Asianet Suvarna News Asianet Suvarna News

ಪಂದ್ಯ ಸೋತ ಪಾಕ್‌ಗೆ ಶಾಕ್, ಮೈದಾನದಲ್ಲಿ ನಮಾಜ್ ಮಾಡಿದ ರಿಜ್ವಾನ್ ವಿರುದ್ಧ ದೂರು ದಾಖಲು!

ಭಾರತ ವಿರುದ್ಧದ ಏಕದಿನ ವಿಶ್ವಕಪ್ ಲೀಗ್ ಪಂದ್ಯ ಸೋತ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹೈದರಾಬಾದ್ ಮೈದಾನದಲ್ಲಿ ಪಂದ್ಯದ ನಡುವೆ ನಮಾಜ್ ಮಾಡಿ ವಿವಾದಕ್ಕೆ ಕಾರಣವಾಗಿರುವ ಮೊಹಮ್ಮದ್ ರಿಜ್ವಾನ್ ವಿರುದ್ಧ ಇದೀಗ ದೂರು ದಾಖಲಾಗಿದೆ.

Indian Lawyer lodge complaint against Pakistan Mohammad Rizwan offering Namaz in Hyderabad stadium ckm
Author
First Published Oct 16, 2023, 3:51 PM IST

ನವದೆಹಲಿ(ಅ.16) ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನ ಇದೀಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಪಾಕಿಸ್ತಾನ ತಂಡಕ್ಕೆ ಮೇಲಿಂದ ಮೇಲೆ ವಿವಾದಗಳು ಅಂಟಿಕೊಳ್ಳುತ್ತಿದೆ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಹೈದರಾಬಾದ್ ಕ್ರೀಡಾಂಗಣದಲ್ಲಿ ನಮಾಜ್ ಮಾಡಿದ್ದರು. ಪಂದ್ಯ ನಡುವೆ ಮಾಡಿದ ನಮಾಜ್ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮೊಹಮ್ಮದ್ ರಿಜ್ವಾನ್ ವಿರುದ್ಧ ಐಸಿಸಿಯಲ್ಲಿ ದೂರು ದಾಖಲಾಗಿದೆ. ಭಾರತದ ವಕೀಲ ದೂರು ದಾಖಲಿಸಿದ್ದು, ಕ್ರೀಡೆಯಲ್ಲಿ ಧಾರ್ಮಿಕತೆ ಬೆರೆಸಿ ಕ್ರೀಡಾ ಸ್ಪೂರ್ತಿಗೆ ಅಡ್ಡಿಯಾಗಿದ್ದಾರೆ ಎಂದು ದೂರಿದ್ದಾರೆ.

ರಿಜ್ವಾನ್ ವಿರುದ್ಧ ಭಾರತದ ವಕೀಲ ವಿನೀತ್ ಜಿಂದಾಲ್ ಐಸಿಸಿಯಲ್ಲಿ ದೂರು ದಾಖಲಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಭಾರತೀಯ ಅಭಿಮಾನಿಗಳ ಮುಂದೆ ತಾನು ಮುಸ್ಲಿಂ ಎಂದು ತೋರಿಸಿಕೊಳ್ಳಲು ನಮಾಜ್ ಮಾಡಿದ್ದಾರೆ. ಶ್ರೀಲಂಕಾ ವಿರುದ್ದದ ಪಂದ್ಯದ ಬಳಿಕ ಗೆಲುವನ್ನು ಗಾಜಾ ಜನರಿಗೆ ಅರ್ಪಿಸಿದ್ದರು. ಈ ಮೂಲಕ ಕ್ರೀಡೆಯಲ್ಲಿ ಧರ್ಮದ ಜೊತೆಗೆ ರಾಜಕೀಯ ಹಾಗೂ ಸಿದ್ಧಾಂತಗಳನ್ನು ಬೆರೆಸಿದ್ದಾರೆ. ಇದು ಕ್ರೀಡಾ ಸ್ಪೂರ್ತಿ ಹಾಗೂ ಕ್ರೀಡಾಮನೋಭಾವಕ್ಕೆ ವಿರುದ್ಧವಾಗಿದೆ. ಐಸಿಸಿ ನಿಯಮ ಉಲ್ಲಂಘನೆಯಾಗಿದೆ ಎಂದು  ವಿನೀತ್ ಜಿಂದಾಲ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

 

 

