2026ರ ಸೂರ್ಯಗ್ರಹಣದ ಬಗ್ಗೆ ಬ್ರಹ್ಮಾಂಡ ಗುರೂಜಿ ನುಡಿದಿದ್ದ ಭವಿಷ್ಯವಾಣಿಗಳು ಸತ್ಯವಾಗುತ್ತಿವೆ. ಮಧ್ಯಪ್ರಾಚ್ಯದಲ್ಲಿ ಯುದ್ಧ, ಜಾಗತಿಕ ಆರ್ಥಿಕ ಕುಸಿತ, ಮತ್ತು ವಿಮಾನ ಹಾಗೂ ಹಡಗು ಪ್ರಯಾಣದಲ್ಲಿನ ಅಪಾಯಗಳ ಬಗ್ಗೆ ಅವರು ನೀಡಿದ್ದ ಎಚ್ಚರಿಕೆಗಳು ಇದೀಗ ನಿಜವಾಗುತ್ತಿವೆ ಎಂದು ಈ ಲೇಖನವು ವಿವರಿಸುತ್ತದೆ.
ಬೆಂಗಳೂರು (ಫೆ.28): 2026ರ ಫೆಬ್ರವರಿ 17ರಂದು ಸಂಭವಿಸಿದ್ದ ರಾಹುಗ್ರಸ್ತ ಸೂರ್ಯಗ್ರಹಣವು ಭಾರತದಲ್ಲಿ ಕಾಣಿಸದಿದ್ದರೂ, ಅದರ ಪ್ರಭಾವ ಮಾತ್ರ ಇಡೀ ಭೂಮಂಡಲವನ್ನು ನಡುಗಿಸಲಿದೆ ಎಂದು ಜ್ಯೋತಿಷಿ ಬ್ರಹ್ಮಾಂಡ ಗುರೂಜಿ ಹೇಳಿದ ಮಾತುಗಳು ಸತ್ಯವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಎರಡು ವಾರಗಳ ಹಿಂದೆ ನಡೆದ 'ಗ್ರಹಣ ಗಂಡಾಂತರ' ಕಾರ್ಯಕ್ರಮದಲ್ಲಿ ಬ್ರಹ್ಮಾಂಡ ಗುರೂಜಿ ಆರಂಭದಲ್ಲಿಯೇ ಆಡಿದ ಮಾತುಗಳು ಇಂದು ಮಧ್ಯಪ್ರಾಚ್ಯದಲ್ಲಿ ಇರಾನ್, ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧದೊಂದಿಗೆ ಅವರಾಡಿದ ಮಾತುಗಳು ಅಕ್ಷರಶಃ ನಿಜವಾಗಿದೆ. ಫೆಬ್ರವರಿಯಿಂದ ಆರಂಭವಾಗಿ ನವೆಂಬರ್ 2026ರ ಒಳಗೆ ಜಗತ್ತಿನಲ್ಲಿ ಸಾಕಷ್ಟು ಅನಾಚಾರಗಳು ಸಂಭವಿಸಲಿದೆ. ಇದೇ ಈ ಗ್ರಹಣದ ದೊಡ್ಡ ಆಪತ್ತು ಎಂದಿದ್ದರು.
ಗ್ರಹಣದ ಪ್ರಭಾವದಿಂದಾಗಿ ಭಾರತ ಮಾತ್ರವಲ್ಲದೆ ಅಮೆರಿಕ, ರಷ್ಯಾ, ಲಂಡನ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಸಂಸತ್ತಿನಲ್ಲಿ (Parliament) ಭೀಕರ ಘರ್ಷಣೆಗಳು ನಡೆಯಲಿವೆ. ಟೆರರಿಸ್ಟ್ ಅಟ್ಯಾಕ್ ಅಥವಾ ಆಂತರಿಕ ಒಪ್ಪಂದಗಳ ವಿಫಲತೆಯಿಂದಾಗಿ ದೇಶಗಳ ನಡುವೆ ಪಕ್ಷಪಾತ ಮತ್ತು ಗಲಾಟೆಗಳು ಸೃಷ್ಟಿಯಾಗಲಿವೆ ಎಂದು ಗುರೂಜಿ ಹೇಳಿದ್ದರು. ಅದರಂತೆ ಮಧ್ಯಪ್ರಾಚ್ಯ ಹಾಗೂ ಅಮೆರಿಕದಲ್ಲಿ ಘರ್ಷಣೆಗಳು ವರದಿಯಾಗಿದೆ.
ಇಡೀ ಜಗತ್ತಿನ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ (Bank Corrupt) ಕಾಲ ಹತ್ತಿರ ಬಂದಿದ್ದು, ಡಾಲರ್ ಮತ್ತು ಬ್ರಿಕ್ಸ್ (BRICS) ನಡುವಿನ ಸಂಬಂಧ ಹದಗೆಡಲಿದ್ದು, ನೋಟುಗಳ ಬದಲಾವಣೆ ಅಥವಾ ಕರೆನ್ಸಿಗಳ ಮೌಲ್ಯ ದಿಢೀರ್ ಕುಸಿಯಲಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೇರಿದಂತೆ ಜಾಗತಿಕ ಶೇರು ಮಾರುಕಟ್ಟೆಗಳು ನೆಲಕಚ್ಚಲಿವೆ. ಹರ್ಷದ್ ಮೆಹ್ತಾ ಹಗರಣದ ಮಾದರಿಯ ದೊಡ್ಡ ಆರ್ಥಿಕ ಅವಗಡಗಳು ಸಂಭವಿಸುವುದು ಶತಸಿದ್ಧ ಎಂದು ಅವರು ಭವಿಷ್ಯ ನುಡಿದಿದ್ದರು.
