Asianet Suvarna News Asianet Suvarna News

ತಾಯಿ ಗರ್ಭದಲ್ಲಿಯೇ ರುಂಡ ಕತ್ತರಿಸಿ, ಓಡಿ ಹೋದ ಪಾಕ್ ವೈದ್ಯರು!

* ಪಾಕಿಸ್ತಾನದಲ್ಲಿ ಹಿಂದೂ ಗರ್ಭಿಣಿ ಮಹಿಳೆಯ ಮೇಲೆ ನಡೆದ ಕ್ರೌರ್ಯ

* ಹೆರಿಗೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿದ ಸಿಬ್ಬಂದಿ

* ತಾಯಿಯ ಗರ್ಭದಲ್ಲಿ ದೇಹವನ್ನು ಬಿಟ್ಟು ಪರಾರಿಯಾದ ಸಿಬ್ಬಂದಿ

Newborn decapitated during delivery in Pakistan probe ordered as head left inside womb pod
Author
Bangalore, First Published Jun 21, 2022, 12:56 PM IST

ಇಸ್ಲಮಾಬಾದ್(ಜೂ.21): ಪಾಕಿಸ್ತಾನದಲ್ಲಿ ಹಿಂದೂ ಗರ್ಭಿಣಿ ಮಹಿಳೆಯ ಮೇಲೆ ನಡೆದ ಕ್ರೌರ್ಯದ ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಹೆರಿಗೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿದ ಸಿಬ್ಬಂದಿ ತಾಯಿಯ ಗರ್ಭದಲ್ಲಿ ಮುಂಡವನ್ನು ಬಿಟ್ಟು ಪರಾರಿಯಾಗಿದ್ದಾರೆ. ಮಹಿಳೆ ಗಂಟೆಗಟ್ಟಲೆ ನರಳುತ್ತಲೇ ಇದ್ದಳು. ಈ ತಲೆತಗ್ಗಿಸುವ ಪ್ರಕರಣ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ತರಬೇತಿ ಪಡೆಯದ ಸಿಬ್ಬಂದಿ ಮಹಿಳೆಗೆ ಹೆರಿಗೆ ಮಾಡಿಸುತ್ತಿದ್ದರು. ಸಿಸೇರಿಯನ್ ಮೂಲಕ ಈ ಹೆರಿಗೆ ನಡೆದಿದ್ದು, ಸಿಬ್ಬಂದಿ ಮಗುವಿನ ತಲೆಯನ್ನು ಕತ್ತರಿಸಿ ತುಂಡರಿಸಿದ್ದಾರೆ. ಇದಾದ ಬಳಿಕ ಮಹಿಳೆಯ ಗರ್ಭದಲ್ಲಿ ಮುಂಡದ ಭಾಗವನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ಮಹಿಳೆಯ ಪ್ರಾಣಕ್ಕೂ ಅಪಾಯ ಎದುರಾಗಿದೆ. ಮಹಿಳೆ ಚಿಕಿತ್ಸೆಗಾಗಿ ಗಂಟೆಗಟ್ಟಲೆ ನರಳುತ್ತಿದ್ದಳು.

ತನಿಖೆಯ ಹೆಸರಿನಲ್ಲಿ ಔಪಚಾರಿಕತೆಗಳು ಪ್ರಾರಂಭ

ಮಾಧ್ಯಮ ವರದಿಗಳ ಪ್ರಕಾರ, ಸಿಂಧ್ ಪ್ರಾಂತ್ಯದ ಲಿಯಾಕತ್ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಗೈನೋ ವಿಭಾಗದಲ್ಲಿ ಈ ದುರಂತ ಪ್ರಕರಣ ನಡೆದಿದೆ. ಈ ಪ್ರಕರಣದ ತನಿಖೆಯ ಹೆಸರಿನಲ್ಲಿ ಸರ್ಕಾರ ಔಪಚಾರಿಕ ಕ್ರಮಗಳನ್ನು ಆರಂಭಿಸಿದೆ. ವಿಭಾಗದ ಡೀನ್ ಪ್ರೊಫೆಸರ್ ರಹೀಲ್ ಸಿಕಂದರ್ ಪ್ರಕಾರ, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು ತಂಡವನ್ನು ಸಹ ರಚಿಸಲಾಗಿದೆ.

ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ 5 ವರ್ಷದಲ್ಲಿ ಅರ್ಧ ಕುಸಿತ!

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ, ಅಲ್ಪಸಂಖ್ಯಾತರಾಗಿರುವ ಹಿಂದುಗಳ ಸಂಖ್ಯೆ ಐದೇ ವರ್ಷದಲ್ಲಿ ಅರ್ಧಕ್ಕರ್ಧ ಕುಸಿತವಾಗಿದೆ. 2017ರಲ್ಲಿ ನಡೆದ ಜನಗಣತಿಯಲ್ಲಿ 44.4 ಲಕ್ಷ ಇದ್ದ ಜನಸಂಖ್ಯೆ ಈಗ 22 ಲಕ್ಷಕ್ಕೆ ಕುಸಿದ ವಿಚಾರ ಬೆಳಕಿಗೆ ಬಂದಿದೆ.

‘ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಈಗ ಸುಮಾರು 22 ಲಕ್ಷದಷ್ಟಿದೆ. ಇದು ಪಾಕಿಸ್ತಾನದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ.1.18ರಷ್ಟಿದೆ’ ಎಂದು ಶಾಂತಿ ಮತ್ತು ನ್ಯಾಯಯುತ ಪಾಕಿಸ್ತಾನ ಕೇಂದ್ರ ಬಿಡುಗಡೆ ಮಾಡಿರುವ ವರದಿ ಹೇಳಿದೆ. 2017ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ.2.14 ಇತ್ತು.

