ಬರ್ತ್‌ಡೇಗೆ ವಿಶ್ ಮಾಡಿ ಅಂತ ಎಮರ್ಜೆನ್ಸಿ ನಂಬರ್‌ಗೆ ಕಾಲ್ ಮಾಡಿದ ವ್ಯಕ್ತಿ, ಮನೆಗೆ ಬಂದ ಪೊಲೀಸರು ಮಾಡಿದ್ದೇನು?
ಬರ್ತ್‌ಡೇ ದಿನ ಎಲ್ಲರೂ ನಮ್ಗೆ ವಿಶ್ ಮಾಡ್ಬೇಕು ಅಂತ ಪ್ರತಿಯೊಬ್ಬರೂ ಅಂದುಕೊಳ್ತಾರೆ. ಆದ್ರೆ ಕೆಲವೊಬ್ಬರಿಗೆ ಫ್ರೆಂಡ್ಸ್, ರಿಲೇಟಿವ್ಸ್ ಯಾರೂ ವಿಶ್ ಮಾಡೋದಿಲ್ಲ. ಹೀಗೆ ಇಲ್ಲೊಬ್ಬ ವ್ಯಕ್ತಿ ಬರ್ತ್‌ಡೇ ದಿನ ತನಗೆ ಯಾರೂ ವಿಶ್ ಮಾಡಿಲ್ಲಾಂತ ಎಮರ್ಜೆನ್ಸಿ ನಂಬರ್‌ಗ ಕಾಲ್ ಮಾಡಿದ್ದಾನೆ. ಮನೆಗೆ ಬಂದ ಪೊಲೀಸರು ಮಾಡಿದ್ದೇನು ಗೊತ್ತಾ?
ಬರ್ತ್‌ಡೇ ದಿನ ಎಲ್ಲರೂ ನಮ್ಗೆ ವಿಶ್ ಮಾಡ್ಬೇಕು ಅಂತ ಪ್ರತಿಯೊಬ್ಬರೂ ಅಂದುಕೊಳ್ತಾರೆ. ಕೆಲವೊಬ್ಬರಿಗೆ ಫ್ರೆಂಡ್ಸ್, ರಿಲೇಟಿವ್ಸ್ ಅಂತ ಎಲ್ರೂ ವಿಶ್ ಮಾಡ್ತಾರೆ. ಮತ್ತೆ ಕೆಲವರಿಗೆ ಯಾರೂ ಮಾಡೋದಿಲ್ಲ. ಹೀಗಾದಾಗ ಯಾರಿಗಾದರೂ ಬೇಸರವಾಗೋದು ಖಂಡಿತ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಬರ್ತ್‌ಡೇ ದಿನ ತನಗೆ ಯಾರೂ ವಿಶಲ್ ಮಾಡಿಲ್ಲಾಂತ ಎಮರ್ಜೆನ್ಸಿ ನಂಬರ್‌ಗ ಕಾಲ್ ಮಾಡಿದ್ದಾನೆ. ಎಮರ್ಜೆನ್ಸಿ ಸಂಖ್ಯೆ 911ಗೆ ಕಾಲ್ ಮಾಡಿ 'ಹ್ಯಾಪಿ ಬರ್ತ್‌ಡೇ' ವಿಶ್ ಮಾಡಿ ಎಂದು ಪೊಲೀಸರು ಕೇಳಿದ್ದಾನೆ. ವ್ಯಕ್ತಿಯ ಕರೆ ಸ್ವೀಕರಿಸಿದ ಪೊಲೀಸರು ಮಾಡಿದ್ದೇನು ನೋಡಿ.
ವ್ಯಕ್ತಿಯ ಕಾಲ್ ಸ್ವೀಕರಿಸಿದ ಪೊಲೀಸರು ತಕ್ಷಣ ಮನೆಗೆ ಬಂದರು. ಆದರೆ ಅವರು ಬರಿಗೈಲಿ ಬಂದಿರಲ್ಲಿಲ್ಲ. ಬದಲಿಗೆ ಬರ್ತ್‌ಡೇ ಕೇಕ್‌ನ್ನು ಸಹ ತಂದಿದ್ದರು. ಮಾತ್ರವಲ್ಲ ಆತನಿಗಾಗಿ ಬರ್ತ್‌ಡೇ ಸಾಂಗ್‌ನ್ನು ಸಹ ಹಾಡಿದರು.
ಬರ್ತ್‌ಡೇ ಪಾರ್ಟಿಯಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ ವೃದ್ಧರು; ವಿಡಿಯೋ ವೈರಲ್
ತುರ್ತು ಪರಿಸ್ಥಿತಿ ಇಲ್ಲದಿದ್ದಾಗ ಎಮರ್ಜೆನ್ಸಿ ನಂಬರ್‌ಗೆ ಡಯಲ್ ಮಾಡುವುದು ತಪ್ಪಾಗಿದ್ದರೂ ಪೊಲೀಸರು ಯುವಕನಿಗೇ ಏನೂ ಹೇಳಲ್ಲಿಲ್ಲ. ಯಾಕೆಂದರೆ 25 ವರ್ಷದ ಯುವಕನ ಜೊತೆ ತನ್ನ ಜನ್ಮದಿನವನ್ನು ಆಚರಿಸಲು ಜೊತೆಯಲ್ಲಿ ಯಾರೂ ಇಲ್ಲದಿರುವುದು ನಿಜವಾಗಲೂ ಸಮಸ್ಯೆಯೆಂದು ಪೊಲೀಸರು ಅಭಿಪ್ರಾಯಪಟ್ಟರು. ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯನ್ನು ಕ್ರಿಸ್ ಎಂದು ಗುರುತಿಸಲಾಗಿದೆ. ಪೊಲೀಸರು ಸಂಪೂರ್ಣ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ನೂರಾರು ಜನರು ಕ್ರಿಸ್‌ಗೆ 'ಜನ್ಮದಿನದ ಶುಭಾಶಯಗಳು' ಎಂದು ವಿಶ್ ಮಾಡಲು ಕಾರಣವಾಯಿತು.
ಆರಂಭದಲ್ಲಿ ಪೊಲೀಸರು ಈ ಕರೆಯನ್ನು ಸ್ವೀಕರಿಸಿ ಯಾರೋ ಪ್ರಾಂಕ್ ಕಾಲ್ ಮಾಡಿದ್ದಾರೆ ಎಂದು ಅಂದುಕೊಂಡರು. ನಂತರ ತಂಡದ ಇತರ ಸದಸ್ಯರು ಇದು ಕ್ರಿಸ್‌ನ ಜನ್ಮದಿನ ಎಂದು ಖಚಿತಪಡಿಸಿದರು. ವೈರಲ್ ಆದ ವೀಡಿಯೋದಲ್ಲಿ ಪೊಲೀಸರು ಕ್ರಿಸ್‌ಗಾಗಿ ಹ್ಯಾಪಿ ಬರ್ತ್‌ಡೇ ಹಾಡನ್ನು ಹಾಡುವುದನ್ನು ನೋಡಬಹುದು. ಕ್ರಿಸ್ ಖುಷಿಯಿಂದ ಪೊಲೀಸರನ್ನು ಹಗ್ ಮಾಡುವುದನ್ನು ಸಹ ನೋಡಬಹುದು.