ಬ್ರಿಟನ್‌ನಲ್ಲಿ ಒಂದೇ ದಿನ ದಾಖಲೆಯ ಕೇಸ್‌!   ತೀವ್ರತೆಗೆ ಬ್ರಿಟನ್‌ ತತ್ತರ  2ನೇ ಅಲೆಯ ಗರಿಷ್ಠಕ್ಕಿಂತ ದುಪ್ಪಟ್ಟು ಕೇಸ್‌ಗಳ ಪತ್ತೆ   ಒಮಿಕ್ರೋನ್‌ ವೈರಸ್‌ ತೀವ್ರತೆಗೆ ಬ್ರಿಟನ್‌ ತತ್ತರ  

ಲಂಡನ್‌ (ಡಿ.23) : ಅತ್ಯಂತ ವೇಗವಾಗಿ ಹಬ್ಬುವ ರೂಪಾಂತರಿ ಪ್ರಭೇದ ಒಮಿಕ್ರೋನ್‌ನಿಂದ (Omicron) ತತ್ತರಿಸಿರುವ ಬ್ರಿಟನ್‌ನಲ್ಲಿ (Britain) ಬುಧವಾರ ಕೋವಿಡ್‌ (Covid) ಸೋಂಕಿನ ಸಂಖ್ಯೆ 1 ಲಕ್ಷ ದಾಟಿದೆ. ಕಳೆದ ಕೆಲ ದಿನಗಳಿಂದ 90 ಸಾವಿರಕ್ಕಿಂತ ಹೆಚ್ಚು ದೈನಂದಿನ ಕೋವಿಡ್‌ ಕೇಸ್‌ಗಳು ಪತ್ತೆಯಾಗುತ್ತಿರುವ ದೇಶದಲ್ಲಿ ಬುಧವಾರ ಬರೋಬ್ಬರಿ 1,06,122 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ ಸುಮಾರು 140 ಜನರು ಮೃತರಾಗಿದ್ದಾರೆ.

ಇದೇ ವರ್ಷದ ಜೂನ್‌ನಲ್ಲಿ 2ನೇ ಅಲೆಯ ವೇಳೆ ಗರಿಷ್ಠ 64 ಸಾವಿರ ಕೇಸ್‌ಗಳು (Case) ಪತ್ತೆಯಾಗಿದ್ದವು. ಹೀಗಾಗಿ ಇದು 2ನೇ ಅಲೆಯ ವೇಳೆ ಪತ್ತೆಯಾಗಿದ್ದ ಗರಿಷ್ಠ ಕೊರೋನಾ (Corona) ಕೇಸ್‌ಗಳಿಗಿಂತಲೂ ದುಪ್ಪಟ್ಟು ಕೇಸ್‌ ಆಗಿದೆ. ಇದರೊಂದಿಗೆ ಕಳೆದೊಂದು ವಾರದಲ್ಲಿ 6.50 ಲಕ್ಷಕ್ಕಿಂತ ಹೆಚ್ಚು ಕೇಸ್‌ಗಳು ದೃಢಪಟ್ಟಂತಾಗಿದೆ.

ಒಮಿಕ್ರಾನ್ ಸ್ಫೋಟ : ಕೊರೋನಾದ(Coronavirus) ಹೊಸ ರೂಪಾಂತರಿ ಒಮಿಕ್ರೋನ್‌(Omicron) ಬ್ರಿಟನ್‌ನಾದ್ಯಂತ(Britain) ಶರವೇಗದಲ್ಲಿ ಹಬ್ಬುತ್ತಿದೆ. ಶನಿವಾರ ದಾಖಲಾದ ಒಟ್ಟು 90 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಒಮಿಕ್ರೋನ್‌ ಪಾಲು 10 ಸಾವಿರ ಇದ್ದು, ಒಟ್ಟಾರೆ ಒಮಿಕ್ರೋನ್‌ ಸೋಂಕಿತರ ಸಂಖ್ಯೆ 25 ಸಾವಿರಕ್ಕೇರಿದೆ. ಈ ನಡುವೆ, ಮತ್ತೆ 6 ಜನರು ಒಮಿಕ್ರೋನ್‌ಗೆ ಬಲಿಯಾಗಿದ್ದಾರೆ(Death). ಇದರೊಂದಿಗೆ ರೂಪಾಂತರಿಗೆ ಬಲಿಯಾದವರ ಸಂಖ್ಯೆ 7ಕ್ಕೇರಿದೆ. ಒಮಿಕ್ರೋನ್‌ ಸೋಂಕಿನಿಂದ ವಿಶ್ವದಲ್ಲೇ ಮೊದಲ ಸಾವು ಬ್ರಿಟನ್‌ನಲ್ಲಿ ಇತ್ತೀಚೆಗೆ ಸಂಭವಿಸಿತ್ತು.

