Asianet Suvarna News Asianet Suvarna News

ಬರ್ತ್‌ಡೇ ಪಾರ್ಟಿಯಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ ವೃದ್ಧರು; ವಿಡಿಯೋ ವೈರಲ್

'ಮೈನ್ ನಾಗಿನ್ ತು ಸಪೇರಾ' ಹಾಡಿಗೆ ಮಹಿಳೆ ಡ್ಯಾನ್ಸ್ ಮಾಡುತ್ತಿದ್ದು, ಇಬ್ಬರು ಹಿರಿಯ ವಯಸ್ಕರು ಕೂಡಾ ನೃತ್ಯ ಮಾಡಿದ್ದು ವೈರಲ್ ಆಗಿದೆ.

This Nagin dance performance at a birthday bash has taken Internet by storm skr
Author
First Published Apr 27, 2024, 6:17 PM IST

ಈ ವೈರಲ್ ವೀಡಿಯೋ ನೋಡಿದ ಜನರು ವಯಸ್ಸು ಕೇವಲ ಸಂಖ್ಯೆ ಎಂದು ಹೇಳುತ್ತಿದ್ದಾರೆ. 

ಈ ಕ್ಲಿಪ್ ವೈರಲ್ ಆಗಲು ಕಾರಣ ಮಹಿಳೆಯೊಂದಿಗೆ ಇಬ್ಬರು ಹಿರಿಯರ ಹುರುಪಿನ ನೃತ್ಯ. ವಾಸ್ತವವಾಗಿ, ಡಿಜೆಯಲ್ಲಿ ನಾಗಿನ್ ಹಾಡು ಪ್ಲೇ ಆಗುತ್ತಿತ್ತು. ಮಹಿಳೆ ನೃತ್ಯ ಮಾಡುತ್ತಿದ್ದಾಗ, ಇಬ್ಬರು ಹಿರಿಯ ವಯಸ್ಸಿನವರು ಫುಲ್ ಜೋಶ್‌ನಲ್ಲಿ ಕುಣಿದಿದ್ದಾರೆ. ಅದರಲ್ಲೂ ಒಬ್ಬರು ನೆಲದ ಮೇಲೆ ಬಿದ್ದು, ಹಾವಿನಂತೆ ಬಳುಕುತ್ತಾ ಕುಣಿಯುತ್ತಿದ್ದಾರೆ. ಹಾವಿನಂತೆ ಕೈಗಳನ್ನು ಸುರುಳಿ ಮಾಡಿ ಸ್ಟೆಪ್ಸ್ ಹಾಕುತ್ತಿದ್ದಾರೆ. ಮಹಿಳೆ ಹಾಗೂ ಈ ಇಬ್ಬರು ಹಿರಿಯರ ನೃತ್ಯ ಜನರಿಗೆ ವಿಶೇಷ ವಿನೋದ ತಂದಿದೆ. ಇದರಿಂದಾಗಿ ಈ ವೀಡಿಯೊ ಅಂತರ್ಜಾಲದಲ್ಲಿ ಚರ್ಚೆಯ ವಿಷಯವಾಗಿದೆ.

ಈ ನೃತ್ಯ ವೀಡಿಯೊವನ್ನು @Hi_Itsok ಹೆಸರಿನ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಈಗ ಈ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ಬರೆಯುವ ಸಮಯದವರೆಗೆ, ಈ ಪೋಸ್ಟ್ 1 ಲಕ್ಷದ 55 ಸಾವಿರ ವೀಕ್ಷಣೆಗಳನ್ನು ಮತ್ತು 1 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಿದೆ.

ವರ್ಕ್ ಫ್ರಂ ಟ್ರಾಫಿಕ್; ಬೆಂಗಳೂರು ಮಹಿಳಾ ಉದ್ಯೋಗಿಯ ಪಾಡು ನೋಡಿ ಅಯ್ಯೋ ಎಂದ ನೆಟ್ಟಿಗರು
 

‘ಮೈನ್ ನಾಗಿನ್ ತು ಸಪೇರಾ...’ ಹಾಡಿಗೆ ಮಹಿಳೆಯೊಂದಿಗೆ ಕುಣಿದು ಕುಪ್ಪಳಿಸಿದ ಇಬ್ಬರು ಹಿರಿಯರನ್ನು ಕಂಡ ಜನರು ಕಾಮೆಂಟ್ ಸೆಕ್ಷನ್‌ನಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.. 
ಒಬ್ಬ ಬಳಕೆದಾರರು ವೀಡಿಯೊವನ್ನು ನೋಡುವುದು ವಿನೋದಮಯವಾಗಿದೆ ಎಂದು ಬರೆದಿದ್ದಾರೆ. ಮತ್ತೊಬ್ಬರು 'ಚೆಂದ ನೃತ್ಯ ಮಾಡಿದ್ದೀರಿ. ವಯಸ್ಸು ಕೇವಲ ಒಂದು ಸಂಖ್ಯೆ' ಎಂದು ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಬೇರೆಯವರು ತಗಾದೆ ತೆಗೆದರೆ, ಮತ್ತುಳಿದವರು ಹಿರಿಯರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಂಡುಬಂದಿದೆ.

ಎಲೆಕ್ಷನ್ ಬಂತು, ಮತ್ತೆ ಸುದ್ದಿಗೆ ಬಂದ್ರು ಹಳದಿ ಸೀರೆಯ ಎಲೆಕ್ಷನ್ ಅಧಿಕಾರಿ!
 

ಒಬ್ಬ ನೆಟ್ಟಿಗರು 'ಹಳೆ ನಾಗಗಳ ಜೊತೆ ಹೊಸ ನಾಗಿಣಿ' ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, 'ಬರ್ತ್‌ಡೇ ಪಾರ್ಟಿಯಲ್ಲಿ ನಾಗಿನ್ ಡ್ಯಾನ್ಸ್ ಮಾಡಿರುವುದನ್ನು ಇದೇ ಮೊದಲು ನೋಡುತ್ತಿದ್ದೇನೆ' ಎಂದಿದ್ದಾರೆ. 

 

Latest Videos
Follow Us:
Download App:
  • android
  • ios