ವಿರಾಟ್ ಕೊಹ್ಲಿ ಆಟೋಗ್ರಾಫ್ ಜೆರ್ಸಿ ಪಡೆದ ಬಾಬರ್ ಅಜಂ; ಉರಿದುಕೊಂಡ ವಾಸೀಂ ಅಕ್ರಂ..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ 10 ವಿಕೆಟ್ ಗೆಲುವು ದಾಖಲಿಸಿದ ಪಾಕಿಸ್ತಾನ ಸಂಭ್ರಮ ಆಚರಿಸಿತ್ತು. ಈ ವೇಳೆಯೂ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲಿ ನಮಾಜ್ ಮಾಡಿದ್ದರು. ರಿಜ್ವಾನ್ ತಮ್ಮ ಕ್ರಿಕೆಟ್ ಆಟವನ್ನು ಕ್ರೀಡೆಯಾಗಿ ನೋಡುತ್ತಿಲ್ಲ, ಧಾರ್ಮಿಕತೆ ಆಚೆಗೆ ಕೊಂಡೊಯ್ದಿದ್ದಾರೆ. ರಿಜ್ವಾನ್ ನಮಾಜ್ ಮಾಡಿರುವನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಹೊಗಳಿದ್ದರು. ಭಾರತದ ಅಭಿಮಾನಿಗಳ ಮುಂದೆ ಮೊಹಮ್ಮದ್ ರಿಜ್ವಾನ್ ನಮಾಜ್ ಮಾಡಿರುವುದು ವಿಶೇಷ ಕ್ಷಣ ಎಂದು ಹೇಳಿಕೆ ನೀಡಿದ್ದಾರೆ. ಮೊಹಮ್ಮದ್ ರಿಜ್ವಾನ್ ಕ್ರಿಕೆಟ್ ಪಂದ್ಯವನ್ನು ಧಾರ್ಮಿಕತೆ ಹಾಗೂ ಧರ್ಮವನ್ನು ಪ್ರಚುರಪಡಿಸಲು ಮಾರ್ಗವಾಗಿ ಬಳಸಿಕೊಂಡಿದ್ದಾರೆ. ಇತರ ಹಲವು ಧರ್ಮ ಹಾಗೂ ಮತಗಳ ಅಭಿಮಾನಿಗಳ ಮುಂದೆ ತನ್ನ ಧಾರ್ಮಿಕತೆಯನ್ನು ಕ್ರಿಕೆಟ್ ಮೈದಾನದಲ್ಲಿ ಪ್ರದರ್ಶನ ಪಡಿಸಿವುದು ನಿಯಮದ ವಿರುದ್ಧವಾಗಿದೆ ಎಂದು ವಿನೀತ್ ಜಿಂದಾಲ್ ದೂರಿನಲ್ಲಿ ಹೇಳಿದ್ದಾರೆ.

'ನಿಮಗೆ ಗೆಲ್ಲೋಕಂತೂ ಆಗಲ್ಲ, ಕನಿಷ್ಠ..': ಭಾರತ ಎದುರಿನ ಹೀನಾಯ ಸೋಲಿಗೆ ಕಣ್ಣೀರು ಹಾಕಿದ ಪಾಕ್ ಮಾಜಿ ನಾಯಕ..!

ಶ್ರೀಲಂಕಾ ವಿರುದ್ಧದ ಪಂದ್ಯದ ಮುಗಿದ ಬಳಿಕ ಗೆಲುವನ್ನು ಗಾಜಾ ಜನತೆಗೆ ಅರ್ಪಿಸಿದ್ದರು. ಇದು ಕ್ರಿಕೆಟ್ ಫೀಲ್ಡನ ಹೊರಗಡೆ ವಿಚಾರ ಎಂದು ಐಸಿಸಿ ದೂರು ಪಡೆದುಕೊಳ್ಳಲ ನಿರಾಕರಿಸಿದೆ. ಆದರೆ ಮೊಹಮ್ಮದ್ ರಿಜ್ವಾನ್ ತಂಡದ ಜರ್ಸಿಯಲ್ಲೇ ಈ ಮಾತು ಆಡಿದ್ದರು. ಹೀಗಾಗಿ ಇದು ಮೈದಾನದ ಹೊರಗಿನ ಮಾತಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕು  ಎಂದು ವಿನೀತ್ ಜಿಂದಾಲ್ ಐಸಿಸಿ ಬಳಿ ಆಗ್ರಹಿಸಿದ್ದಾರೆ.

Follow Us:
Download App:
  • android
  • ios