ಫೆಬ್ರವರಿ 25ರಿಂದ ಮಾರ್ಚ್ 25ರ ಅವಧಿಯಲ್ಲಿ ವಿಮಾನ ಪ್ರಯಾಣ ಮಾಡುವವರು ಎಚ್ಚರದಿಂದಿರಬೇಕು. ವಿಶೇಷವಾಗಿ ನೈರುತ್ಯ ಭಾಗದಿಂದ ಈಶಾನ್ಯಕ್ಕೆ (ಡೆಲ್ಲಿಯಿಂದ ಕಲ್ಕತ್ತಾ, ಸಿಂಗಾಪುರ್, ಜಪಾನ್, ನ್ಯೂಜಿಲೆಂಡ್) ಪ್ರಯಾಣಿಸುವ ವಿಮಾನಗಳಿಗೆ ಸಂಕಷ್ಟ ಕಾದಿದೆ. ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷದಿಂದಾಗಿ ವಿಮಾನಗಳು ಬ್ಲಾಸ್ಟ್ ಆಗುವ ಅಥವಾ ಪತನಗೊಳ್ಳುವ ಭೀಕರ ಅಪಘಾತಗಳು ಸಂಭವಿಸಬಹುದು ಎಂದಿದ್ದರು. ಅದರಂತೆ ಈ ಅವಧಿಯಲ್ಲಿ ಕೆಲವೆಡೆ ವಿಮಾನ ದುರಂತಗಳು ಸಂಭವಿಸಿವೆ.
ವಿಮಾನ ಪ್ರಯಾಣ ಸೂಕ್ತವಲ್ಲ ಎಂದಿದ್ದ ಗುರೂಜಿ
ಜನರು ಅತಿ ಹೆಚ್ಚಾಗಿ ಸೇರುವ ಸ್ಥಳಗಳಾದ ವಿಮಾನ ನಿಲ್ದಾಣ (Airport), ರೈಲ್ವೆ ನಿಲ್ದಾಣ, ಎಕ್ಸಿಬಿಷನ್ ಹಾಲ್‌ಗಳು, ಶಾಲಾ-ಕಾಲೇಜುಗಳು, ಉದ್ಯಮಗಳು ಮತ್ತು ದೊಡ್ಡ ಇವೆಂಟ್‌ಗಳಲ್ಲಿ ಹೆಚ್ಚಿನ ಜಾಗೃತೆ ವಹಿಸಬೇಕು. ಅಂತಹ ಜಾಗಗಳಲ್ಲಿ ಭದ್ರತೆ (Security) ಮತ್ತು ವೈಯಕ್ತಿಕ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ಬೇಡ. ಫೆಬ್ರವರಿ 25 ರಿಂದ ಮಾರ್ಚ್ 25 ರ ನಡುವೆ ಕೆಲ ದೇಶಗಳಿಗೆ ಅಥವಾ ಪ್ರದೇಶಗಳಿಗೆ ವಿಮಾನ ಪ್ರಯಾಣ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ ಅಥವಾ ಪ್ರಯಾಣದ ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳುವುದು ಉತ್ತಮ. ಈ ಸಮಯದಲ್ಲಿ ವಿಮಾನ ಅಪಘಾತಗಳು ಸಂಭವಿಸುವ ಸಾಧ್ಯತೆ ಅತಿ ಹೆಚ್ಚಿದೆ ಎಂದು ಹೇಳಿದ್ದರು. ಅದರಂತೆ ಯುದ್ಧದಿಂದಾಗಿ ವಿಶ್ವದ ವಿಮಾನಯಾನ ವ್ಯವಸ್ಥೆಯೇ ಅತಂತ್ರ ಸ್ಥಿತಿಯಲ್ಲಿದ್ದು, ಸಾವಿರಾರು ವಿಮಾನಗಳು ರದ್ದಾಗಿವೆ.
ಕೇವಲ ಆಕಾಶ ಮಾರ್ಗ ಮಾತ್ರವಲ್ಲದೆ, ಸಮುದ್ರದಲ್ಲಿ ಸಂಚರಿಸುವ ಶಿಪ್‌ಗಳಲ್ಲಿ (Ships) ಪ್ರಯಾಣಿಸುವವರು ಮತ್ತು ಜನಸಂದಣಿ ಇರುವ ಜಲಮಾರ್ಗಗಳಲ್ಲೂ ಅತೀವ ಎಚ್ಚರಿಕೆ ಅಗತ್ಯ ಎಂದಿದ್ದರು. ಇರಾನ್ ದೇಶ ತನ್ನ ಮೇಲಿನ ದಾಳಿಯ ಪ್ರತಿಯಾಗಿ ಹರ್ಮುಜ್ ಜಲಸಂಧಿಯಿಂದ ಹಾದು ಹೋಗುವ ಆಯಿಲ್ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡುತ್ತಿದೆ.