ಇನ್ನು 1947ರಲ್ಲಿ ಸ್ವತಂತ್ರಗೊಂಡಾಗ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ.20ರಷ್ಟಿತ್ತು (4.38 ಲಕ್ಷ ಜನಸಂಖ್ಯೆ). ಆದರೆ ಈಗಿನ ಅಂಕಿ ಅಂಶ ನೋಡಿದರೆ ಹಿಂದೂಗಳ ಪರಿಸ್ಥಿತಿ ಹೇಗಿದೆ ಎಂಬುದು ಇದರಿಂದ ವಿದಿತವಾಗುತ್ತದೆ.

24 ಗಂಟೆಯಲ್ಲಿ 2 ಮದುವೆಯಾದ ಪಾಕ್ ಸಂಸದ ನಿಧನ!

ಯಾವ ಧರ್ಮೀಯರು ಎಷ್ಟು: ಪಾಕಿಸ್ತಾನದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.5ಕ್ಕಿಂತ ಕಡಿಮೆ ಇರುವ ಸಮುದಾಯವನ್ನು ಅಲ್ಪಸಂಖ್ಯಾತರು ಎಂದು ಗುರುತಿಸಲಾಗುತ್ತದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ 18.68 ಕೋಟಿಯಷ್ಟಿದೆ. ಇದರಲ್ಲಿ ಮುಸ್ಲಿಮರ ಸಂಖ್ಯೆ 18.25 ಕೋಟಿಯಷ್ಟಿದೆ. ಅಲ್ಲದೇ ಪಾಕಿಸ್ತಾನದಲ್ಲಿ ಒಟ್ಟು 17 ವಿವಿಧ ಧರ್ಮಗಳು ಮತ್ತು 1,400 ಮಂದಿ ನಾಸ್ತಿಕರಿದ್ದಾರೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿ 22,10,566 ಮಂದಿ ಹಿಂದುಗಳಿದ್ದಾರೆ. 18 ಸಾವಿರ ಕ್ರೈಸ್ತರು, 1.88 ಲಕ್ಷ ಅಹಮದಿಗಳು, 74 ಸಾವಿರ ಸಿಖ್ಖರು, 14 ಸಾವಿರ ಭಾಯಿಸ್‌, 3917 ಮಂದಿ ಪಾರ್ಸಿಗಳಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೇ 11 ಅಲ್ಪಸಂಖ್ಯಾತ ಸಮುದಾಯಗಳ ಸಂಖ್ಯೆ 2 ಸಾವಿರ ಜನಸಂಖ್ಯೆಗಿಂತ ಕಡಿಮೆ ಇದೆ. 1,787 ಬೌದ್ಧರು, 628 ಶಿಂಟೋಗಳು, 628 ಯಹೂದಿಗಳು, ಆಫ್ರಿಕಾದ ಧರ್ಮಗಳನ್ನು ಅನುಸರಿಸುವವರು 1,418, ಕೆಲಾಶಾ ಸಮುದಾಯದ 1,522 ಮತ್ತು ಜೈನ ಧರ್ಮದ 6 ಜನರಿದ್ದಾರೆ.

ಹಿಂದೂಗಳು ಸೇರಿದಂತೆ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಬಡತನ ರೇಖೆಗಿಂತ ಕೆಳಗಿದ್ದು, ಇವರ ಪ್ರಾತಿನಿಧ್ಯ ಅತ್ಯಲ್ಪವಾಗಿದೆ. ಬಹುಪಾಲು ಅಲ್ಪಸಂಖ್ಯಾತ ಸಮುದಾಯಗಳು ಸಿಂಧ್‌ ಪ್ರಾಂತ್ಯದಲ್ಲಿ ವಾಸಿಸುತ್ತಿವೆ ಎಂದು ವರದಿ ತಿಳಿಸಿದೆ.

ಪಾಕ್‌ನ ಅಲ್ಪಸಂಖ್ಯಾತರ ಸಂಖ್ಯೆ
ಹಿಂದುಗಳು 22 ಲಕ್ಷ
ಅಹಮದಿಗಳು 1.88 ಲಕ್ಷ
ಸಿಖ್ಖರು 74 ಸಾವಿರ
ಪಾರ್ಸಿ 3900
ಬೌದ್ಧರು 1787
ಯಹೂದಿಗಳು 628
ಜೈನರು 6

Hindu Temple ಕಿಡಿಗೇಡಿಗಳ ದಾಳಿಗೆ ಪಾಕಿಸ್ತಾನದ ಹಿಂದೂ ದೇವಾಲಯ ಸಂಪೂರ್ಣ ಧ್ವಂಸ!

ಕರಾಚಿಯಲ್ಲಿ ಹಿಂದು ದೇವತೆ ಮೂರ್ತಿ ಧ್ವಂಸ: ಪಾಕಿಸ್ತಾನದ ಕರಾಚಿಯಲ್ಲಿ ಮಾರಿ ಮಾತಾ ಮಂದಿರ ಎಂಬ ಹಿಂದುಗಳ ದೇವಾಲಯದ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳು ಮಾತೆಯ ವಿಗ್ರಹವನ್ನು ನಾಶಪಡಿಸಿದ್ದಾರೆ. ಈ ಘಟನೆಯಿಂದ ಹಿಂದುಗಳಲ್ಲಿ ಭೀತಿ ಮೂಡಿದೆ.

Follow Us:
Download App:
  • android
  • ios