Asianet Suvarna News Asianet Suvarna News

ನಮ್ಮ ನ್ಯೂಕ್ಲಿಯರ್ ಬಾಂಬ್ ಮುಸ್ಲಿಮರ ರಕ್ಷಣೆಗೆ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಪಾಕಿಸ್ತಾನ!

ನಮ್ಮಲ್ಲಿ ನ್ಯೂಕ್ಲಿಯರ್ ಬಾಂಬ್ ಇದೆ. ಅದು ಮುಸ್ಲಿಮರ ರಕ್ಷಣೆಗಾಗಿ ಇರಿಸಲಾಗಿದೆ. ಪ್ಯಾಲೆಸ್ತಿನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ನಮ್ಮ ನ್ಯೂಕ್ಲಿಯರ್ ಬಾಂಬ್ ಬಳಸಿ ವಿಶ್ವ ಭೂಪಟದಲ್ಲಿ ಇಸ್ರೇಲ್‌ ಧೂಳನ್ನು ಉಳಿಸಲ್ಲ ಎಂದು ಪಾಕಿಸ್ತಾನ ಸಂಸತ್ತಿನಲ್ಲಿ ಎಚ್ಚರಿಕೆ ನೀಡಲಾಗಿದೆ.

Our Nuclear Bomb is to defend all Muslims Pakistani Parliamentarian warn israel with Atom Bomb attack ckm
Author
First Published Oct 17, 2023, 5:02 PM IST

ಇಸ್ಲಾಮಾಬಾದ್(ಅ.17) ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಭೀಕರ ನರಮೇಧಕ್ಕೆ ಪ್ರತಿಯಾಗಿ ದಾಳಿ ನಡೆಯುತ್ತಿದೆ. ಗಾಜಾದಲ್ಲಿರುವ ಹಮಾಸ್ ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಆದರೆ ಯಹೂದಿ ದೇಶವಾಗಿರುವ ಇಸ್ರೇಲ್ ಮುಸ್ಲಿಮರ ಮೇಲೆ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿ ಹಲವರು ಪ್ಯಾಲೆಸ್ತಿನ್‍ಗೆ ಬೆಂಬಲ ನೀಡುತ್ತಿದ್ದಾರೆ. ಈ ಪೈಕಿ ಪಾಕಿಸ್ತಾನ ಕೂಡ ಹಿಂದೆ ಬಿದ್ದಿಲ್ಲ. ಇಂದು ಪಾಕಿಸ್ತಾನದ ಸಂಸತ್ತಿನಲ್ಲಿ ಎಚ್ಚರಿಕೆ ಗಂಟೆಗಳು ಮೊಳಗಿದೆ. ಪಾಕಿಸ್ತಾನದ ಮಹಿಳಾ ಸಂಸದೆ, ಮಾಜಿ ಪ್ರಧಾನಿ ನವಾಜ್ ಷರೀಫ್ ಸೊಸೆ ಆಡಿದ ಮಾತುಗಳು ಭಾರಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿರುವ ನ್ಯೂಕ್ಲಿಯರ್ ಬಾಂಬ್ ಸುಮ್ಮನೆ ನೋಡಲು ಇಟ್ಟಿಲ್ಲ. ಅದು ಪಾಕಿಸ್ತಾನ ಹಾಗೂ ಮುಸ್ಲಿಮರ ರಕ್ಷಣೆಗಾಗಿ ಇಡಲಾಗಿದೆ. ಇಸ್ರೇಲ್ ದಾಳಿ ಮುಂದುವರಿಸಿದರೆ ನ್ಯೂಕ್ಲಿಯರ್ ಬಾಂಬ್ ಬಳಸಿ ವಿಶ್ವ ಭೂಪಟದಿಂದ ಇಸ್ರೇಲ್ ಮಾಯ ಮಾಡುತ್ತೇವೆ ಎಂದು ಗುಡುಗಿದ್ದಾರೆ.

ಪಾಕಿಸ್ತಾನ ಹಲವು ಬಾರಿ ಭಾರತದ ವಿರುದ್ಧ ನ್ಯೂಕ್ಲಿಯರ್ ಬಾಂಬ್ ಪ್ರಯೋಗಿಸುವ ಮಾತನಾಡಿದೆ. ಇದೀಗ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ. ಇದು ಪಾಕಿಸ್ತಾನದ ಸಂಸತ್ತಿನಲ್ಲಿ ಪಾಕ್ ಮಹಿಳಾ ಸಂಸದರು ನೀಡಿದ ಎಚ್ಚರಿಕೆ. ಇದಕ್ಕೆ ಇತರ ಸಂಸದರು ಮೇಜು ತಟ್ಟಿ ಬೆಂಬಲಿಸಿದ್ದಾರೆ. ಮಾಜಿ ಪ್ರಧಾನಿ, ಪಾಕಿಸ್ತಾನದಿಂದ ಪಲಾಯನ ಮಾಡಿರುವ ನವಾಜ್ ಷರೀಫ್ ಸೊಸೆ ಈ ಎಚ್ಚರಿಕೆ ಮಾತುಗಳನ್ನಾಡಿದ್ದಾರೆ.

