Asianet Suvarna News Asianet Suvarna News

ಹಿಂಸೆ ನಡುವೆಯೇ ಪಾಕಿಸ್ತಾನ ಸಂಸತ್ ಚುನಾವಣೆ: ನವಾಜ್‌ ಮತ್ತು ಇಮ್ರಾನ್‌ ಪಕ್ಷದ ಮಧ್ಯೆ ಟಫ್‌ ಪೈಟ್‌

ಪಾಕಿಸ್ತಾನದಲ್ಲಿ 12ನೇ ಸಾರ್ವತ್ರಿಕ ಚುನಾವಣೆ ಹಿಂಸಾಚಾರದ ನಡುವೆಯೇ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಮತ ಎಣಿಕೆ ಆರಂಭವಾಗಿದ್ದು, ನವಾಜ್ ಷರೀಫ್‌ ಅವರ ಪಿಎಂಎಲ್‌-ಎನ್‌ ಪಕ್ಷ ಆರಂಭಿಕ ಮುನ್ನಡೆ ಸಾಧಿಸಿದೆ,

Pakistan Election 2024  Nawaz sharif party tough challenge to imran khan candidates gow
Author
First Published Feb 9, 2024, 8:09 AM IST

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ 12ನೇ ಸಾರ್ವತ್ರಿಕ ಚುನಾವಣೆ ಹಿಂಸಾಚಾರದ ನಡುವೆಯೇ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಮತ ಎಣಿಕೆ ಆರಂಭವಾಗಿದ್ದು, ನವಾಜ್ ಷರೀಫ್‌ ಅವರ ಪಿಎಂಎಲ್‌-ಎನ್‌ ಪಕ್ಷ ಆರಂಭಿಕ ಮುನ್ನಡೆ ಸಾಧಿಸಿದೆ. ಆದರೂ ಇಮ್ರಾನ್ ಪಕ್ಷ ಪ್ರಬಲ ಪೈಪೋಟಿ ನಡೆಸುತ್ತಿದೆ.

ಪಾಕಿಸ್ತಾನದ ಸಂಸತ್ತಿನ 265 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಹುಮತಕ್ಕೆ 133 ಸ್ಥಾನಗಳ ಅಗತ್ಯವಿದೆ. ಪಿಎಂಎಲ್‌-ಎನ್‌ನ ನವಾಜ್‌ ಷರೀಫ್‌ ಹಾಗೂ ಪಿಪಿಪಿಯ ಬಿಲಾವಲ್‌ ಭುಟ್ಟೋ ನಡುವೆ ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಜೈಲುಪಾಲಾದ ಪಿಟಿಐ ಪಕ್ಷದ ಸಂಸ್ಥಾಪಕ ಇಮ್ರಾನ್‌ ಖಾನ್‌ ಸ್ಪರ್ಧೆಗೆ ಅನುಮತಿ ಇಲ್ಲ.

ಇಂಡಿಯಾ ಟುಡೇ ಸಮೀಕ್ಷೆ:ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಕೇವಲ 4 ಸ್ಥಾನ!

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಐವರು ಭದ್ರತಾ ಸಿಬ್ಬಂದಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಜೊತೆಗೆ ಸೇನಾ ಸಿಬ್ಬಂದಿಯ ವಾಹನವನ್ನು ಉಗ್ರರು ಸ್ಫೋಟಿಸಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದ ಮತದಾನಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣಾ ಆಯೋಗವು ದೇಶಾದ್ಯಂತ ದೂರಸಂಪರ್ಕ ಸೇವೆಗಳನ್ನು ನಿರ್ಬಂಧಿಸಿತ್ತು ಮತ್ತು ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಗಳನ್ನು ನಿರ್ಬಂಧಿಸಿದೆ. ಆದಾಗ್ಯೂ ಹಿಂಸೆ ನಡೆದಿದೆ.

ಬಿಜೆಪಿ-ಜೆಡಿಎಸ್ ಮಂಡ್ಯ ಫೈಟ್ ನಡುವೆ ಹೊಸ ಮುಖಕ್ಕೆ ಟಿಕೆಟ್‌ ಫೈನಲ್ ಮಾ ...

ಜೈಲಿನಿಂದಲೇ ಮತ: ಹಲವು ಪ್ರಕರಣಗಳಲ್ಲಿ ದೋಷಿಯಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಡಿಯಾಲಾ ಜೈಲಿನಿಂದಲೇ ಅಂಚೆ ಮತದ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಆದರೆ ಪತ್ನಿ ಬುಶ್ರಾ ಬೀಬಿಗೆ ಮತ ಚಲಾಯಿಸಲು ಆಗಲಿಲ್ಲ.

Follow Us:
Download App:
  • android
  • ios