Asianet Suvarna News Asianet Suvarna News

ದೇಶದ ಉಪಾಧ್ಯಕ್ಷರ ಹಣೆಗೆ ಪಿಸ್ತೂಲಿಟ್ಟ ದಾಳಿಕೋರ, ಕೊನೇ ಕ್ಷಣದಲ್ಲಿ ಜಾಮ್‌ ಆದ ಟ್ರಿಗರ್‌, ವಿಡಿಯೋ ವೈರಲ್!

ದಕ್ಷಿಣ ಅಮೆರಿಕ ದೇಶ ಅರ್ಜೆಂಟೀನಾದ ಉಪಾಧ್ಯಕ್ಷರ ಮೇಲೆ ಸಾವರ್ಜನಿಕವಾಗಿ ಶೂಟ್‌ ಮಾಡುವ ಪ್ರಯತ್ನ ನಡೆದಿದೆ. ದಾಳಿಕೋರ ನೇರವಾಗಿ ಆಕೆಯ ಹಣೆಗೆ ಬಂದೂಕಿಟ್ಟಿನಾದರೂ, ಕೊನೇ ಕ್ಷಣದಲ್ಲಿ ಟ್ರಿಗರ್‌ ಜಾಮ್‌ ಆದ ಕಾರಣಕ್ಕೆ ಹತ್ಯೆಯಿಂದ ಬಚಾವ್‌ ಆಗಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Man Detained After Pointing Gun at Argentine  vice president Cristina Fernandez de Kirchner san
Author
First Published Sep 2, 2022, 1:28 PM IST

ಬ್ಯೂನಸ್‌ ಐರೀಸ್‌ (ಸೆ 2): ದಕ್ಷಿಣ ಅಮೆರಿಕ ದೇಶ ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ರನ್ನು ಸಾರ್ವಜನಿಕವಾಗಿ ಕೊಲೆ ಮಾಡುವ ಪ್ರಯತ್ನ ವಿಫಲವಾಗಿದೆ.  ತಮ್ಮ ಮನೆಯ ಹೊರಗಡೆ ಬೆಂಬಲಿಗರಿಗೆ ಕ್ರಿಸ್ಟಿನಾ ಫೆರ್ನಾಂಡೆಜ್‌ ಕೈಕುಲುಕುವ ವೇಳೆ ಗುಂಪಿನಲ್ಲಿದ್ದ ಒಬ್ಬ ನೇರವಾಗಿ ಅವರ ಹಣೆಗೆ ಪಿಸ್ತೂಲ್‌ ಇರಿಸಿದ್ದಾನೆ. ಆದರೆ, ಟ್ರಿಗರ್‌ ಒತ್ತುವ ವೇಳೆ ಅದು ಜಾಮ್‌ ಆಗಿದ್ದರಿಂದ ಉಪಾಧ್ಯಕ್ಷೆ ಬಚಾವ್‌ ಆಗಿದ್ದಾರೆ. ತಕ್ಷಣವೇ ಇಡೀ ಪ್ರದೇಶದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಅರ್ಜೆಂಟೀನಾ ಪೊಲೀಸ್‌ ತಕ್ಷಣವೇ ಶಂಕಿತ ದಾಳಿಕೋರನನನ್ನು ಬಂಧಿಸಿದ್ದಾರೆ. ಕ್ರಿಸ್ಟಿನಾ ಫೆರ್ನಾಂಡೆಜ್‌ ಅವರನ್ನು ಕೊಲ್ಲುವ ಉದ್ದೇಶದಲ್ಲಿಯೇ ಆಕೆಯ ಹಣೆಗೆ ಗನ್‌ ಇರಿಸಿದ್ದೆ ಎಂದು ಅತ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತಾಗಿ ಅರ್ಜೆಂಟೀನಾ ಅಧ್ಯಕ್ಷ ಅಲ್ಬೆರ್ಟೋ ಫೆರ್ನಾಂಡೆಜ್‌ ಕೂಡ ಮಾತನಾಡಿದ್ದು, ಉಪಾಧ್ಯಕ್ಷರ ಕೊಲೆ ಮಾಡಲು ದಾಳಿಕೋರ ಬಳಸಿದ್ದ ಗನ್‌ನಲ್ಲಿ ಐದು ಬುಲೆಟ್‌ಗಳು ಪತ್ತೆಯಾಗಿದೆ. ಟ್ರಿಗರ್‌ ಜಾಮ್‌ ಆದ ಕಾರಣಕ್ಕಾಗಿ ಆತನಿಗೆ ಶೂಟ್‌ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಕೂದಲೆಳೆಯ ಅಂತರದಲ್ಲಿ ಕ್ರಿಸ್ಟಿನಾ ಫೆರ್ನಾಂಡೆಜ್‌ ಬಚಾವ್‌ ಆಗಿದ್ದಾರೆ. ಆರೋಪಿ ಬ್ರೆಜಿಲ್ ನಿವಾಸಿ ಎಂದುತಿಳಿದುಬಂದಿದ್ದು, ಆತ ಹೆಸರು ಫರ್ನಾಂಡೋ ಆಂಡ್ರೆ ಸಬಾಗ್ ಮೊಂಟಿಯೆಲ್ ಎನ್ನಲಾಗಿದೆ.


