ತಿರುವನಂತಪುರಂ(ಫೆ.07): ಕೇರಳ ಸರ್ಕಾರ ತನ್ನ 2020-21ನೇ ಸಾಲಿನ ಬಜೆಟ್'ನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಬಜೆಟ್ ಪ್ರತಿಯ ಮುಖಪುಟದಲ್ಲಿ ಗಾಂಧಿ ಹತ್ಯೆಯ ಚಿತ್ರ ಮುದ್ರಿಸಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. 

ಕೇಂದ್ರ ಸರ್ಕಾರಕ್ಕೆ ಟಾಂಗ್ ಕೊಡುವ ಭರದಲ್ಲಿ ಬಜೆಟ್ ಪ್ರತಿ ಮೇಲೆ ಗಾಂಧಿ ಹತ್ಯೆಯ ಚಿತ್ರ ಮುದ್ರಸಿ ಎಡರಂಗ ಸರ್ಕಾರ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಅಲ್ಲದೇ ಬಜೆಟ್ ಪ್ರತಿ ಮೇಲೆ ಗಾಂಧಿ ಹತ್ಯೆಯ ಚಿತ್ರ ಮುದ್ರಿಸಿರುವುದು ರಾಜಕೀಯ ಉದ್ದೇಶದಿಂದ ಎಂದು ಸಚಿವ ಥಾಮಸ್ ಐಸಾಕ್‌ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಮಹಾತ್ಮಾ ಗಾಂಧಿಯ ಹತ್ಯೆಯ ಸನ್ನಿವೇಶವನ್ನು ಬಜೆಟ್ ಪ್ರತಿಯಲ್ಲಿ ಮುದ್ರಿಸಿ ಗಾಂಧಿ ಹತ್ಯೆ ಮಾಡಿದವರು ಯಾರು ಎಂಬುದನ್ನು ಮತ್ತೆ ನೆನಪಿಸುವ ಉದ್ದೇಶ ಎಂದು ಥಾಮಸ್ ಹೇಳಿದ್ದಾರೆ.

ಗಾಂಧಿ ನಿಮಗೆ ಟ್ರೇಲರ್ ಇದ್ದಂತೆ, ನಮಗೆ ಜೀವನ: ವಿಪಕ್ಷಗಳ ಕಾಲೆಳೆದ ಮೋದಿ!

ಸಿಎಎ ಹಾಗೂ ಎನ್‌ಆರ್‌ಸಿ ನೆಪದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸಮಾಜವನ್ನು ವಿಭಜಿಸುತ್ತಿದ್ದು, ಈ ಕೋಮು ವಿಭಜನಕಾರಿ ರಾಜಕೀಯ ಉದ್ದೇಶವನ್ನು ಸೋಲಿಸುವುದು ತಮ್ಮ ಗುರಿ ಎಂದು ಥಾಮಸ್ ಹೇಳಿದ್ದಾರೆ.