ಪಂದ್ಯ ಸೋತ ಪಾಕ್‌ಗೆ ಶಾಕ್, ಮೈದಾನದಲ್ಲಿ ನಮಾಜ್ ಮಾಡಿದ ರಿಜ್ವಾನ್ ವಿರುದ್ಧ ದೂರು ದಾಖಲು!

ನಾವು ನ್ಯೂಕ್ಲಿಯರ್ ಬಾಂಬ್ ಹೊಂದಿದ ದೇಶ. ಈ ಬಾಂಬ್‌ಗಳನ್ನು ನೋಡಲು ತಯಾರಿಸಿಲ್ಲ. ಇದು ಪಾಕಿಸ್ತಾನ ಹಾಗೂ ಮುಸ್ಲಿಮರ ರಕ್ಷಣೆಗಾಗಿ ಮಾಡಲಾಗಿದೆ. ಪ್ಯಾಲೆಸ್ತಿನಿಯರ ಮೇಲೆ ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ಈ ಬಾಂಬ್ ಬಳಸಿ ವಿಶ್ವಭೂಪಟದಿಂದ ಇಸ್ರೇಲ್ ಹೆಸರೇ ಅಳಿಸಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ. 

ಇದಕ್ಕೂ ಮೊದಲು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸಂಸದೆ, ಪ್ಯಾಲೆಸ್ತಿನ್ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸಂಪೂರ್ಣ ಪಾಕಿಸ್ತಾನವಿದೆ. ಮುಸ್ಲಿಮರ ಸಂಕಷ್ಟಕ್ಕೆ ನಾವು ಎದೆಯೊಡ್ಡಿ ನಿಲ್ಲುತ್ತೇವೆ. ಮಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಯನ್ನು ಅಂತ್ಯಗೊಳಿಸಲು ಎಲ್ಲಾ ಮುಸ್ಲಿಮರು ಒಗ್ಗಟ್ಟಾಗಿ ಹೋರಾಟ ನಡೆಸುತ್ತೇವೆ. ವಿಶ್ವದೆಲ್ಲಡೆ ಪಸರಿಸಿರುವ ಮುಸ್ಲಿಮರು ನಮ್ಮ ಜೊತೆ ಕೈಜೋಡಿಸುತ್ತಾರೆ ಎಂದು ಸಂಸದೆ ಹೇಳಿದ್ದರು.

Unknown Gunmen: ಪಠಾಣ್‌ಕೋಟ್‌ ದಾಳಿಯ ಮಾಸ್ಟರ್‌ಮೈಂಡ್‌ ಶಾಹಿದ್‌ ಲತೀಫ್‌ ಪಾಕಿಸ್ತಾನದಲ್ಲಿ ಹತ್ಯೆ!

ಪ್ಯಾಲೆಸ್ತಿನ್‌ಗೆ ಬೆಂಬಲ ಘೋಷಿಸಿ ಪಾಕಿಸ್ತಾನದ ಹಲವೆಡೆ ರ್ಯಾಲಿ ನಡೆಯುತ್ತಿದೆ. ಇಸ್ರೇಲ್ ದಾಳಿಯನ್ನು ಖಂಡಿಸಿದ್ದು ಮಾತ್ರವಲ್ಲ.ಯಹೂದಿಗಳ ಸಂಪೂರ್ಣ ನಾಶಕ್ಕೂ ಕರೆ ನೀಡಿದ್ದಾರೆ. ಪ್ಯಾಲೆಸ್ತಿನ್ ಆಕ್ರಮಿಸಿಕೊಂಡಿರುವ ಯಹೂದಿಗಳ ಆಕ್ರಮಣ ಮುಗಿಸುವವರೆಗೆ ಹೋರಾಟ ನಿಲ್ಲಬಾರದು ಎಂದು ಹಲವು ರ್ಯಾಲಿಗಳಲ್ಲಿ ಕರರೆ ನೀಡಲಾಗಿದೆ.
 

Follow Us:
Download App:
  • android
  • ios