ಹಿಂದೂಗಳ ಮೇಲೆ ಪಾಕಿಸ್ತಾನದಲ್ಲಿ ನಿಲ್ಲದ ದಾಳಿ ಶ್ರೀ ಮಾರಿ ಮಾತಾ ಮಂದಿರದ ಮೇಲೆ ಕಿಡಿಗೇಡಿಗಳ ದಾಳಿ ವಿಗ್ರಹಗಳು ಧ್ವಂಸ, ಕಾಣಿಕೆ ಹುಂಡಿ ಒಡೆದು ವಿಕೃತಿ

ಕರಾಚಿ(ಜೂ.09): ಭಾರತ ಪಾಠ ಮಾಡಲು ಬರವು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ತಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ಅದರಲ್ಲೂ ಹಿಂದೂಗಳ ಮೇಲೆ ಸತತ ದಾಳಿ ನಡೆಯುತ್ತಲೇ ಇದೆ. ಇದೀಗ ಕರಾಚಿಯಲ್ಲಿರುವ ಪುರಾತನ ಶ್ರೀ ಮಾರಿ ಮಾತಾ ಮಂದಿರದ ಮೇಲೆ ಕಿಡೇಗೇಡಿಗಳು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಸಂಪೂರ್ಣ ದೇವಸ್ತಾನ ಧ್ವಂಸಗೊಂಡಿದೆ.

ಕರಾಚಿಯ ಕೋರಂಗಿ ಬಳಿ ಇರುವ ಹಿಂದೂ ದೇವಸ್ಥಾನ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಕೋರಂಗಿಯಲ್ಲಿರುವ ಶ್ರೀ ಮಾರಿ ಮಾತಾ ಮಂದಿರ ಅತ್ಯಂತ ಪುರಾತನ ಮಂದಿರವಾಗಿದೆ. ಇಷ್ಟೇ ಅಲ್ಲ ಇಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿದೆ. ಆದರೆ ನಿನ್ನೆ(ಜೂ.08) ದೇವಸ್ಥಾನದ ಒಳ ನುಗ್ಗಿದ ಗುಂಪು ವಿಗ್ರಹಗಳನ್ನು ಪುಡಿ ಮಾಡಿ ಮಾಡಿದೆ. ದೇವಸ್ಥಾನದಲ್ಲಿನ ಗಂಟೆ, ಕಾಣಿಕೆ ಹುಂಡಿ, ಮೂರ್ತಿಗಳನ್ನು ಒಡೆದಿದ್ದಾರೆ. ಇನ್ನು ದೇವಸ್ಥಾನದ ಬಾಗಿಲು ಮುರಿಯಲಾಗಿದೆ. ಕಲ್ಲಿನ ಕಂಬಗಳನ್ನು ಬೀಳಿಸಿ ಹಾಕಿದ್ದಾರೆ.

ಪಾಕಿಸ್ತಾನ ತನ್ನ ಕೆಲಸವನ್ನು ನೋಡಿಕೊಳ್ಳಲಿ, ಭಾರತದ ತೀಕ್ಷ್ಣ ಉತ್ತರ

ಕರಾಚಿಯಲ್ಲಿ ಬೆರಳೆಣಿಕೆಯಷ್ಟು ಹಿಂದೂಗಳು ವಾಸಿಸುತ್ತಿದ್ದಾರೆ. ಹೀಗಾಗಿ ಈ ಮಂದಿರ ಉತ್ತಮ ರೀತಿಯಲ್ಲಿ ನಿರ್ವಹಣೆ ಆಗಿತ್ತು. ಕೆಲ ದಿನಗಳ ಹಿಂದೆ ಹಿಂದೂಗಳ ಸಂಖ್ಯೆ ಹೆಚ್ಚಾಗುತ್ತಿದೆ, ಎಚ್ಚರಿಕೆ ಅನ್ನೋ ಬೆದರಿಕೆಯೂ ಕರಾಚಿಯ ಕೋರಂಗಿ ಪ್ರದೇಶದಲ್ಲಿರುವ ಹಿಂದೂಗಳಿಗೆ ಬಂದಿತ್ತು. ಈ ಬೆದರಿಕೆ ಬೆನ್ನಲ್ಲೇ ಇದೀಗ ಮಾರಿ ಮಾತಾ ದೇಗುಲದ ಮೇಲೆ ದಾಳಿ ನಡೆದಿದೆ.

