಯಾವದನ ಅವರು ಧಾರ್ಮಿಕ ಪೋಸ್ಟರ್ ಒಂದನ್ನು ಹರಿದು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ವದಂತಿಗಳು ಹರಡಿವೆ. ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ. ಎಂದು ಪಂಜಾಬ್ ನ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿರುವ ರಾವ್ ಸರ್ದಾರ್ ಅಲಿ ಖಾನ್ ಮಾಹಿತಿ ನೀಡಿದ್ದಾರೆ.

Pak minister mocks Abhinandan : ಅಭಿನಂದನ್ ಲೇವಡಿ ಮಾಡಿದ ಪಾಕ್ ಹರಕು ಬಾಯಿ!

ಆದರೆ ಪ್ರತ್ಯಕ್ಷದರ್ಶಿಯೋರ್ವ ಹೇಳಿದಂತೆ,  ಕಾರ್ಖಾನೆಯ ಗೋಡೆ ಮೇಲೆ ಅಂಟಿಸಲಾಗಿದ್ದ ಉಗ್ರ ಸಂಘಟನೆಯೊಂದರ ಪೋಸ್ಟರ್ ಅನ್ನು ಪ್ರಿಯಾಂತ ಕಿತ್ತು ಎಸೆದರು. ತೆಹ್ರೀಕ್-ಎ-ಲಬೈಕ್ (TLP) ಎಂಬ ಉಗ್ರಸಂಘಟನೆಗೆ ಸೇರಿದ ಪೋಸ್ಟರ್ ಅದಾಗಿತ್ತು. 

 ಕಾರ್ಖಾನೆಯ ಗೋಡೆಯ ಮೇಲೆ ಅಂಟಿಸಲಾಗಿದ್ದ ಪೋಸ್ಟರ್​ನಲ್ಲಿ ಪವಿತ್ರ ಕುರಾನ್​ನ ಸಾಲುಗಳನ್ನು ಮುದ್ರಿಸಲಾಗಿತ್ತು. ಈ ಪೋಸ್ಟರ್ ಅನ್ನು ಮ್ಯಾನೇಜರ್ ಕಿತ್ತು ಕಸದ ಬುಟ್ಟಿಗೆ ಹಾಕಿದ್ದರಿಂದ ಪ್ರಿಯಾಂತ  ಧರ್ಮನಿಂದನೆ ಮಾಡಿದ್ದಾನೆಂದು ತೆಹ್ರೀಕ್ ಉಗ್ರ ಸಂಘಟನೆ ಆರೋಪಿಸಿದೆ.

 ಇತ್ತೀಚೆಗಷ್ಟೇ ಪಾಕ್ ಸರಕಾರ ಈ ಉಗ್ರ ಸಂಘಟನೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಇದರ ಬೆನ್ನಲ್ಲೇ ಸಂಘಟನೆ ಈ ಘೋರ ಕೃತ್ಯ ಎಸಗಿದೆ. ಪಾಕಿಸ್ತಾನದಲ್ಲಿ ನೂರಾರು ಲಂಕಾ ಪ್ರಜೆಗಳು ಕೆಲಸ ಮಾಡುತ್ತಿದ್ದು, ಈ ಘಟನೆ ನಡೆದ ಬಳಿಕ ಎಲ್ಲರ ಭದ್ರತೆ ಬಗ್ಗೆ ಅವರ ಕುಟುಂಬದವರಿಗೆ ಆತಂಕ ಶುರುವಾಗಿದೆ. ಎರಡೂ ದೇಶಗಳ ರಾಜತಾಂತ್ರಿ ಸಿಬ್ಬಂದಿ ಈ ವಿಚಾರದ ಬಗ್ಗೆ ಗಮನ ಹರಿಸಿರುವುದು ತಿಳಿದುಬಂದಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಮಿತ್ರರಾಷ್ಟ್ರ ಮಾತ್ರವಲ್ಲ, ಎರಡೂ ದೇಶಗಳ ಮಧ್ಯೆ ಸಾಕಷ್ಟು ವಾಣಿಜ್ಯ ವ್ಯವಹಾರ ಚಟುವಟಿಕೆಗಳು ನಡೆಯುತ್ತವೆ. ಆಮದು ಮತ್ತು ರಫ್ತು ಹೆಚ್ಚಾಗಿ ಈ ದೇಶಗಳ ಮಧ್ಯೆ ಇದೆ.

Follow Us:
Download App:
  • android
  • ios