ಶುಕ್ರವಾರ 3 ಸಾವಿರ ಒಮಿಕ್ರೋನ್‌ ಪ್ರಕರಣ ದಾಖಲಾಗಿದ್ದವು. ಶನಿವಾರ 3 ಪಟ್ಟು ಏರಿದ್ದು, 10 ಸಾವಿರ ಒಮಿಕ್ರೋನ್‌ ಕೇಸು ದೃಢಪಟ್ಟಿವೆ. ಒಮಿಕ್ರೋನ್‌ ಸೇರಿ ಬ್ರಿಟನ್‌ನಲ್ಲಿ ನಿತ್ಯ 90 ಸಾವಿರ ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ.

Omicron Variant: ವಿದೇಶದಿಂದ ಬರೋರಿಗೆ ಸಾಂಸ್ಥಿಕ ಕ್ವಾರಂಟೈನ್‌ ಸದ್ಯಕ್ಕಿಲ್ಲ

ಇದು ಆರಂಭ ಮಾತ್ರ- ಮೇಯರ್‌:

ಅಲ್ಲದೆ, ಈಗಿನ ಒಮಿಕ್ರೋನ್‌ ಕೇಸುಗಳು ಕೇವಲ ಆರಂಭ ಮಾತ್ರ. ಸೋಂಕು ಇನ್ನೂ ತಾರಕಕ್ಕೆ ಏರಬಹುದು ಎಂದು ಲಂಡನ್‌ ಮೇಯರ್‌ ಸಾದಿಕ್‌ ಖಾನ್‌ ಹೇಳಿದ್ದಾರೆ.

ಸಹಸ್ರಾರು ಜನರಿಗೆ ಸೋಂಕು:

ಒಮಿಕ್ರೋನ್‌ ಸೋಂಕು ಪ್ರತಿನಿತ್ಯ ನೂರಾರು ಸಹಸ್ರ ಜನರಿಗೆ ಹಬ್ಬುತ್ತಿರಬಹುದು. ನಮಗೆ ಕಡಿಮೆ ಅಂಕಿ-ಅಂಶಗಳು ಮಾತ್ರ ಲಭ್ಯವಾಗುತ್ತಿವೆ ಎಂದು ಬ್ರಿಟನ್‌ ಸರ್ಕಾರದ(Government of Britain) ವೈಜ್ಞಾನಿಕ ಸಲಹಾ ತಂಡ ಹೇಳಿದೆ. ಕೋವಿಡ್‌ ನಿಯಮಗಳನ್ನು(Covid Guideline) ಮತ್ತಷ್ಟು ಬಿಗಿಗೊಳಿಸದಿದ್ದರೆ, ಪ್ರತಿನಿತ್ಯ ಇಂಗ್ಲೆಂಡ್‌ನಲ್ಲಿ(England) 3 ಸಾವಿರ ಮಂದಿ ಆಸ್ಪತ್ರೆಗೆ ಸೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಬ್ರಿಟನ್‌ನಲ್ಲಿ ಜನವರಿಯಲ್ಲಿ ಲಸಿಕಾ ಅಭಿಯಾನ(Vaccine Drive) ಆರಂಭವಾಗಿದ್ದು, ಅದಕ್ಕೂ ಮುಂಚೆ ನಿತ್ಯ 4 ಸಾವಿರ ಮಂದಿ ಆಸ್ಪತ್ರೆ ಸೇರುತ್ತಿದ್ದರು. ಇದೀಗ ಲಸಿಕಾಪೂರ್ವ ಸ್ಥಿತಿಯೇ ಮರುಕಳಿಸುವ ಸಾಧ್ಯತೆ ಇದೆ ಎಂಬುದು ತಜ್ಞರ ಅಂಬೋಣ.

ಲಾಕ್‌ಡೌನ್, ಬ್ರಿಟನ್‌ನಲ್ಲಿ ಕಠಿಣ ನಿಮಯ ಜಾರಿ ಸಾಧ್ಯತೆ!

ಮಹಾಮಾರಿ ಕೊರೋನಾ(Corona) ವೈರಸ್ಸಿನ ರೂಪಾಂತರಿ ಒಮಿಕ್ರೋನ್‌ ವೇಗವಾಗಿ ಹಬ್ಬುತ್ತಿದ್ದು ಇದರ ನಿಯಂತ್ರಣಕ್ಕೆ ಬ್ರಿಟನ್‌ ಸರ್ಕಾರ ಸಜ್ಜಾಗಿದೆ. ದೇಶಾದ್ಯಂತ 2 ವಾರಗಳ ಲಾಕ್‌ಡೌನ್‌ ಮಾಡಲು ನಿರ್ಧರಿಸಿದೆ. ಕ್ರಿಸ್‌ಮಸ್‌(christmas) ಹಬ್ಬದ ಬಳಿಕ ಲಾಕ್‌ಡೌನ್‌(Lockdown) ಜಾರಿಯಾಗುವ ಸಾಧ್ಯತೆ ಇದೆ. ಬ್ರಿಟನ್‌ನಲ್ಲಿ ಶುಕ್ರವಾರ ಒಂದೇ ದಿನ 93 ಸಾವಿರಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.