ಕೇಡಿಗೇಡಿಗಳು ದಾಳಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ಎಪ್ಐಆರ್ ಕೂಡ ದಾಖಲಾಗಿದೆ. ಇದೀಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಮೇಲೆ ದಾಳಿ ಮಾಡಿ ಹಿಂದೂಗಳ ನಂಬಿಕೆಗೆ ದ್ರೋಹ ಬಗದೆ ಕಿಡಿಗೇಡಿಗಳನ್ನು ಬಂದಿಸಲು ಹಿಂದೂ ಸಮುದಾಯ ಆಗ್ರಹಿಸಿದೆ. ಇದೇ ವೇಳೆ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಸರ್ಕಾರ ನೆರವ ನೀಡಬೇಕು ಎಂದು ಆಗ್ರಹಿಸಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ದೇವಸ್ಥಾನ ಟ್ರಸ್ಟ್ ಈ ಕುರಿತು ಆಕ್ರೋಶ ಹೊರಹಾಕಿದೆ. ಕಳೆದ 5 ತಿಂಗಳಲ್ಲಿ 15ಕ್ಕೂ ಹೆಚ್ಚು ಹಿಂದೂ ದೇಗುಲಗಳು, ಪೂಜಸ್ಥಳಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಲಾಗಿದೆ. ಇದುವರಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆ ಹೆಸರಲ್ಲಿ ದೇಗುಲ ಪುನರ್ ನಿರ್ಮಾಣಕ್ಕೆ ಅವಕಾಶವನ್ನೂ ನೀಡಿಲ್ಲ, ಆರ್ಥಿಕ ನೆರವನ್ನೂ ನೀಡಿಲ್ಲ ಎಂದು ಮಾರಿ ಮಾತಾ ದೇಗುಲ ಟ್ರಸ್ಟ್ ಆರೋಪಿಸಿದೆ.

ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟ: ನಾಲ್ವರು ಮೃತಪಟ್ಟಿರುವ ಸಾಧ್ಯತೆ

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಿಂಧೂ ನದಿಯಲ್ಲಿರುವ ಅತ್ಯಂತ ಪ್ರಾಚೀನ ಹಾಗೂ ಐತಿಹಾಸಿಕ ಶಿವನ ದೇವಾಲಯವನ್ನು ಅಪವಿತ್ರಗೊಳಿಸಲಾಗಿತ್ತು. ಬಳಿಕ ದಾಳಿ ಮಾಡಿ ವಿಗ್ರಹಗಳ ನಾಶ ಮಾಡಿದ್ದರು. ಗಣೇಶ ದೇವಾಲಯದ ಧ್ವಂಸ ಪ್ರಕರಣ ಸೇರಿದಂತೆ ಹಲವು ಘಟನೆಗಳು ಮರಕುಳಿಸುತ್ತಲೇ ಇದೆ ಎಂದು ಟ್ರಸ್ಟ್ ಆರೋಪಿಸಿದೆ.

ಅಖಂಡ ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಅತೀ ಹೆಚ್ಚು ದೇವಾಲಗಳಿದ್ದವು. ಆದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದ್ದರೂ ದೇವಸ್ಥಾನಗಳ ಸಂಖ್ಯೆ ಕಡಿಮೆಯಾಗಿದೆ. ಅತ್ತ ಸಿಂಧ್ ಪಾಕಿಸ್ತಾನದ ಪ್ರಾಂತ್ಯವಾಗಿದೆ. ಪಾಕಿಸ್ತಾನದಲ್ಲಿರುವ ಗರಿಷ್ಠ ಹಿಂದೂಗಳು ನೆಲೆಸಿರುವುದು ಸಿಂಧ್ ಪ್ರಾಂತ್ಯದಲ್ಲಿ. ಸಿಂಧ್ ಪ್ರಾಂತ್ಯದಲ್ಲಿ ಈಗಲೂ ಅತೀ ಪ್ರಾಚೀನ ಹಿಂದೂ ದೇಗುಲಗಳಿವೆ. ಹಲವು ದೇಗುಲಗಳ ಕಲ್ಲುಗಳು ಮಾತ್ರ ಕಾಣಸಿಗುತ್ತದೆ. ಇನ್ನು ಕೆಲವು ದೇಗುಲಗಳಲ್ಲಿ ವಿಗ್ರಹಗಳೇ ಇಲ್ಲ. ಪಾಕಿಸ್ತಾನದಲ್ಲಿ 70 ರಿಂದ 80 ಲಕ್ಷ ಹಿಂದೂಗಳಿದ್ದಾರೆ.