Asianet Suvarna News Asianet Suvarna News

Chinese J 10C Jets: ರಫೇಲ್‌ಗೆ ಸಡ್ಡು, ಚೀನಾ ನಿರ್ಮಿತ ಜೆ-10ಸಿ ವಿಮಾನ ಖರೀದಿಸಿದ ಪಾಕ್‌

 • ಚೀನಾದಿಂದ 25 ಬಹುಪಯೋಗಿ ಜೆ-10ಸಿ ಯುದ್ಧ ವಿಮಾನ ಖರೀದಿಸಿದ ಪಾಕ್
 • ರಫೇಲ್‌ ಯುದ್ಧ ವಿಮಾನಗಳಿಗೆ ಟಕ್ಕರ್‌ ನೀಡಲು ಪಾಕ್‌ ಜೆ-10ಸಿ ವಿಮಾನಗಳ ಖರೀದಿ
Pakistan Acquired Chinese J 10C Jets To Counter Rafale dpl
Author
Bangalore, First Published Dec 31, 2021, 5:30 AM IST
 • Facebook
 • Twitter
 • Whatsapp

ಇಸ್ಲಾಮಾಬಾದ್‌(ಡಿ.31): ಭಾರತ ರಷ್ಯಾದಿಂದ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುತ್ತಿರುವುದಕ್ಕೆ ಪ್ರತಿಯಾಗಿ ನೆರೆಯ ಪಾಕಿಸ್ತಾನ ಚೀನಾದಿಂದ 25 ಬಹುಪಯೋಗಿ ಜೆ-10ಸಿ ಯುದ್ಧ ವಿಮಾನಗಳನ್ನು ಖರೀದಿಸಿದೆ ಎಂದು ಪಾಕ್‌ ಸಚಿವ ಶೇಖ್‌ ರಶೀದ್‌ ಅಹ್ಮದ್‌ ತಿಳಿಸಿದ್ದಾರೆ.

ರಾವಲ್‌ಪಿಂಡಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಎಲ್ಲಾ 25 ಯುದ್ಧ ವಿಮಾನಗಳೂ 2022ರ ಮಾ.23ರ ಪಾಕಿಸ್ತಾನ ಸಂಸ್ಥಾಪನಾ ದಿನದಂದು ದೇಶಕ್ಕೆ ಆಗಮಿಸಲಿವೆ. ಚೀನಾ ತನ್ನ ವಿಶ್ವಾಸಾರ್ಹ ಜೆ.10ಸಿ ಯುದ್ಧವಿಮಾನಗಳನ್ನು ಒದಗಿಸುವ ಮೂಲಕ ಮಿತ್ರ ದೇಶದ ರಕ್ಷಣೆಗೆ ಮುಂದಾಗಿದೆ. ಮಾ.23ರಂದು ವಿಐಪಿಗಳು ಕಾರ‍್ಯಕ್ರಮಕ್ಕೆ ಆಗಮಿಸಲಿದ್ದಾರೆ ’ಎಂದು ಹೇಳಿದರು.

'ನೋ ಪ್ರಾಬ್ಲಮ್ ಭಾರತಕ್ಕೆ ಬೇಕಾದಷ್ಟು ರಫೇಲ್ ಕೊಡ್ತೆವೆ'

ಕಳೆದ ವರ್ಷ ಪಾಕಿಸ್ತಾನ ಮತ್ತು ಚೀನಾ ಜೆ-10ಸಿ ಸೇರಿದಂತೆ ಹಲವು ಯುದ್ಧವಿಮಾನಗಳನ್ನು ಬಳಸಿಕೊಂಡು ಜಂಟಿ ಕಸರತ್ತು ನಡೆಸಿದ್ದವು. ಅದಾದ ನಂತರದಲ್ಲಿ ಪಾಕ್‌ ಚೀನಾದಿಂದ ಜೆ-10ಸಿ ಫೈಟರ್‌ಗಳ ಖರೀದಿಗೆ ನಿರ್ಧರಿಸಿದೆ.

