ಲಂಡನ್‌(ಆ.23): ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುತ್ತಿದ್ದಾಗ ಬಳಕೆ ಮಾಡುತ್ತಿದ್ದ ಎರಡು ಬಂಗಾರ ಲೇಪಿತ ಕನ್ನಡಕಗಳು ಬರೋಬ್ಬರಿ 2.55 ಕೋಟಿ ರು.ಗೆ ಹರಾಜಾಗಿದೆ. ಇಂಗ್ಲೆಂಡ್‌ನ ಈಸ್ಟ್‌ ಬ್ರಿಸ್ಟಲ್‌ ಆಕ್ಷನ್‌ ಸಂಸ್ಥೆಯಲ್ಲಿದ್ದ ಈ ಕನ್ನಡಕಗಳನ್ನು ಶುಕ್ರವಾರ ಹರಾಜು ಹಾಕಲಾಗಿದೆ.

ಬೆಂಕಿ ಹೊತ್ತಿಸಿದ ಗೋಡ್ಸೆ ಬರ್ತಡೆ, ಬಿಜೆಪಿ ಮೇಲೆ ಕಾಂಗ್ರೆಸ್ ಅಟ್ಯಾಕ್

ಆನ್‌ಲೈನ್‌ ಮೂಲಕ ಹರಾಜು ಪ್ರಕ್ರಿಯೆ ನಡೆದಿದ್ದು, 2.55 ಕೋಟಿ ರು.ಬಿಡ್‌ ಸಲ್ಲಿಸುವ ಮೂಲಕ ವ್ಯಕ್ತಿಯೊಬ್ಬರು ಗಾಂಧೀಜಿಯವರ ಕನ್ನಡಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಈ ಕನ್ನಡಕಗಳನ್ನು ಕೆಲ ದಿನಗಳ ಹಿಂದೆ ಅನಾಮಿಕ ವ್ಯಕ್ತಿಯೊಬ್ಬರು, ಖ್ಯಾತ ಹರಾಜುಗಾರ ಆ್ಯಂಡ್ರ್ಯೂ ಸ್ಟೋವ್‌ ಅವರ ಕಚೇರಿಯ ಟಪಾಲು ಬಾಕ್ಸ್‌ಗೆ ಹಾಕಿ ಹೋಗಿದ್ದರು. ಅದರಲ್ಲಿ ‘ಇದು ಮಹಾತ್ಮ ಗಾಂಧಿಯವರಿಗೆ ಸೇರಿದ ಕನ್ನಡಕ’ ಎಂದು ಒಕ್ಕಣೆ ಬರೆದು ಹಾಕಿದ್ದರು.

ಕೇರಳ ಬಜೆಟ್ ಮುಖಪುಟದಲ್ಲಿ ಗಾಂಧಿ ಹತ್ಯೆಯ ಚಿತ್ರ: ಭುಗಿಲೆದ್ದ ವಿವಾದ!

ಬಳಿಕ ಈ ಬಗ್ಗೆ ಆ್ಯಂಡ್ರ್ಯೂ ನಡೆಸಿದ ಸಂಶೋಧನೆಯಲ್ಲಿ ಇದು ಗಾಂಧಿಯದ್ದೇ ಎಂದು ಗೊತ್ತಾಗಿತ್ತು. 1920ರ ಆಸುಪಾಸಿನಲ್ಲಿ ಗಾಂಧಿ ಈ ಕನ್ನಡಕಗಳನ್ನು ಬಳಸಿದ್ದಾಗಿ ಆ್ಯಂಡ್ರ್ಯೂ ಹೇಳಿದ್ದಾರೆ. ಹಾಗಾಗಿ ಇದನ್ನು ಹರಾಜಿಗೆ ನಿರ್ಧರಿಸಿದ 14 ಲಕ್ಷ ಮೂಲ ಬೆಲೆ ನಿಗದಿ ಪಡಿಸಿದ್ದರು.