ಗುರುವಾರ ರಾತ್ರಿ ನಡೆದ  ಘಟನೆ ಇದಾಗಿದೆ. ಕ್ರಿಸ್ಟಿನಾ ತನ್ನ ಮನೆಯ ಹೊರಗೆ ಬೆಂಬಲಿಗರನ್ನು ಮಾತನಾಡಿಸುವ ಸಲುವಾಗಿ ಬಂದಿದ್ದು. ಅದೇ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಕ್ರಿಸ್ಟಿನಾ ಅವರ ಹಣೆಗೆ ಪಿಸ್ತೂಲ್‌ ಇರಿಸಿದ್ದಾನೆ. ಅಕ್ಕಪಕ್ಕದಲ್ಲಿದ್ದವರು ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಅರ್ಜೆಂಟೀನಾದ (Argentina) ಭದ್ರತಾ ಸಚಿವರು, ಸ್ಥಳೀಯ ಸುದ್ದಿ ಚಾನೆಲ್ ಸಿ5ಎನ್‌ಗೆ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.. ದಾಳಿಕೋರರು ಉಪಾಧ್ಯಕ್ಷರ ಮುಖದ ಹತ್ತಿರ ಬಂದೂಕನ್ನು ತೋರಿಸಿದ್ದ. ಘಟನೆ ವೇಳೆ ಗೊಂದಲ ಉಂಟಾಗಿತ್ತು. ಶಂಕಿತನು ಕ್ರಿಸ್ಟಿನಾ ಮುಂದೆ ಕಾಣಿಸಿಕೊಂಡ ತಕ್ಷಣ ಅವನ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. ದಾಳಿಕೋರನನ್ನು ಬಂಧಿಸಲಾಗಿದೆ. ಕ್ರಿಸ್ಟಿನಾ 2007-2015ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಈ ವೇಳೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಕ್ರಿಸ್ಟಿನಾ ವಿರುದ್ಧ ನಡೆಯುತ್ತಿರುವ ಪ್ರಕರಣವನ್ನು ವಿರೋಧಿಸಿ ಅವರ ಬೆಂಬಲಿಗರು ಮನೆಯ ಹೊರಗೆ ಜಮಾಯಿಸಿದ್ದರು.

