Asianet Suvarna News Asianet Suvarna News

ನ್ಯೂಜಿಲೆಂಡ್ ಯುವ ಸಂಸದೆ ರೌದ್ರವತಾರಕ್ಕೆ ವಿಶ್ವದೆಲ್ಲೆಡೆ ಮೆಚ್ಚುಗೆ, ಸಂಸತ್ತಿನ ಭಾಷಣ ವೈರಲ್!

ನ್ಯೂಜಿಲೆಂಡ್ ಸಂಸತ್ತಿನ 150 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಸಂಸದೆ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ಮಾಡಿದ ಭಾಷಣ ಹಾಗೂ ಆವೇಷಭರಿತ ಸಮುದಾಯದ ಹಾಡು ಭಾರಿ ವೈರಲ್ ಆಗಿದೆ. ಈಕೆಯ ಉತ್ಸಾಹ, ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಯ ಉಳಿಸುವ ನಿಟ್ಟಿನಲ್ಲಿ ಮಾಡಿದ ಸಂಸದೆಯ ಕಾರ್ಯಕ್ರೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
 

New Zealand youngest MP Hana Rawhiti Maipi Clarke powerful native language speech goes viral ckm
Author
First Published Jan 5, 2024, 3:40 PM IST

ವೆಲ್ಲಿಂಗ್ಟನ್(ಜ.05) ರಾಜಕೀಯ ಕ್ಷೇತ್ರದಲ್ಲಿ ಇತ್ತೀಚೆಗೆ ಯುವ ಸಮೂಹ ತೊಡಗಿಸಿಕೊಳ್ಳುತ್ತಿರುವುದು ಕಾಣಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಬಹುತೇಕ ಕಡೆ ಯುವ ಸಮೂಹ ರಾಜಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೀಗ ನ್ಯೂಜಿಲೆಂಡ್ ಸಂಸತ್ತಿನ ಅತೀ ಕಿರಿಯ ಸಂಸದೆ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ಭಾರಿ ಜನಪ್ರಿಯವಾಗಿದ್ದಾರೆ. ಸಂಸತ್ತಿನಲ್ಲಿ ಮಾಡಿದ ಭಾಷಣ ಹಾಗೂ ಸ್ಥಳೀಯ ಭಾಷೆಯಲ್ಲಿ ಹಾಡಿದ ಅವೇಷಭರಿತ ಹಾಡಿನಿಂದ ಹನ್ನಾ ಇದೀಗ ವಿಶ್ವಾದ್ಯಂತ ಗುರುತಿಸಲ್ಪಟ್ಟಿದ್ದಾರೆ. 

ಸಂಸದೆ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ತಮ್ಮ ತಮರಿಕಿ ಮಾವೋರಿ ಭಾಷೆಯಲ್ಲಿ ಮಾಡಿದ ಭಾಷಣ ಹಾಗೂ ತಮ್ಮ ಸಂಸ್ಕೃತಿ ಬಿಂಬಿಸುವ ಹಾಡನ್ನು ಸಂಸತ್ತಿನಲ್ಲಿ ಹಾಡಿದ್ದಾರೆ. ಇದೇ ವೇಳೆ ಸಂಸತ್ತಿನಲ್ಲಿ ಈಕೆಯ ಭಾಷಣ ಆಲಿಸಲು ಆಗಮಿಸಿದ ಪೋಷಕರು ಹಾಗೂ ಇದೇ ಸಮುದಾಯದ ಹಲವರು ಸಂಸದೆ ಹನ್ನಾ ಜೊತೆ ಧನಿಗೂಡಿಸಿದ್ದಾರೆ. ಸಂಸದೆ ಜೊತೆ ತಮ್ಮ ಸಂಸ್ಕೃತಿ ಹಾಡನ್ನು ಹಾಡುವ ಮೂಲಕ ತಮ್ಮ ಭಾಷೆ ಹಾಗೂ ಸಂಸ್ಕೃತಿ ಉಳಿವಿನ ಕುರಿತು ಜಾಗೃತಿ ಮೂಡಿಸಿದ್ದಾರೆ.

 

ತೌರಂಗಾಗೆ ಆಗಮಿಸಿದ ಟೀಂ ಇಂಡಿಯಾಗೆ ನ್ಯೂಜಿಲೆಂಡ್‌ನ ಸಾಂಪ್ರದಾಯಿಕ ಪೌಹಿರಿ ಸ್ವಾಗತ!