ಯೂರೋಪ್‌ನಲ್ಲೂ ಕಠಿಣ ನಿರ್ಬಂಧ

ಒಮಿಕ್ರೋನ್‌ ತಡೆಗೆ ಯೂರೋಪ್‌ ಕೂಡ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಫ್ರಾನ್ಸ್‌ನಲ್ಲಿ ಹೊಸ ವರ್ಷಾಚರಣೆಯ ಪಟಾಕಿ ಸಿಡಿತವನ್ನು ರದ್ದುಗೊಳಿಸಲಾಗಿದೆ. ಇನ್ನು ಡೆನ್ಮಾರ್ಕ್ನಲ್ಲಿ ಥಿಯೇಟರ್‌ಗಳು, ಸಂಗೀತ ಕಚೇರಿಗಳು, ಮನೋರಂಜನೆ ಉದ್ಯಾನವನಗಳು ಮತ್ತು ಮ್ಯೂಸಿಯಂಗಳನ್ನು ಬಂದ್‌ ಮಾಡಲಾಗಿದೆ. ಐರ್ಲೆಂಡ್‌ನಲ್ಲಿ ಪಬ್‌ಗಳು, ಬಾರ್‌ಗಳಲ್ಲಿ ರಾತ್ರಿ 8 ಗಂಟೆ ಬಳಿಕ ಕರ್ಫ್ಯೂ ಹೇರಲಾಗಿದೆ. 

Omicron Threat: ಬೆಂಗ್ಳೂರಲ್ಲಿ ಮತ್ತೆ ಕೊರೋನಾ ಸೋಂಕು ಏರಿಕೆ..!

'ಒಮಿಕ್ರೋನ್‌ ಸೋಂಕಿತ ದೇಶದಿಂದ ಆಗಮಿಸುವವರಿಗೆ ಮುದ್ರೆ'

ಒಮಿಕ್ರೋನ್‌ ಪ್ರಕರಣಗಳಿರುವ ದೇಶಗಳಿಂದ ರಾಜ್ಯದ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಮೇಲೆ ಕಟ್ಟುನಿಟ್ಟಾಗಿ ನಿಗಾ ವಹಿಸಿ ಮುದ್ರೆ ಹಾಕುವ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌( Mullai Muhilan) ಸೂಚಿಸಿದ್ದರು.

ಜಿಲ್ಲೆಗೆ ಒಮಿಕ್ರೋನ್‌ ಪ್ರಕರಣಗಳಿರುವ ದೇಶಗಳಿಂದ ಆಗಮಿಸುವವರ ಬಗ್ಗೆ ಹೆಚ್ಚಿನ ನಿಗಾವಹಿಸಿ ಹಾಗೂ ಪ್ರತಿಯೊಬ್ಬರು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಅಂತವರು ವಾಸಿಸುವ ಮನೆಗಳಿಗೆ ಈ ಹಿಂದಿನಂತೆ ಗುರುತಿಗಾಗಿ ಸ್ಟಿಕರ್‌ಗಳನ್ನು ಅಂಟಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಿ, ಕೋವಿಡ್‌ ವಾರ್‌ ರೂಮ್‌ನಿಂದ(Covid War Room) ಪ್ರತಿದಿನ ಸಂಬಂಧಿಸಿದವರನ್ನು ಸಂಪರ್ಕಿಸಿ, ಪಾಸಿಟಿವ್‌ ರೋಗಿ ಎಂದು ತಿಳಿದು ಬಂದಲ್ಲಿ ದಾಖಲಿಸಿ ಮತ್ತು ಕೋವಿಡ್‌ ರೂಮ್‌ನಿಂದ ಸಂಬಂಧಿಸಿದ ತಾಲೂಕು ಆರೋಗ್ಯಾಧಿಕಾರಿ, ತಹಸೀಲ್ದಾರ್‌ರೊಂದಿಗೆ ಜಿಲ್ಲಾಧಿಕಾರಿಗೂ ಪ್ರತಿದಿನ ಮಾಹಿತಿ ನೀಡುವ ವ್ಯವಸ್ಥೆ ಮಾಡಿ ಎಂದರು.