ಫಿಲಿಪೈನ್ಸ್ನ ಮನಿಲಾ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ನಡೆ ಭಾರತೀಯರು ಮಾತ್ರವಲ್ಲ, ಖುದ್ದು ಡೋನಾಲ್ಡ್ ಟ್ರಂಪ್ ಮೆಚ್ಚುಗೆಗೆ ಪಾತ್ರವಾಗಿದೆ. ನೆಲದ ಮೇಲಿಟ್ಟಿದ್ದ ಭಾರತದ ಧ್ವಜ ಎತ್ತಿಕೊಂಡ ಮೋದಿ ಜೋಪಾನವಾಗಿ ಇಟ್ಟಿದ್ದಾರೆ.
ಮನಿಲಾ (ನ.17) ಫಿಲಿಪೈನ್ಸ್ನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೇರಿದಂತೆ ಕ್ವಾಡ್ ನಾಯಕರು ಮನಿಲಾ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ನಡೆದ ಗ್ರೂಪ್ ಫೋಟೋ ವೇಳೆ ಪ್ರಧಾನಿ ಮೋದಿ, ನೆಲದ ಮೇಲೆಟ್ಟಿದ್ದ ಭಾರತದ ತ್ರಿವರ್ಣ ಧ್ವಜ ಎತ್ತಿಕೊಂಡು ಜೋಪಾನವಾಗಿಟ್ಟಿದ್ದಾರೆ. ಮೋದಿ ಪಕ್ಕದಲ್ಲಿದ್ದ ಡೋನಾಲ್ಡ್ ಟ್ರಂಪ್ ಮೆಚ್ಚುಗೆ ಸೂಚಿಸಿದ ಘಟನೆ ನಡೆದಿದೆ.
ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಆಯೋಜಿಸಿದ ಕ್ವಾಡ್ ಶೃಂಗಸಭೆಯಲ್ಲಿ ಈ ಘಟನೆ ನಡೆದಿದೆ. ಕ್ವಾಡ್ ನಾಯಕರು ಗ್ರೂಪ್ ಫೋಟೋ ಸೆಶನ್ಗೆ ವೇದಿಕೆ ಸಜ್ಜುಗೊಳಿಸಲಾಗಿತ್ತು ನಾಯಕರು ಎಲ್ಲಿ ನಿಲ್ಲಬೇಕು ಅನ್ನೋದು ಗುರುತಿಸಲು ಕ್ವಾಡ್ ಶೃಂಗಸಭೆ ಆಯೋಜಕರು ಆಯಾ ದೇಶದ ರಾಷ್ಟ್ರ ಧ್ವಜವನ್ನು ನೆಲದ ಮೇಲೆ ಇಟ್ಟಿದ್ದರು. ಮೋದಿ, ಡೋನಾಲ್ಡ್ ಟ್ರಂಪ್ ಸೇರಿ ಕ್ವಾಡ್ ನಾಯಕರು ಗ್ರೂಪ್ ಫೋಟೋಗೆ ಆಗಮಿಸಿದಾಗ ಭಾರತದ ರಾಷ್ಟ್ರ ಧ್ವಜ ನೆಲದ ಮೇಲಿರುವುದು ಮೋದಿ ಗಮನಿಸಿದ್ದಾರೆ. ನೆಲದ ಮೇಲೆ ಭಾರತದ ತ್ರಿವರ್ಣ ಧ್ವಜ ಇಟ್ಟಿರುವುದು ಮೋದಿ ಸರಿ ಕಂಡಿಲ್ಲ. ಹೀಗಾಗಿ ತಕ್ಷಣವೇ ನೆಲದ ಮೇಲಿಟ್ಟಿದ್ದ ತ್ರಿವರ್ಣ ಧ್ವಜವನ್ನು ಮೋದಿ ಎತ್ತಿಕೊಂಡಿದ್ದಾರೆ.
ಜೋಪಾನವಾಗಿಡಿ ಎಂದ ಟ್ರಂಪ್
ಧ್ವಜ ಎತ್ತಿಕೊಂಡ ಮೋದಿ ಬಳಿಕ ಜೇಬಿನಲ್ಲಿ ಇಟ್ಟಿದ್ದಾರೆ. ಇದೇ ವೇಳೆ ಡೋನಾಲ್ಡ್ ಟ್ರಂಪ್ ಜೋಪಾನವಾಗಿಟ್ಟುಕೊಳ್ಳಿ ಎಂದಿದ್ದಾರೆ. ಇಷ್ಟೇ ಅಲ್ಲ ಮೋದಿಯನ್ನು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಮೋದಿಗೆ ತ್ರಿವರ್ಣ ಧ್ವಜ ಮೇಲಿನ ಗೌರ ಪ್ರೀತಿಯನ್ನು ಜನ ಕೊಂಡಾಡಿದ್ದಾರೆ.
ಮೋದಿ ತುಂಬಾ ಟಫ್ ಎಂದ ಟ್ರಂಪ್
ಮನಿಲಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಜೊತೆಗೆ ಡೋನಾಲ್ಡ್ ಟ್ರಂಪ್ ಹಲವು ದ್ವಿಪಕ್ಷೀಯ ವಿಷಗಳ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿ ಅತ್ಯಂತ ಕಠಿಣ ವ್ಯಕ್ತಿ. ಜೊತೆಗೆ ದೃಢ ನಿರ್ಧಾರ ಹೊಂದಿದ್ದಾರೆ. ಹೀಗಾಗಿ ಮೋದಿ ತುಂಬಾ ಟಫ್ ವ್ಯಕ್ತಿ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಕ್ವಾಡ್ ನಾಯಕರ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.
ಮನಿಲಾದಲ್ಲಿ ಕ್ವಾಡ್ ಶೃಂಗಸಭೆ ಕುರಿತು ಮಾತನಾಡಿದ ಮೋದಿ, ಎಲ್ಲಾ ನಾಯಕರ ಭೇಟಿಯಾಗುತ್ತಿರುವುದ ಸಂತಸ ತಂದಿದೆ ಎಂದಿದ್ದಾರೆ. 2007ರಲ್ಲಿ ಆರಂಭಗೊಂಡ ಕ್ವಾಡ್ ಬಳಿಕ 2017ರಲ್ಲಿ ಸಭೆ ಸೇರಲಾಯಿತು. ಇದೀಗ ನಡೆದ ಸಭೆ ಅತ್ಯಂತ ಮಹತ್ವದ ಪಡೆದುಕೊಂಡಿದೆ. ಐತಿಹಾಸಿಕ ನಗರದಲ್ಲಿ ಕ್ವಾಡ್ ಸಭೆ ನಡೆಯುತ್ತಿರುವುದು ಮೈಲಿಗಲ್ಲು ಎಂದು ಮೋದಿ ಹೇಳಿದ್ದಾರೆ. ಪೆಸಿಫಿಕ್ ವಲಯದಲ್ಲಿ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವರು ಸತತವಾಗಿ ಸಭೆ ನಡೆಸುತ್ತಿದ್ದಾರೆ. ಕ್ವಾಡ್ ಪಾಲುದಾರಿಕೆಯಲ್ಲಿ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದ್ದಾರೆ.