ದಿ ಅಸೋಸಿಯೇಟೆಡ್‌ ಪ್ರೆಸ್‌ ಪ್ರತ್ಯಕ್ಷದರ್ಶಿಯನ್ನು ಮಾತನಾಡಿಸಿದೆ. ಜಿನೆ ಡೆ ಬೈ ಎನ್ನುವ ಮಹಿಳೆ ಈ ಕುರಿತಾಗಿ ಮಾತನಾಡಿದ್ದು, ಆತ ಟ್ರಿಗರ್‌ ಒತ್ತಿದ ಶಬ್ದವನ್ನು ನಾನು ಕೇಳಿದ್ದೆ. ಆದರೆ, ಆ ಬಳಿಕ ಒಂದು ಕ್ಷಣದಲ್ಲಿ ಏನಾಯಿತು ಎನ್ನುವುದು ನನಗೆ ಗೊತ್ತಾಗಲಿಲ್ಲ. ಇಡೀ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದಿದ್ದಾರೆ. 1983 ರಲ್ಲಿ ಮಿಲಿಟರಿ ಸರ್ವಾಧಿಕಾರದ ನಂತರ, ನಾವು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಬಳಿಕ ನಡೆದ ಅತ್ಯಂತ ಗಂಭೀರ ಪ್ರಮಾಣದ ಹತ್ಯೆಯ ಘಟನೆ ಎಂದು ಅಧ್ಯಕ್ಷ ಅಲ್ಬರ್ಟೋ ಫೆರ್ನಾಂಡಿಜ್‌ (President Alberto Fernández) ಹೇಳಿದ್ದಾರೆ.

ಜಪಾನ್ ಮಿಲಿಟರಿಯ ಮೇಲಿದ್ದ ಸಾಂವಿಧಾನಿಕ ನಿರ್ಬಂಧ ತೆರವು: ಶಿಂಜೋ ಅಬೆಗೆ ಸೂಕ್ತ ಶ್ರದ್ಧಾಂಜಲಿ!

ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್, ವೆನೆಜುವೆಲಾದ ನಿಕೋಲಸ್ ಮಡುರೊ, ಪೆರುವಿನ ಪೆಡ್ರೊ ಕ್ಯಾಸ್ಟಿಲ್ಲೊ ಮತ್ತು ಬ್ರೆಜಿಲ್ ಅಧ್ಯಕ್ಷೀಯ ಅಭ್ಯರ್ಥಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸೇರಿದಂತೆ ನೆರೆಯ ರಾಷ್ಟ್ರಗಳ ನಾಯಕರು ದಾಳಿಯನ್ನು ಖಂಡಿಸಿದ್ದಾರೆ ಮತ್ತು ಫರ್ನಾಂಡೀಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೊಂಟಿಯೆಲ್ ಹೆಸರಲ್ಲಿ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ..32-ಕ್ಯಾಲಿಬರ್ ಬರ್ಸಾ ಪಿಸ್ತೂಲ್ ಅನ್ನು ಆತ ಬಳಸಿದ್ದ ಎನ್ನುವ ಮಾಹಿತಿ ಸಿಕ್ಕಿದೆ.

ಜಗತ್ತನ್ನೇ ಬೆಚ್ಚಿ ಬೀಳಿಸಿದ 10 ಮಹಾ ನಾಯಕರ ಹತ್ಯೆಗಳು!

ಭ್ರಷ್ಟಾಚಾರ ಆರೋಪ ಹೊತ್ತಿರುವ ಕ್ರಿಸ್ಟಿನಾ: ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್  (Cristina Fernández de Kirchner ) 2007 ಮತ್ತು 2015 ರ ನಡುವೆ ಎರಡು ಅವಧಿಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅರ್ಜೆಂಟೀನಾ ರಾಜಕೀಯದ ಪ್ರಬಲ ವ್ಯಕ್ತಿ ಎನಿಸಿದ್ದಾರೆ. ರಾಜಕೀಯವಾಗಿ ಪ್ರಬಲ ಮತ್ತು ಪ್ರಭಾವಿ ಅರ್ಜೆಂಟೀನಾದ ಉಪಾಧ್ಯಕ್ಷರು ಭ್ರಷ್ಟಾಚಾರ ಆರೋಪದ ಮೇಲೆ ವಿಚಾರಣೆಯಲ್ಲಿದ್ದಾರೆ. ಅವರು 12 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬಹುದು ಮತ್ತು ಕಾನೂನುಬಾಹಿರವಾಗಿ ನೀಡಿದ ಸಾರ್ವಜನಿಕ ಗುತ್ತಿಗೆಗಳ ಮೇಲೆ ಸಾರ್ವಜನಿಕ ಕಚೇರಿಯಿಂದ ಅನರ್ಹಗೊಳ್ಳುವ ಆತಂಕದಲ್ಲಿದ್ದಾರೆ.

Follow Us:
Download App:
  • android
  • ios