ಆಪರೇಷನ್ ಸಿಂದೂರವನ್ನು ಪಾಕ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸೀಂ ಮುನೀರ್‌, ಘಜ್ವಾ-ಎ-ಹಿಂದ್ ಎಂದು ಕರೆದಿದ್ದರು. ಷರಿಯಾ ಕಾನೂನಿನ ಅನ್ವಯ ಇದರ ಅರ್ಥ ಇಸ್ಲಾಮಿಕ್‌ ಕಾನೂನನ್ನು ಜಾರಿಗೊಳಿಸಲು ನಡೆಸುವ ಸಶಸ್ತ್ರ ಹೋರಾಟ ಅಥವಾ ಜಿಹಾದ್ ಎಂದು

ಇಸ್ಲಾಮಾಬಾದ್‌: ಕಳೆದ ಮೇನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರವನ್ನು ಪಾಕ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸೀಂ ಮುನೀರ್‌, ಘಜ್ವಾ-ಎ-ಹಿಂದ್ ಎಂದು ಕರೆದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಸ್ಲಾಮಿಕ್‌ ಕಾನೂನನ್ನು ಜಾರಿಗೊಳಿಸಲು ನಡೆಸುವ ಸಶಸ್ತ್ರ ಹೋರಾಟ

ಷರಿಯಾ ಕಾನೂನಿನ ಅನ್ವಯ ಇದರ ಅರ್ಥ ಇಸ್ಲಾಮಿಕ್‌ ಕಾನೂನನ್ನು ಜಾರಿಗೊಳಿಸಲು ನಡೆಸುವ ಸಶಸ್ತ್ರ ಹೋರಾಟ ಅಥವಾ ಜಿಹಾದ್ ಎಂದು ಜೈಷ್‌ ಎ ಮೊಹಮ್ಮದ್‌ ಉಗ್ರಸಂಘಟನೆಯ ಕಮಾಂಡರ್‌ ಒಬ್ಬ ಹೇಳಿಕೊಂಡಿದ್ದಾನೆ.

ಯುದ್ಧ ಪ್ರಾರಂಭವಾದ ತಕ್ಷಣ ಶಸ್ತ್ರಾಸ್ತ್ರಗಳು ಹೊರಬಂದವು,

ರಾವಲ್ಕೋಟ್‌ನಲ್ಲಿ ಸಂಘಟನೆಯ ಕಮಾಂಡರ್‌ಗಳನ್ನುದ್ದೇಶಿಸಿ ಮಾತನಾಡಿದ ಉಗ್ರ ಇಲ್ಯಾಸ್‌ ಕಾಶ್ಮೀರಿ, ‘ಯುದ್ಧ ಪ್ರಾರಂಭವಾದ ತಕ್ಷಣ ಶಸ್ತ್ರಾಸ್ತ್ರಗಳು ಹೊರಬಂದವು, ಫೈಟರ್ ಜೆಟ್‌ಗಳು ಡಿಕ್ಕಿ ಹೊಡೆದವು, ಟ್ಯಾಂಕ್‌ಗಳು ಮುಖಾಮುಖಿಯಾದವು. ಕಮಾಂಡರ್ (ಮುನೀರ್‌) ಇದು ಘಜ್ವತ್-ಉಲ್-ಹಿಂದ್, ಇದು ಬನ್ಯನ್ ಅಲ್ ಮರ್ಸೂಸ್ ಎಂದು ಘೋಷಿಸಿದರು. ನಮ್ಮ ಹೆಸರು, ಗುರುತು, ಧ್ಯೇಯವಾಕ್ಯ ಜಿಹಾದ್. ಸರ್ಕಾರ ನಮ್ಮೊಂದಿಗಿದ್ದಾಗಲೂ ಇಲ್ಲದಿದ್ದಾಗಲೂ ನಮ್ಮ ಗುರಿ ಜಿಹಾದ್. ನಾವು ಜಿಹಾದ್ ನಡೆಸಿ ಕಾಶ್ಮೀರವನ್ನು ಮುಕ್ತಗೊಳಿಸುತ್ತೇವೆ’ ಎಂದಿದ್ದಾನೆ.