Asianet Suvarna News Asianet Suvarna News

Covid Vaccination : 2 ಡೋಸ್‌ ಸಾಕು, ಬೂಸ್ಟರ್‌ ಡೋಸ್‌ ಬೇಕಿಲ್ಲ

  • 2 ಡೋಸ್‌ ಸಾಕು, ಬೂಸ್ಟರ್‌ ಡೋಸ್‌ ಬೇಕಿಲ್ಲ 
  • ಒಂದರ ಮೇಲೊಂದು ಪಡೆಯಲು ಲಸಿಕೆ ಆ್ಯಂಟಿಬಯೋಟಿಕ್ಸ್‌ ಅಲ್ಲ
  •  ಲಸಿಕೆ ಪಡೆದ ಬಳಿಕ ದೇಹವೇ ಎಚ್ಚೆತ್ತು ರೋಗದ ವಿರುದ್ಧ ಹೋರಾಡಲಿದೆ: ಮುಳಿಯಿಲ್‌
     
Covid Vaccination 2 dose is enough no booster dose is required snr
Author
Bengaluru, First Published Dec 23, 2021, 7:48 AM IST

ನವದೆಹಲಿ (ಡಿ.23):  ಕೋವಿಡ್‌ನಿಂದ (Covid)  ರಕ್ಷಣೆ ಪಡೆಯಲು ದೇಹಕ್ಕೆ ಲಸಿಕೆಯ 2 ಡೋಸ್‌ಗಳು ಸಾಕು. ಬೂಸ್ಟರ್‌ ಡೋಸ್‌ನ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಸರ್ಕಾರದ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹೆ ಸಮಿತಿ ಸದಸ್ಯ ಡಾ. ಜಯಪ್ರಕಾಶ್‌ ಮುಳಿಯಿಲ್‌ ಪ್ರತಿಪಾದಿಸಿದ್ದಾರೆ.

‘ದೇಶದಲ್ಲಿ ಸಣ್ಣಗೆ ಹೆಚ್ಚುತ್ತಿರುವ ರೂಪಾಂತರಿ ಒಮಿಕ್ರೋನ್‌ನಿಂದ (Omicron) ರಕ್ಷಣೆಗಾಗಿ ಬೂಸ್ಟರ್‌ ಡೋಸ್‌ ನೀಡಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ, ಕೋವಿಡ್‌ (Covid) ವಿರುದ್ಧದ ಲಸಿಕೆಗಳನ್ನು ಒಂದರ ಮೇಲೊಂದರಂತೆ ಪಡೆಯಲು ಅವು ಆ್ಯಂಟಿಬಯೋಟಿಕ್ಸ್‌ಗಳಲ್ಲ. ಹೀಗಾಗಿ ಬೂಸ್ಟರ್‌ ಡೋಸ್‌ ಅಗತ್ಯವೇ ಇಲ್ಲ ಎಂಬುದು ನನ್ನ ಅಭಿಪ್ರಾಯ. ಹಂದಿ ಜ್ವರಕ್ಕೆ ದೇಹದಲ್ಲೇ ಪ್ರತೀಕಾಯ ಶಕ್ತಿ ಬಂದಿದೆ’ ಎಂದು ಅವರು ಹೇಳಿದ್ದಾರೆ.  ದೇಹಕ್ಕೆ ತಗುಲುವ ಹೊಸ ರೋಗಗಳ ಪತ್ತೆಯೇ ಲಸಿಕಾ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಪ್ರಕ್ರಿಯೆ ಬಳಿಕ ದೇಹದ ಪ್ರತೀಕಾಯ ವ್ಯವಸ್ಥೆಯು ತನ್ನಿಂದ ತಾನೇ ವೈರಸ್‌ ವಿರುದ್ಧ ಹೋರಾಡುತ್ತದೆ ಎಂದು ತಿಳಿಸಿದರು.

