Asianet Suvarna News Asianet Suvarna News

Unknown Gunmen: ಪಠಾಣ್‌ಕೋಟ್‌ ದಾಳಿಯ ಮಾಸ್ಟರ್‌ಮೈಂಡ್‌ ಶಾಹಿದ್‌ ಲತೀಫ್‌ ಪಾಕಿಸ್ತಾನದಲ್ಲಿ ಹತ್ಯೆ!

2016ರ ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಮತ್ತು ದಾಳಿಯ ಪ್ರಮುಖ ಸಂಯೋಜಕನಾಗಿದ್ದ ಶಾಹಿದ್ ಲತೀಫ್‌ನನ್ನು ಬುಧವಾರ ಪಾಕಿಸ್ತಾನದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

Shahid Latif Pathankot attack mastermind killed by Unknown Gunmen in Pakistan san
Author
First Published Oct 11, 2023, 12:56 PM IST

ನವದೆಹಲಿ (ಅ.11): ಅಪರಿಚಿತ ದುಷ್ಕರ್ಮಿಗಳಿಂದ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರ ಸಂಹಾರ ಮುಂದುವರಿದಿದೆ. ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ನ ಹತ್ಯೆಯ ಬಳಿಕ, 2016ರಲ್ಲಿ ಪಠಾಣ್‌ಕೋಟ್‌ ಸೇನಾನೆಲೆಯ ಮೇಲೆ ದಾಳಿಯ ಮಾಸ್ಟರ್‌ ಮೈಂಡ್‌ ಹಾಗೂ ಪ್ರಮುಖ ಸಂಯೋಜಕ ಶಾಹೀದ್‌ ಲತೀಫ್‌ನನ್ನು ಇದೇ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಬುಧವಾರ ಈ ದಾಳಿ ನಡೆದಿದೆ. 41 ವರ್ಷದ ಶಾಹಿದ್ ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಸದಸ್ಯ ಮತ್ತು 2016ರ ಜನವರಿ 2ರಂದು ನಡೆದ ಪಠಾಣ್‌ಕೋಟ್ ದಾಳಿಯ ಪ್ರಮುಖ ಸಂಚುಕೋರನಾಗಿದ್ದ. ಸಿಯಾಲ್‌ಕೋಟ್‌ನಿಂದ ಈ ದಾಳಿಯನ್ನು ಸಂಘಟಿಸಿದ್ದ ಶಾಹೀದ್‌ ಲತೀಫ್‌, ನಾಲ್ವರು ಜೈಶ್‌ ಭಯೋತ್ಪಾದಕರನ್ನು ಪಠಾಣ್‌ಕೋಟ್‌ಗೆ ಕಳಿಸಿದ್ದ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನೆಯ ಆರೋಪದ ಮೇಲೆ ನವೆಂಬರ್ 1994 ರಲ್ಲಿ ಲತೀಫ್ ಅವರನ್ನು ಭಾರತದಲ್ಲಿ ಬಂಧಿಸಿದ್ದಲ್ಲದೆ, ವಿಚಾರಣೆಗೆ ಒಳಪಡಿಸಲಾಗಿತ್ತು. ಭಾರತದಲ್ಲಿ ಶಿಕ್ಷೆ ಅನುಭವಿಸಿದ ನಂತರ, 2010 ರಲ್ಲಿ ವಾಘಾ ಮೂಲಕ ಆತನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿತ್ತು. 1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲೂ ಲತೀಫ್ ಪ್ರಮುಖ ಆರೋಪಿಯಾಗಿದ್ದ. 2010 ರಲ್ಲಿ ಭಾರತ ಸರ್ಕಾರದ ಸೂಚನೆಯ ಮೇಲೆ ಬಿಡುಗಡೆಯಾದ ನಂತರ ಲತೀಫ್ ಪಾಕಿಸ್ತಾನದ ಜಿಹಾದಿ ಫ್ಯಾಕ್ಟರಿಗೆ ಹಿಂತಿರುಗಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಹೇಳಿದೆ. ಭಾರತ ಸರ್ಕಾರದಿಂದ ಆತನನ್ನು ವಾಂಟೆಡ್ ಭಯೋತ್ಪಾದಕ ಎಂದು ಪಟ್ಟಿ ಮಾಡಲಾಗಿತ್ತು.

ಪಠಾಣ್’ಕೋಟ್ ದಾಳಿ: ಮಸೂದ್ ಅಝರ್ ಸೇರಿದಂತೆ ನಾಲ್ಕು ಜೈಶ್ ಉಗ್ರರ ಮೇಲೆ ಆರೋಪಪಟ್ಟಿ ಸಲ್ಲಿಸಿದ ಎನ್ಐಏ

2010ರಲ್ಲಿ ಬಿಡುಗಡೆ ಮಾಡಿದ್ದ ಭಾರತ: ಹಲವು ಆರೋಪಗಳ ಮೇಲೆ ಭಾರತದಲ್ಲಿ ಶಿಕ್ಷೆಗೆ ಒಳಗಾಗಿದ್ದ ಶಾಹೀದ್‌ ಲತೀಫ್‌ನಲ್ಲಿ 2010ರಲ್ಲಿ ಯುಪಿಎ ಸರ್ಕಾರ ಸೌಹಾರ್ದ ಸೂಚಕದಲ್ಲಿ ಬಿಡುಗಡೆ ಮಾಡಿತ್ತು. 2010ರ ಮೇ 29 ರಂದು ಜಮ್ಮು ಕಾಶ್ಮೀರ ಸರ್ಕಾರ, ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಭಾರತದ ವಿವಿಧ ಜೈಲುಗಳಲ್ಲಿದ್ದ ಪಾಕಿಸ್ತಾನದ 25ಕ್ಕೂ ಅಧಿಕ ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ಕಳಿಸಿಕೊಟ್ಟಿತ್ತು. ಅದರಲ್ಲಿ ಶಾಹೀದ್‌ ಲತೀಫ್‌ ಕೂಡ ಒಬ್ಬನಾಗಿದ್ದ. ಮುಜಫರಾಬಾದ್‌ನ ಶಾಹಿದ್ ಲತೀಫ್ ಅಲಿಯಾಸ್ ಶಾಹಿದ್ ಭಟ್ ಅಂದು ವಾರಣಾಸಿ ಜೈಲಿನಲ್ಲಿದ್ದ.

 

Punjab: ಪಠಾಣ್‌ಕೋಟ್ ಸೇನಾ ಶಿಬಿರದ ಬಳಿ ಗ್ರೆನೇಡ್ ಸ್ಫೋಟ!

Follow Us:
Download App:
  • android
  • ios