Asianet Suvarna News Asianet Suvarna News

ಎಲ್ಲರಿಗಿಂತ ಮೊದಲು ಹೊಸ ವರ್ಷ ಬರಮಾಡಿಕೊಂಡ ಕಿರಿಬಾಸ್-ನ್ಯೂಜಿಲೆಂಡ್!

ಭಾರತ ಹೊಸ ವರ್ಷ ಬರಮಾಡಿಕೊಳ್ಳಲು ಕಾತರಗೊಂಡಿದೆ. ಆದರೆ ಇತರ ಎಲ್ಲರಿಗಿಂತ ಮೊದಲು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ 2024ರ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದೆ. 

New zealand to Australia Among First Nations welcome New year 2024 ckm
Author
First Published Dec 31, 2023, 6:37 PM IST

ನವದೆಹಲಿ(ಡಿ.31) ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. 2023ಕ್ಕೆ ಗುಡ್‌ಬೈ ಹೇಳಿ, 2024ರ ಹೊಸ ವರ್ಷವನ್ನು ಅದ್ಧೂರಿಯಾಗಿ ಆರಂಭಿಸಲು ಎಲ್ಲರೂ ಸಜ್ಜಾಗಿದ್ದಾರೆ. ಭಾರತ ಇಂದು ಮಧ್ಯರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲಿದೆ. ಭಾರತದ ರೀತಿ ಹಲವು ದೇಶಗಳು ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗಿದೆ. ಆದರೆ ಎಲ್ಲರಿಗಿಂತ ಮೊದಲು ಕಿರಿಬಾಸ್ ಐಲ್ಯಾಂಡ್ ರಾಷ್ಟ್ರ ಮೊದಲು ಹೊಸ ವರ್ಷವನ್ನು ಸ್ವಾಗತಿಸಿದೆ. ಕಿರಿಬಸ್ ಅಥವಾ ಕಿರಿಬಾಟಿ ಐಸ್‌ಲ್ಯಾಂಡ್ ದೇಶ 10:00 (GMT) ಸರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡಿದೆ. 

ಕಿರಿಬಾಸ್ ಪುಟ್ಟ ದೇಶದ ಬಳಿಕ ನ್ಯೂಜಿಲೆಂಡ್ 2024ರ ಹೊಸ ವರ್ಷವನ್ನು ಬರಮಾಡಿಕೊಂಡಿದೆ. ನ್ಯೂಜಿಲೆಂಡ್ 11:00 (GMT)ಸಮಯದಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದೆ. ಆಕ್ಲಲೆಂಡ್ ಸ್ಕೈ ಟವರ್ ಮೇಲೆ ವರ್ಣರಂಜಿತ ಪಟಾಕಿಗಳ ಚಿತ್ತಾರ, ಸಿಡಿಮದ್ದುಗಳ ಪ್ರದರ್ಶನದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. 

ಹೊಸ ವರ್ಷಾಚರಣೆ: ಸುರಕ್ಷತಾ ಕ್ರಮಗಳ ಅನುಸರಿಸುವಂತೆ ಜನತೆಗೆ ಬೆಸ್ಕಾಂ ಮನವಿ

ನ್ಯೂಜಿಲೆಂಡ್‌ನ ಸ್ಕೈ ಟವರ್ ಹಾಗೂ ಸುತ್ತ ಮುತ್ತ ಅದ್ಧೂರಿ ಪಾರ್ಟಿ ಆಯೋಜಿಸಲಾಗಿದೆ. ಜನರು ಕ್ಕಿಕಿರಿದು ಸೇರಿದ್ದಾರೆ. ಹ್ಯಾಪಿ ನ್ಯೂ ಇಯರ್ ಘೋಷಣೆಗಳೊಂದಿಗೆ ಹೊಸ ವರ್ಷವನ್ನು ನ್ಯೂಜಿಲೆಂಡ್ ಜನ ಬರಮಾಡಿಕೊಂಡಿದ್ದಾರೆ. 

ಭಾರತ ಇಂದು ಮಧ್ಯರಾತ್ರಿ 12.00ರ ಹೊತ್ತಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದೆ. ಬೆಂಗಳೂರು, ಮುಂಬೈ ಸೇರಿದಂತೆ ಬಹುತೇಕ ಎಲ್ಲಾ ನಗರದಲ್ಲಿ ಪಾರ್ಟಿ, ಕ್ಲಬ್, ಪಬ್ ಸೇರಿದಂತೆ ಅದ್ಧೂರಿ ಸಂಭ್ರಮಾಚರಣೆ ಶುರುವಾಗಿದೆ. ಇನ್ನು ಪ್ರವಾಸಿ ತಾಣಗಳಾದ ಗೋವಾ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ತಾಣಗಳು ಪ್ರವಾಸಿಗರಿಂದ ಭರ್ತಿಯಾಗಿದೆ. 

ಬೆಂಗಳೂರಿನಲ್ಲಿ ನೂತನ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಂ.ಜಿ ರಸ್ತೆ ಸೇರಿದಂತೆ ರಾಜಧಾನಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಹೊಸ ವರ್ಷಾಚರಣೆಗೆ ಡಿ.31ರ ರಾತ್ರಿ 1 ಗಂಟೆವರೆಗೆ ಕಾಲಾವಕಾಶ ನೀಡಿರುವ ಪೊಲೀಸರು, ರಾತ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಬಿಸಿ ಮುಟ್ಟಿಸಲು ಚೆಕ್ ಪೋಸ್ಟ್‌ಗಳು ಹಾಗೂ ಠಾಣಾ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.

 

ನ್ಯೂ ಇಯರ್ ಪಾರ್ಟಿಗೆ ಹೀಗೆ ತಯಾರಾಗಿ… ಹುಡುಗೀರ ಕಣ್ಣು ನಿಮ್ಮ ಮೇಲೆ ಬೀಳುತ್ತೆ ನೋಡಿ!

ರಾತ್ರಿ 1 ಗಂಟೆ ಬಳಿಕ ಸಂಭ್ರಮಾಚರಣೆ ನಡೆಯುವ ಎಲ್ಲ ಹೋಟೆಲ್, ಪಬ್, ಹೋಟೆಲ್‌ಗಳ ಬಾಗಿಲು ಬಂದ್ ಮಾಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಇನ್ನು ವರ್ಷಾಚರಣೆಗೆ ಹೆಚ್ಚಿನ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್‌ ರಸ್ತೆ, ಕಬ್ಬನ್ ಪಾರ್ಕ್‌, ಟ್ರಿನಿಟಿ ಸರ್ಕಲ್‌, ಫೀನಿಕ್ಸ್‌ ಮಾಲ್‌, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್‌ ಹೋಟೆಲ್‌ಗಳು, ಪಬ್‌ಗಳು ಹಾಗೂ ಕ್ಲಬ್‌ಗಳು ಸೇರಿದಂತೆ ಇತರೆಡೆ ಜನರನ್ನು ನಿಯಂತ್ರಿಸಲು ಬಂದೋಬಸ್ತ್ ಪಿಕೆಟಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದ್ದಾರೆ.
 

Follow Us:
Download App:
  • android
  • ios