ಪಾಸಿಟಿವಿಟಿ ದರ  ಶೇ. 10 ದಾಟಿದರೆ ನಿರ್ಬಂಧ ಜಾರಿ :  ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ ಕೋವಿಡ್‌ ರೂಪಾಂತರಿ ತಳಿ ಒಮಿಕ್ರೋನ್‌ (Omicron Variant), ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ಸಾಂಕ್ರಾಮಿಕ. ಈ ವೈರಸ್‌ ನಿಯಂತ್ರಿಸಲು ಸಜ್ಜಾಗಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕರೆ ನೀಡಿದೆ. 

ಈ ಸಂಬಂಧ ರಾಜ್ಯಗಳಿಗೆ ಪತ್ರ ರವಾನಿಸಿರುವ ಕೇಂದ್ರ ಆರೋಗ್ಯ ಕಾರ‍್ಯದರ್ಶಿ ರಾಜೇಶ್‌ ಭೂಷಣ್‌, ‘ಸದ್ಯ ದೇಶದಲ್ಲಿ ಕೋವಿಡ್‌ ನಿಯಂತ್ರಣದಲ್ಲಿದೆ. ಆದಾಗ್ಯೂಸೋಂಕು ಮತ್ತೊಮ್ಮೆ ಸ್ಫೋಟಗೊಳ್ಳುವುದನ್ನು ನಿಯಂತ್ರಿಸಲು ರಾತ್ರಿ ಕರ್ಫ್ಯೂ, ಸಭೆ ಸಮಾರಂಭ, ವಿವಾಹ ಕಾರ‍್ಯಕ್ರಮ ಮತ್ತು ಅಂತ್ಯ ಸಂಸ್ಕಾರಗಳಲ್ಲಿ ಭಾಗಿಯಾಗಲು ನಿರ್ಬಂಧ ವಿಧಿಸಬೇಕು. ಜೊತೆಗೆ ಕೋವಿಡ್‌ ಪರೀಕ್ಷೆ ಹೆಚ್ಚಳ, ಸೋಂಕಿತರ ಆಕ್ರಮಣಕಾರಿ ಪತ್ತೆ ಸೇರಿದಂತೆ ವಿವಿಧ ರೀತಿಯಲ್ಲಿ ಕಠಿಣ ನಿಬಂಧನೆ ಹೇರುವ ಅಗತ್ಯವಿದೆ’ ಸಲಹೆ ನೀಡಿದ್ದಾರೆ.

ಇದೇ ವೇಳೆ ಕಳೆದ ಒಂದು ವಾರದಿಂದ ಶೇ.10 ಅಥವಾ ಅದಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ದಾಖಲಾಗುತ್ತಿದ್ದರೆ ಅಥವಾ ಶೇ.40ರಷ್ಟುಜನರು ಆಮ್ಲಜನಕ ಬೆಂಬಲದೊಂದಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅಂತಹ ಪ್ರದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲೇಬೇಕು. 

ಜಿಲ್ಲಾ ಮಟ್ಟದಲ್ಲಿ ವೈರಸ್‌ ನಿಗ್ರಹಕ್ಕೆ ಕಠಿಣ ನಿರ್ಧಾರ!

ವಾರ್‌ ರೂಮ್‌ಗಳನ್ನು ಸಕ್ರಿಯಗೊಳಿಸಿ, ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್‌, ಔಷಧ ಸಾಮರ್ಥ್ಯವನ್ನು ಹೆಚ್ಚಿಸಬೇಕು. ವೈದ್ಯಕೀಯ ಮೂಲ ಸೌಕರ‍್ಯ ಹೆಚ್ಚಿಸಲು ತುರ್ತು ಅನುದಾನವನ್ನೂ ಬಳಕೆ ಮಾಡಿಕೊಳ್ಳಬಹುದು. ಇಂಥ ತಂತ್ರವನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಸ್ಥಳೀಯವಾಗಿ ಸೋಂಕು ಸ್ಫೋಟವಾಗುವುದನ್ನು ನಿಯಂತ್ರಿಸಬಹುದು ಎಂದಿದ್ದಾರೆ.