ನ್ಯೂಜಿಲೆಂಡ್ ಸಂಸತ್ತಿನ 170 ವರ್ಷದ ಇತಿಹಾಸದಲ್ಲಿ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ಅತ್ಯಂತ ಕಿರಿಯ ಸಂಸದೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 21 ವರ್ಷದ ಹನ್ನಾ, 2023ರ ಅಕ್ಟೋಬರ್ ತಿಂಗಳಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಹೌರಾಕಿ-ವೈಕಾಟೊ ಕ್ಷೇತ್ರದಿಂದ ಹನ್ನಾ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. 2008ರಿಂದ ಇಲ್ಲೀವರೆಗೆ ಈ ಕ್ಷೇತ್ರದಿಂದ ಹಿರಿಯ ನಾಯಕರು, ಜನಪ್ರಿಯ ನಾಯಕರು ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದರು. ಇದೇ ಮೊದಲ ಬಾರಿಗೆ ಅತೀ ಕಿರಿಯ ನಾಯಕಿ ಹನ್ನಾ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದಾರೆ.

 

 

ತಮರಿಕಿ ಮಾವೋರಿ ಭಾಷೆಗೆ ಯಾವುದೇ ಮಾನ್ಯತೆ ಸಿಕ್ಕಿಲ್ಲ. ಈ ಕುರಿತು ಹನ್ನಾ ಬೆಳಕು ಚೆಲ್ಲಿದ್ದಾರೆ. ಆಕ್ಲೆಂಡ್ ಹಾಗೂ ಹ್ಯಾಮಿಲ್ಟನ್ ನಗರದ ನಡುವೆ ಬರುವ ಸಣ್ಣ ಪಟ್ಟಣದಲ್ಲಿ ಮಾವೋರಿ ಸಮುದಾಯವಿದೆ. ತಮ್ಮ ಗ್ರಾಮದಲ್ಲಿ ಮಕ್ಕಳಿಗೆ ಸಮುದಾಯದ ಭಾಷೆ, ಸಂಸ್ಕೃತಿ ಕುರಿತು ಶಿಕ್ಷಣ ನೀಡುತ್ತಿದ್ದ ಹನ್ನಾ ಇದೀಗ ಸಂಸದೆಯಾಗಿ ತಮ್ಮ ಸಮುದಾಯ ಹಾಗೂ ಸ್ಥಳೀಯ ಭಾಷೆಯಲ್ಲಿ ಭಾಷಣ ಹಾಗೂ ಸಂಸ್ಕೃತಿ ಬಿಂಬಿಸುವ ಹಾಡು ಹೇಳಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಎಲ್ಲರಿಗಿಂತ ಮೊದಲು ಹೊಸ ವರ್ಷ ಬರಮಾಡಿಕೊಂಡ ಕಿರಿಬಾಸ್-ನ್ಯೂಜಿಲೆಂಡ್!

ನ್ಯೂಜಿಲೆಂಡ್‌ನಲ್ಲಿನ ಹಲವು ಸ್ಥಳೀಯ ಸಮುದಾಯಗಳ ಪ್ರಮುಖ ವಿಶೇಷತೆಗಳಲ್ಲಿ ಇದೇ ರೀತಿಯ ಆವೇಷ ಭರಿತ ಹಾಡು ಸಾಮಾನ್ಯ. ನ್ಯೂಜಿಲೆಂಡ್ ರಾಷ್ಟ್ರೀಯ ಕ್ರೀಡೆ ರಗ್ಬಿಯ ಆರಂಭದಲ್ಲೇ ಸಾಂಪ್ರದಾಯಿಕ ಹಾಕ ನೃತ್ಯ ಸಾಮಾನ್ಯವಾಗಿದೆ. ಹಾಕಾ ಹಾಡು ಹಾಗೂ ನೃತ್ಯದ ರೀತಿಯಲ್ಲೇ ಇರುವ ಮಾವೋರಿ ಸಮುದಾಯದ ಬಿಂಬಿಸುವ ಈ ಹಾಡನ್ನು ಸಂಸತ್ತಿನಲ್ಲಿ ಹಾಡುವ ಮೂಲಕ ಭಾರಿ ವೈರಲ್ ಆಗಿದೆ.

Follow Us:
Download App:
  • android
  • ios