ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿರುವ 28 ಸ್ಥಾನಗಳ ಪೈಕಿ ಬಿಜೆಪಿಗೆ 24, ಜೆಡಿಎಸ್‌ಗೆ 2 ಹಾಗೂ ಆಡಳಿತಾರೂಢ ಕಾಂಗ್ರೆಸ್‌ಗೆ 4 ಸ್ಥಾನ ಲಭಿಸಲಿವೆ ಎಂದು ‘ಇಂಡಿಯಾ ಟುಡೇ’ ನಡೆಸಿದ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಯಲ್ಲಿ ಪ್ರಕಟಿಸಲಾಗಿದೆ.

ನವದೆಹಲಿ (ಫೆ.9): ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿರುವ 28 ಸ್ಥಾನಗಳ ಪೈಕಿ ಬಿಜೆಪಿಗೆ 24, ಜೆಡಿಎಸ್‌ಗೆ 2 ಹಾಗೂ ಆಡಳಿತಾರೂಢ ಕಾಂಗ್ರೆಸ್‌ಗೆ 4 ಸ್ಥಾನ ಲಭಿಸಲಿವೆ ಎಂದು ‘ಇಂಡಿಯಾ ಟುಡೇ’ ನಡೆಸಿದ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಯಲ್ಲಿ ಪ್ರಕಟಿಸಲಾಗಿದೆ.

ಒಟ್ಟು 35,801 ಜನರನ್ನು ಸಂದರ್ಶಿಸಿ ಸಮೀಕ್ಷೆ ಸಿದ್ಧಪಡಿಸಲಾಗಿದೆ. ಇದರಿಂದಾಗಿ ಬಿಜೆಪಿ ಹಾಗೂ ಜೆಡಿಎಸ್‌ ಈ ಸಲ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಎನ್‌ಡಿಎಗೆ 24 ಸ್ಥಾನ ಲಭಿಸಿದಂತಾಗಲಿದೆ.

ಕ್ರಿಕೆಟಿಗನ ಜೊತೆ ಪ್ರೀತಿಯಲ್ಲಿದ್ದ ಲತಾ ಮಂಗೇಶ್ಕರ್‌ ಕೊನೆವರೆಗೂ ಮದುವ ...

ಪ್ರಸ್ತುತ ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್‌ ಸರ್ಕಾರ ರಚಿಸಿದ್ದರೂ, ಮತಗಳಿಕೆ ಪ್ರಮಾಣದಲ್ಲಿ ಏರುಪೇರಾಗುವುದಿಲ್ಲ. ಆದರೆ ಕಾಂಗ್ರೆಸ್‌ ತನ್ನ ಸಂಖ್ಯಾಬಲವನ್ನು ತುಸು ಹೆಚ್ಚಿಸಿಕೊಳ್ಳಲಿದೆ (ಹಾಲಿ ಇರುವ 1ರಿಂದ 4) ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಹಾಗೆಯೇ ಬಿಜೆಪಿಯು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಜೆಡಿಎಸ್‌ ತನ್ನ ಗಳಿಕೆಯನ್ನು (1 ಸ್ಥಾನ) ಹೆಚ್ಚಿಸಿಕೊಳ್ಳಲಿದೆ ಎಂದು ತಿಳಿಸಿದೆ.

ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿ 25 ಸಂಸದರನ್ನು ಹೊಂದಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಲಾ 1 ಸಂಸದರನ್ನು ಹೊಂದಿದ್ದು, ಮಂಡ್ಯದ ಓರ್ವ ಸಂಸದೆ ಪಕ್ಷೇತರರಾಗಿದ್ದಾರೆ.

ಸೌಂದರ್ಯವತಿಯಾಗಿದ್ದ ಶಾರುಖ್ ಖಾನ್‌ ಸಹೋದರಿ ಜೀವನಪೂರ್ತಿ ಹೀಗಿರಲು ಕಾರ ...