Covid Vaccine: 'ಕೋವಿಡ್‌ ಇದ್ರೂ ಮಕ್ಕಳಿಗೆ ಸದ್ಯ ಲಸಿಕೆ ಬೇಡ'

ಒಮಿಕ್ರೋನ್‌ ಹೊರತಾಗಿಯೂ ಡೆಲ್ಟಾತಳಿ ಇನ್ನೂ ದೇಶದ ಹಲವು ಭಾಗಗಳಲ್ಲಿ ಸಕ್ರಿಯವಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯವಾಗಿ ಮತ್ತು ಜಿಲ್ಲಾ ಮಟ್ಟದಲ್ಲಿ ವೈರಸ್‌ ನಿಗ್ರಹಕ್ಕೆ ಇನ್ನೂ ಹೆಚ್ಚಿನ ಕಠಿಣ, ದೂರದೃಷ್ಟಿಯುಳ್ಳ, ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯ, ಕೇಂದ್ರಾಡಳಿತ ಜಿಲ್ಲಾ ಮಟ್ಟದಲ್ಲಿ ವೈರಸ್‌ ನಿಗ್ರಹಕ್ಕೆ ಕೈಗೊಳ್ಳುವ ನಿರ್ಧಾರಗಳು ಪ್ರಮಾಣಿಕವಾಗಿರಲಿ ಮತ್ತು ತ್ವರಿತವಾಗಿರಲಿ ಎಂದು ಕೇಂದ್ರಸರ್ಕಾರ ತಿಳಿಸಿದೆ.

ಮಾರ್ಗಸೂಚಿಯಲ್ಲೇನಿದೆ?

-ಪಾಸಿಟಿವಿಟಿ ದರ ಶೇ.10 ದಾಟದಂತೆ ನೋಡಿಕೊಳ್ಳಿ

- ಶೇ.10 ಮೀರಿದರೆ ನೈಟ್‌ ಕಫä್ರ್ಯ, ಸ್ಥಳೀಯ ನಿರ್ಬಂಧ ಕ್ರಮ ಕೈಗೊಳ್ಳಿ

- ವಾರ್‌ ರೂಂಗಳನ್ನು ಪುನಃ ಸಕ್ರಿಯಗೊಳಿಸಿ

- ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್‌, ಔಷಧ ಸಾಮರ್ಥ್ಯ ಹೆಚ್ಚಿಸಿ

- ಸಭೆಗಳು, ವಿವಾಹ ಮತ್ತು ಅಂತ್ಯ ಸಂಸ್ಕಾರಗಳಲ್ಲಿ ಭಾಗಿಯಾಗಲು ಜನರ ಮಿತಿ ಹೇರಿ

ದೇಶದಲ್ಲಿ 200 ದಾಟಿದ ಒಮಿಕ್ರೋನ್‌

ದೇಶದಲ್ಲಿ ಒಂದೇ ದಿನ 48 ಒಮಿಕ್ರೋನ್‌ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್‌ ರೂಪಾಂತರಿ ಒಮಿಕ್ರೋನ್‌ ಪ್ರಕರಣಗಳು 200ರ ಗಡಿ ದಾಟಿದ್ದು, 220ಕ್ಕೆ ಏರಿದೆ. ಆಶಾದಾಯಕ ವಿಚಾರವೆಂದರೆ ಒಮಿಕ್ರೋನ್‌ ಸೋಂಕಿತರಲ್ಲಿ ಈವರೆಗೆ 77 ಮಂದಿ ಗುಣಮುಖರಾಗಿದ್ದಾರೆ.

New Year Guidelines ಓಮಿಕ್ರಾನ್ ಆತಂಕದಿಂದ ಸಂಭ್ರಮದ ಹೊಸ ವರ್ಷಾಚರಣೆಗೆ ಬ್ರೇಕ್, ಚರ್ಚ್‌ನಲ್ಲಿ ಕ್ರಿಸ್‌ಮಸ್‌!

ಸೋಂಕಿನಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು ಮಂಗಳವಾರ 11 ಸೇರಿ 65 ಪ್ರಕರಣ ಈವರೆಗೆ ವರದಿಯಾಗಿವೆ. ಇದೆ ಮೊದಲ ಬಾರಿಗೆ ಜಮ್ಮುವಿನಲ್ಲಿ 3 ಹಾಗೂ ಒಡಿಶಾದಲ್ಲಿ 2 ಕೇಸು ದೃಢಪಟ್ಟಿದೆ. ತೆಲಂಗಾಣದಲ್ಲಿ 4 ಕೇಸು ಪತ್ತೆಯಾಗಿವೆ. ಇನ್ನೂ ದಿಲ್ಲಿಯಲ್ಲಿ 54 ಪ್ರಕರಣಗಳು ದಾಖಲಾಗಿವೆ. ತೆಲಂಗಾಣದಲ್ಲಿ  24, ಕರ್ನಾಟಕದಲ್ಲಿ 19, ರಾಜಸ್ಥಾನದಲ್ಲಿ 18, ಕೇರಳದಲ್ಲಿ 15, ಗುಜರಾತ್‌ನಲ್ಲಿ 14, ಉತ್ತರ ಪ್ರದೇಶ  2, ಆಂಧ್ರ ಪ್ರದೇಶ, ಚಂಡೀಗಢ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 19 ಸೋಂಕಿತರ ಪೈಕಿ 15 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.

* 5326 ಕೇಸು, 453 ಸಾವು: ದೈನಂದಿನ ಕೇಸು 19 ತಿಂಗಳ ಕನಿಷ್ಠ

ಒಂದೆಡೆ ಒಮಿಕ್ರೋನ್‌ ರೂಪಾಂತರಿ ಸೋಂಕು ಆತಂಕ ಸೃಷ್ಟಿಸುತ್ತಿದ್ದರೂ ದೇಶದಲ್ಲಿ ದೈನಂದಿನ ಕೇಸುಗಳು ಮತ್ತೊಮ್ಮೆ 5 ಸಾವಿರದ ಆಸುಪಾಸಿಗೆ ಇಳಿದಿವೆ. ಇದು 581 ದಿನಗಳ (19 ತಿಂಗಳ) ಕನಿಷ್ಠವಾಗಿದೆ. ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 5,326 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 453 ಸೋಂಕಿತರು ಸಾವಿಗೀಡಾಗಿದ್ದಾರೆ.

Winter Season: ಮೈ ಕೊರೆಯುವ ಚಳಿಗೆ ಥಂಡಾ ಹೊಡೆದ ಧಾರವಾಡ ಮಂದಿ: ರಾಜ್ಯದಲ್ಲೇ ಕನಿಷ್ಠ ತಾಪಮಾನ

ಈ ನಡುವೆ, 8 ಸಾವಿರ ಮಂದಿ ಗುಣಮುಖ ಆಗುವುದರೊಂದಿಗೆ ಸಕ್ರಿಯ ಪ್ರಕರಣಗಳು 79,097ಕ್ಕೆ ಇಳಿದಿದ್ದು, ಇದು 574 ದಿನಗಳ (19 ತಿಂಗಳ) ಕನಿಷ್ಠವಾಗಿದೆ. ಇದು ಒಟ್ಟು ಪ್ರಕರಣಗಳಲ್ಲಿ ಶೇ.0.23ರಷ್ಟಿದೆ. ಕಳೆದ 54 ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ. 0.53ರಷ್ಟಿದೆ. ಒಟ್ಟು 3.47 ಕೋಟಿ ಪ್ರಕರಣ ದಾಖಲಾಗಿದ್ದು, ಒಟ್ಟು 4.78 ಲಕ್ಷಕ್ಕೆ ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,170 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 138.35 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

 

Follow Us:
Download App:
  • android
  • ios