ಬಿಜೆಪಿ-ಜೆಡಿಎಸ್ ಮಂಡ್ಯ ಫೈಟ್ ನಡುವೆ ಹೊಸ ಮುಖಕ್ಕೆ ಟಿಕೆಟ್ ಫೈನಲ್ ಮಾಡೇ ಬಿಟ್ಟಿತಾ ಕಾಂಗ್ರೆಸ್?
2024ರ ಲೋಕಸಭಾ ಚುನಾವಣೆಗೆ ಮಂಡ್ಯದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಮೈತ್ರಿ ಟಿಕೆಟ್‌ಗಾಗಿ ಬಿಜೆಪಿ-ಜೆಡಿಎಸ್ ನಡುವೆಯೇ ಫೈಟ್ ನಡೆಯುತ್ತಿದೆ. ಆದ್ರೆ ಇವೆಲ್ಲದರ ನಡುವೆ ಸೈಲೆಂಟ್ ಆಗಿಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಪೈನಲ್ ಮಾಡಿದೆ ಎಂದು ಸುದ್ದಿ ಹಬ್ಬಿದೆ.
2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಕ್ಷೇತ್ರವೆಂದರೆ ಅದು ಮಂಡ್ಯ. ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪೈಟ್ ನಡುವೆ ಅಂದು ಗೆದ್ದು ಬೀಗಿ ಸಂಸದ ಸ್ಥಾನ ಪಡೆದಿದ್ದು ಪಕ್ಷೇತರರಾಗಿ ಗೆದ್ದ ಸುಮಲತಾ ಅಂಬರೀಶ್.
ಸುಮಲತಾ 2023 ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಆದರೆ ಈ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಬಹುತೇಕ ಜೆಡಿಎಸ್ನಿಂದಲೇ ಅಭ್ಯರ್ಥಿ ಘೋಷಣೆ ಸಾಧ್ಯತೆಯೂ ಇದೆ. ಇನ್ನೊಂದೆಡೆ ಸುಮಲತಾ ಅವರು ನಾನ್ಯಾಕೆ ನನ್ನ ಕ್ಷೇತ್ರ ಬಿಟ್ಟು ಕೊಡಲಿ ಎಂದು ಕೂತಿದ್ದಾರೆ. ಕಾಂಗ್ರೆಸ್ ನಿಂದ ಮಾಜಿ ಸಂಸದೆ ರಮ್ಯಾ ಆಕಾಂಕ್ಷಿ ಎಂದೂ ಒಂದೆಡೆ ಸುದ್ದಿ ಇದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲು ಟಿಕೆಟ್ ಆಕಾಂಕ್ಷಿಯಾಗಿರುವ ಯಶಸ್ವಿ ಉದ್ಯಮಿಯೊಬ್ಬರನ್ನು ಕಣಕ್ಕಿಳಿಸಲು ಕೈ ಪಡೆ ಮಾಸ್ಟರ್ ಪ್ಲಾನ್ ಮಾಡಿದೆಯಂತೆ.
ಸಕ್ರಿಯ ಸ್ಥಳೀಯ ಆಕಾಂಕ್ಷಿಗಳಿಗೆ ಕೊಕ್ ನೀಡಿ ಹೊಸ ಮುಖಕ್ಕೆ ಮಣೆ ಹಾಕಿದೆ ಎನ್ನಲಾಗಿದೆ?
ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲು ಟಿಕೆಟ್ ಆಕಾಂಕ್ಷಿಯಾಗಿರುವ ಯಶಸ್ವಿ ಉದ್ಯಮಿಯೊಬ್ಬರನ್ನು ಕಣಕ್ಕಿಳಿಸಲು ಕೈ ಪಡೆ ಮಾಸ್ಟರ್ ಪ್ಲಾನ್ ಮಾಡಿದೆಯಂತೆ.
ಸಕ್ರಿಯ ಸ್ಥಳೀಯ ಆಕಾಂಕ್ಷಿಗಳಿಗೆ ಕೊಕ್ ನೀಡಿ ಹೊಸ ಮುಖಕ್ಕೆ ಮಣೆ ಹಾಕಿದೆ ಎನ್ನಲಾಗಿದೆ.
ಆರ್ಥಿಕವಾಗಿಯೂ ಮೈತ್ರಿ ಅಭ್ಯರ್ಥಿಗೆ ಪೈಪೋಟಿ ಕೊಡಬಲ್ಲ ಅಭ್ಯರ್ಥಿಯನ್ನು ಕಾಂಗ್ರೆಸ್ ಫೈನಲ್ ಮಾಡಿದೆಯಂತೆ. ಅವರೇ ಸ್ಟಾರ್ ಚಂದ್ರು ಎಂದು ಕರೆಯಲ್ಪಡುವ ವೆಂಕಟರಮಣೇಗೌಡ. ಅವರಿಗೆ ಮಂಡ್ಯ ಕೈ ಟಿಕೆಟ್ ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ.
ಮೂಲತಃ ನಾಗಮಂಗಲದವರಾಗಿರುವ ಸ್ಟಾರ್ ಚಂದ್ರು ಅವರ ಅಣ್ಣ ಪುಟ್ಟಸ್ವಾಮಿಗೌಡ ಗೌರಿಬಿದನೂರು ಪಕ್ಷೇತರ ಶಾಸಕನಾಗಿದ್ದಾರೆ. ಶಾಸಕ ಶರತ್ ಬಚ್ಚೇಗೌಡ, ಪುಟ್ಟಸ್ವಾಮಿಗೌಡ ಅಳಿಯ ಹೀಗಾಗಿ ಸ್ಟಾರ್ ಚಂದ್ರು ಅವರಿಗೆ ರಾಜಕೀಯ ಹಿನ್ನೆಲೆಯಿದೆ. ಹೀಗಾಗಿ ಮಂಡ್ಯಕ್ಕೆ ಚಂದ್ರು ಪರಿಚಯಿಸಲು ಕಾಂಗ್ರೆಸ್ ವೇದಿಕೆ ಸಿದ್ಧ ಮಾಡ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಯಾವುದೇ ರೀತಿಯಲ್ಲಿ ಸ್ಪಷ್ಟನೆ ಇಲ್ಲ.
ಒಂದು ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ ಆದರೆ ರಣತಂತ್ರ ಬದಲಾಗುವ ಸಾಧ್ಯತೆ ಇದೆ. ಅಂತಿಮ ಕ್ಷಣದಲ್ಲಿ ಜನಪ್ರಿಯತೆ ಹೊಂದಿರುವವರನ್ನೇ ಅಭ್ಯರ್ಥಿ ಮಾಡುವ ಚಿಂತನೆ ಕೂಡ ನಡೆದಿದೆ ಎಂದು ತಿಳಿದುಬಂದಿದೆ.