ರಫೇಲ್‌ ಯುದ್ಧ ವಿಮಾನಗಳಿಗೆ ಟಕ್ಕರ್‌ ನೀಡಲು ಪಾಕ್‌ ಜೆ-10ಸಿ ವಿಮಾನಗಳ ಖರೀದಿಗೆ ಮುಂದಾಗಿದೆ. ಕಳೆದ 5 ವರ್ಷದ ಹಿಂದೆ ಭಾರತ, ರಷ್ಯಾದಿಂದ 36 ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಹಲವು ವಿಮಾನಗಳು ಭಾರತದ ವಾಯುಸೇನೆಗೆ ಸೇಪ್ಡೆಯಾಗಿ ನಿಯೋಜನೆಗೊಂಡಿವೆ.

ಲಕ್ಷಣಗಳು

 • ಸಿಂಗಲ್‌ ಎಂಜಿನ್‌, ಹಗುರ ವಿಮಾನ
 • ಎಲ್ಲಾ ರೀತಿಯ ಹವಾಮಾನದಲ್ಲೂ ಕಾರಾರ‍ಯಚರಣೆ
 • ದೊಡ್ಡ ಡೆಲ್ಟಾರೆಕ್ಕೆ, ರೆಕ್ಕೆಯಂತಿರುವ 2 ಪುಟ್ಟರೆಕ್ಕೆಗಳು ವಿಮಾನಕ್ಕೆ ಹೆಚ್ಚು ಶಕ್ತಿ ಒದಗಿಸುತ್ತವೆ.
 • ರಷ್ಯಾದ ಮಿಗ್‌-29, ಅಮೆರಿಕದ ಎಫ್‌-16ನಲ್ಲಿರುವ ಪೇಲೋಡ್‌ಗಳನ್ನೇ ಹೊಂದಿರಲಿದೆ ಎನ್ನಲಾಗಿದೆ.

ಭಾರತದ ಸೇನಾ ಬತ್ತಳಿಕೆಗೆ ಈಗಾಗಲೇ 33 ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸಿರುವ ಫ್ರಾನ್ಸ್‌, ಭಾರತ ಬಯಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟುರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸಲು ಸಿದ್ಧ ಎಂದು ಹೇಳಿದೆ. ಭಾರತ ಪ್ರವಾಸದಲ್ಲಿರುವ ಫ್ರಾನ್ಸ್‌ ಭದ್ರತಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಅವರು, ‘ಉಭಯ ದೇಶಗಳು ಒಂದೇ ಯುದ್ಧ ವಿಮಾನ ಬಳಸುತ್ತಿರುವುದು ಉಭಯ ದೇಶಗಳ ಬಾಂಧವ್ಯದ ನಿಜವಾದ ಆಸ್ತಿ ಮತ್ತು ಶಕ್ತಿ’ ಎಂದು ಬಣ್ಣಿಸಿದರು.

ರಫೇಲ್‌ ಯುದ್ಧ ವಿಮಾನಗಳ ಬಗ್ಗೆ ಭಾರತ ತೃಪ್ತವಾಗಿರುವುದು ಖುಷಿ ತಂದಿದೆ. ಜತೆಗೆ ಕೊರೋನಾ ಹೊರತಾಗಿಯೂ, ಭಾರತದ ಬೇಡಿಕೆಯಂತೆ 36 ಯುದ್ಧ ವಿಮಾನಗಳನ್ನು ಸರಿಯಾದ ಸಮಯಕ್ಕೆ ಪೂರೈಸಲಾಗುತ್ತದೆ. ಜತೆಗೆ ಭಾರತದ ಮಹತ್ವಾಕಾಂಕ್ಷಿ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಫ್ರಾನ್ಸ್‌ ಪೂರ್ತಿಯಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

Follow Us:
Download App:
 • android
 • ios