ವೈದ್ಯಕೀಯ ಅಚ್ಚರಿ: 3ನೇ ಹಂತದ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆ ಸಂಪೂರ್ಣ ಗುಣಮುಖ
3ನೇ ಹಂತದ ಕರುಳಿನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ವೇಲ್ಸ್ ದೇಶದ ಮಹಿಳೆಯೊಬ್ಬರು ಡೋಸ್ಟರ್‌ಲಿಮಬ್ ಎಂಬ ಔಷಧಿಯನ್ನು ಸೇವಿಸಿದ ನಂತರ ಅಚ್ಚರಿ ಎಂಬಂತೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ವೇಲ್ಸ್: 3ನೇ ಹಂತದ ಕರುಳಿನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ವೇಲ್ಸ್ ದೇಶದ ಮಹಿಳೆಯೊಬ್ಬರು ಡೋಸ್ಟರ್‌ಲಿಮಬ್ ಎಂಬ ಔಷಧಿಯನ್ನು ಸೇವಿಸಿದ ನಂತರ ಅಚ್ಚರಿ ಎಂಬಂತೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಒಂದು ವೇಳೆ ಇದು ನಿಜವಾಗಿದ್ದಲ್ಲಿ ವೈದ್ಯಕೀಯ ಲೋಕದಲ್ಲಿ ಇದೊಂದು ದೊಡ್ಡ ಸಾಧನೆಯೇ ಆಗಲಿದೆ.
ವೇಲ್ಸ್‌ನ 42 ವರ್ಷದ ಕ್ಯಾರಿ ಡೌನಿ (Carrie Downey) ಎಂಬ ಮಹಿಳೆ ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ ಕಳೆದ ಆರು ತಿಂಗಳಿಂದ ಇವರು ಡೊಸ್ಟರ್ಲಿಮಬ್ ಎಂಬ ಔಷಧಿಯೊಂದನ್ನು ಸೇವನೆ ಮಾಡುತ್ತಿದ್ದು, ಇದಾದ ನಂತರ ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕ್ಯಾರಿ ಡೌನಿ ಅವರು ಬ್ರಿಟನ್ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದು, ಮತ್ತೆ ಕೆಲಸಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ರೇಡಿಯೇಷನ್ ಹಾಗೂ ಕಿಮೋಥೆರಪಿಯ ಜೊತೆ ಜೊತೆಗೆ ಡೊಸ್ಟರ್ಲಿಮಬ್ ಎಂಬ ಔಷಧಿಯನ್ನು ಅವರಿಗೆ ನೀಡಲಾಗುತ್ತಿತ್ತು.
ನಮ್ಮ ಯುದ್ಧ ನಾವೇ ಮಾಡುತ್ತೇವೆ: ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟದೇಶ ಇಸ್ರೇಲ್‌ನ ಆತ್ಮವಿಶ್ವಾಸದ ನುಡಿ
ಅಲ್ಲದೇ ಅವರಿಗೆ ಕೊನೆಹಂತದ ಕರುಳಿನ ಕ್ಯಾನ್ಸರ್ (colorectal cancer) ಇದೇ ಎಂಬುದನ್ನು ಪರೀಕ್ಷೆಗಳು ತೋರಿಸಿದ್ದವು. ಆದರೆ ಈಗ ಅವರ ದೇಹದಲ್ಲಿ ಅಂತಹ ಯಾವ ಕಾಯಿಲೆಗಳ ಲಕ್ಷಣವೂ ಇಲ್ಲ ಎಂಬುದನ್ನು ವೈದ್ಯರು ತಪಾಸಣೆಗಳಿಂದ ಖಚಿತಪಡಿಸಿದ್ದು ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.
ಡೊಸ್ಟರ್ಲಿಮಬ್ ಹಿಎಕ್ಸ್‌ಎಲ್‌ವೈ ಎಂಬ ಇಂಜೆಕ್ಷನ್ ಮೊನೊಕ್ಲೋನಲ್ ಆಂಟಿಬಾಡಿಸ್ (monoclonal antibodies) ಎಂಬ ಔಷಧಿಗಳ ವರ್ಗದಲ್ಲಿದೆ, ಇದು ಕ್ಯಾನ್ಸರ್ ಕೋಶಗಳಲ್ಲಿ ನಿರ್ದಿಷ್ಟ ಪ್ರೋಟೀನ್‌ನ ಕ್ರಿಯೆಯನ್ನು ತಡೆಯುವ ಮೂಲಕ ಕಾರ್ಯನಿರ್ವಹಿಸುತ್ತದೆ. ಔಷಧವು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಮತ್ತು ಗೆಡ್ಡೆಯ ಬೆಳವಣಿಗೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.
ಹೆಂಗಸರು ಮಕ್ಕಳ ಮೇಲೆ ಹಮಾಸ್ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು
ಅಲ್ಲದೇ ಈ ಇಂಜೆಕ್ಷನ್‌ನಿಂದ ಸಣ್ಣಪುಟ್ಟ ತುರಿಕೆ ಹುಣ್ಣುಗಳ ಹೊರತಾಗಿ ನನಗೆ ಹೆಚ್ಚೇನು ಸೈಡ್ ಎಫೆಕ್ಟ್‌ಗಳು ಆಗಿಲ್ಲ ಎಂದು ಅವರು ಕ್ಯಾರಿ ಡೌನಿ ಹೇಳಿದ್ದಾರೆ. ತಜ್ಞರ ಪ್ರಕಾರ, ಡೊಸ್ಟರ್ಲಿಮಬ್, ಕರುಳಿನ ಕ್ಯಾನ್ಸರ್‌ನ ನಿರ್ದಿಷ್ಟ ರೂಪಾಂತರವನ್ನು ನಿಖರವಾಗಿ ಗುರಿಪಡಿಸುತ್ತದೆ ಮತ್ತು ಇದೊಂದು ಚಿಕಿತ್ಸೆಯ ಪ್ರಾಯೋಗಿಕ ಡ್ರಗ್ ಆಗಿದ್ದರೂ, ಧನಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ, ಇದರಲ್ಲಿ ರೋಗಿಗಳ ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಚಿಕಿತ್ಸೆ ಕಡಿಮೆ ಆಗಿದೆ.
ಇಸ್ರೇಲ್‌ನಲ್ಲಿ ಸಿಲುಕಿದ್ದ ಏರ್ ಇಂಡಿಯಾ ಸಿಬ್ಬಂದಿ ರಕ್ಷಣೆ: ಅ.14ರವರೆಗೆ ವಿಮಾನ ಸಂಚಾರ ರದ್ದು
ಈ ಡೊಸ್ಟರ್ಲಿಮಬ್ (Dostarlimab) ಇಂಜೆಕ್ಷನ್ ಕ್ಯಾನ್ಸರ್ ಗೆಡ್ಡೆಗಳ (tumour) ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ಪ್ರತಿಬಂಧಿಸುತ್ತದೆ. ಎರಡು ಹಾಗೂ ಮೂರನೇ ಹಂತದ ಕರುಳಿನ ಕ್ಯಾನ್ಸರ್‌ನೊಂದಿಗೆ ಹೋರಾಡುವ ರೋಗಿಗಳಿಗೆ ಇದನ್ನು ನೀಡಲಾಗುತ್ತದೆ.
ಈಗ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಕ್ಯಾರಿ ಡೌನಿ ಅವರಿಗೆ ಆರು ತಿಂಗಳವರೆಗೆ ಸತತವಾಗಿ ವಾರಕ್ಕೆ ಮೂರು ಬಾರಿ ನರಕ್ಕೆ ಇಂಜೆಕ್ಷನ್ ಮೂಲಕ ನೀಡಲಾಗಿತ್ತು. ಇವರ ಆರೋಗ್ಯದ ಪ್ರಗತಿಯನ್ನು ನೋಡಲು ಸ್ವತಃ ವೈದ್ಯರು ನಿಯಮಿತವಾಗಿ ಆಕೆಗೆ ಸ್ಕ್ಯಾನ್ ಮಾಡಿ ಗಮನಿಸುತ್ತಿದ್ದರು. ಈ ವೇಳೆ ಗಡ್ಡೆಯೂ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಮತ್ತು ಚಿಕಿತ್ಸೆಯ ಅಂತ್ಯದ ವೇಳೆ ಸಂಪೂರ್ಣ ಗುಣಮುಖರಾಗಿದೆ ಎಂದು ವೈದ್ಯರು ಹೇಳಿದ್ದಾಗಿ ಕ್ಯಾರಿ ಡೌನಿ ಹೇಳಿದ್ದಾರೆ. ವೈದ್ಯರ ಪ್ರಕಾರ ಈ ಡೋಸ್ಟರ್‌ಲಿಮಬ್ ಔಷಧಿಯನ್ನು ಕಳೆದ ವರ್ಷ ಗುದನಾಳದ ಕ್ಯಾನ್ಸರ್‌ನಿಂದ (rectal cancer) ಬಳಲುತ್ತಿದ್ದ ಇತರ 18 ರೋಗಿಗಳಿಗೂ 6 ತಿಂಗಳ ಕಾಲ ನೀಡಲಾಗಿತ್ತು. ಹಾಗೂ ಅವರೆಲ್ಲರೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.